ಹೀಗೆಯೇ ಬ೦ದೆ, ಕಣ್ಣರಳಿಸಿ ನೋಡಿದೆ,
ಇಲ್ಲಿಯ ಮೆರುಗ ನೋಡಿ ಬೆರಗಾದೆ,
ಹೊಸ ಹೊಸ ಮಾಹಿತಿಗಳು, ನವಿರಾದ ಕವಿತೆಗಳು,
ಸುಭಾಷಿತ ರತ್ನಗಳು, ಮನಮೋಹಕ ಚಿತ್ರಗಳು,
ಬಗೆ ಬಗೆಯ ಹೊಸ ರುಚಿಗಳು, ಹಾಸ್ಯದ ನಗೆ ಬುಗ್ಗೆಗಳು,
ಕಥೆ, ಕಿರುಗಥೆಗಳು, ವ್ಯ೦ಗ್ಯಚಿತ್ರಗಳು,
ಏನು೦ಟು ಏನಿಲ್ಲ ? ಸ೦ಭ್ರಮವೆ ಸುತ್ತೆಲ್ಲಾ,
ಅನೇಕರು ಬ೦ದರು, ನನ್ನ ಸ್ವಾಗತಿಸಿದರು,
ಕುಳ್ಳಿರಿಸಿ ಮಣೆ ಹಾಕಿದರು,
ಪ್ರೋತ್ಸಾಹದ ತುತ್ತ ನೀಡಿದರು,
ಇಲ್ಲಿ ಮನ ಎಲ್ಲರದ್ದೂ ಮುಕ್ತ,
ಬರೆದು ತಿಳಿಸುವರು ಅವರವರಿಗೆ ಸೂಕ್ತ,
ಮತ್ತೆ ಮತ್ತೆ ಬರುವರು, ಪ್ರತಿಕ್ರಿಯೆಯ ನೀಡುವರು,
ಮಾರ್ಗ ತೋರಿ ಮು೦ದೆ ಮು೦ದೆ ನಡೆಸುವರು,
ನೋಡಿಲ್ಲ, ಮಾತಾಡಿಲ್ಲ,
ಯಾರು ಯಾರೆ೦ದು ನಾ ಕಾಣೆನಲ್ಲ,
ಆದರೂ ಇಲ್ಲಿದೆ ಪರಸ್ಪರ ಬ೦ಧ,
ಅದುವೆ ಅಲ್ಲವೆ ನಮ್ಮ ಈ ಬ್ಲಾಗ್ ಬ೦ಧ?
ಇಲ್ಲಿಯ ಮೆರುಗ ನೋಡಿ ಬೆರಗಾದೆ,
ಹೊಸ ಹೊಸ ಮಾಹಿತಿಗಳು, ನವಿರಾದ ಕವಿತೆಗಳು,
ಸುಭಾಷಿತ ರತ್ನಗಳು, ಮನಮೋಹಕ ಚಿತ್ರಗಳು,
ಬಗೆ ಬಗೆಯ ಹೊಸ ರುಚಿಗಳು, ಹಾಸ್ಯದ ನಗೆ ಬುಗ್ಗೆಗಳು,
ಕಥೆ, ಕಿರುಗಥೆಗಳು, ವ್ಯ೦ಗ್ಯಚಿತ್ರಗಳು,
ಏನು೦ಟು ಏನಿಲ್ಲ ? ಸ೦ಭ್ರಮವೆ ಸುತ್ತೆಲ್ಲಾ,
ಅನೇಕರು ಬ೦ದರು, ನನ್ನ ಸ್ವಾಗತಿಸಿದರು,
ಕುಳ್ಳಿರಿಸಿ ಮಣೆ ಹಾಕಿದರು,
ಪ್ರೋತ್ಸಾಹದ ತುತ್ತ ನೀಡಿದರು,
ಇಲ್ಲಿ ಮನ ಎಲ್ಲರದ್ದೂ ಮುಕ್ತ,
ಬರೆದು ತಿಳಿಸುವರು ಅವರವರಿಗೆ ಸೂಕ್ತ,
ಮತ್ತೆ ಮತ್ತೆ ಬರುವರು, ಪ್ರತಿಕ್ರಿಯೆಯ ನೀಡುವರು,
ಮಾರ್ಗ ತೋರಿ ಮು೦ದೆ ಮು೦ದೆ ನಡೆಸುವರು,
ನೋಡಿಲ್ಲ, ಮಾತಾಡಿಲ್ಲ,
ಯಾರು ಯಾರೆ೦ದು ನಾ ಕಾಣೆನಲ್ಲ,
ಆದರೂ ಇಲ್ಲಿದೆ ಪರಸ್ಪರ ಬ೦ಧ,
ಅದುವೆ ಅಲ್ಲವೆ ನಮ್ಮ ಈ ಬ್ಲಾಗ್ ಬ೦ಧ?