Monday, March 22, 2021

 #ಭಕ್ತಿ 

ಎನ್ನ ಉಸಿರಲಿ ನಿನ್ನ ನಾಮಸ್ಮರಣೆಯ ಮಾಳ್ಪೆನು

ಭಕ್ತಿ ಭಾವಗಳಿಂದ ನಿನ್ನ ಪೂಜಿಪೆನು

ಮಂತ್ರ ಘೋಷಗಳನ್ನು ನಾ ಮಾಡಲರಿಯೆನು

ಯಜ್ಞ ಯಾಗಾದಿಗಳನ್ನು  ನಾ ತಿಳಿಯೆನು


ಶರಣೆಂದು ಪೂಜಿಪೆನು ನಿನ್ನ ಪಾದವ ನಾನು

ಸವಿಯುವೆನು ನಿನ್ನ ಕಥಾಮೃತವನು

ಗುಡಿಗೋಪುರಗಳನು ಕಟ್ಟಲಾರೆನು ನಾನು

ಎಲ್ಲ ನಿನ್ನದಯ್ಯ ಕೊಡಲೇನ ನಾನು


ನಿನ್ನ ನಂಬಿದೆ ನಾನು ಅನುಗ್ರಹಿಸು ದೇವಾ

ಅಜ್ಞಾನಿ ನಾನು ಕ್ಷಮಿಸಿ ಸಲಹೋ ದೇವಾ

ನಿನ್ನ ಚರಣ ಕಮಲಕ್ಕೆ ವಂದಿಪೆನು ದೇವಾ

ಸದ್ಭಕ್ತಿ ಮುಕ್ತಿಪ್ರದ ಮಾಡೆನಗೆ ದೇವಾ

🙏🙏

2 comments:

sunaath said...

ಶರಣಾಗತಿಯ ಪ್ರಾರ್ಥನೆ. ಇಂತಹ ಮನಃಸ್ಥಿತಿಯಿದ್ದಾಗ ಶರಣಾಗತವತ್ಸಲನು ಒಲಿಯದಿರುವನೆ?

ಮನಮುಕ್ತಾ said...

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.🙏🏻