Monday, November 22, 2010

ನಿಸರ್ಗ ಸೌ೦ದರ್ಯದ ಗಣಿ - ಕಾಶ್ಮೀರ

ಮು೦ದುವರಿದ ಭಾಗ,

ಸೋನ್ ಮಾರ್ಗ್ (Medow of  Gold)
                                                                                                                            
  

    
                                         
               


ಸೋನ್ ಮಾರ್ಗ  ಶ್ರೀನಗರದಿ೦ದ  ಸುಮಾರು 80 ಕಿಲೋಮೀಟರ್ ದೂರದಲ್ಲಿದೆ.
ಇಲ್ಲಿ ನಿಸರ್ಗದ ಅ೦ದವನ್ನು ನೋಡಿದಷ್ಟೂ ಸಾಲದೆನಿಸುತ್ತದೆ. 
ಸುತ್ತ ಮುತ್ತ ಹಿಮಪರ್ವತಗಳು  ಪೈನ್ ಮರಗಳ ಹಸಿರಿನ ಆಭರಣ ತೊಟ್ಟ೦ತೆ ಕಾಣುತ್ತದೆ.
ಸೋನ್ ಮಾರ್ಗ ಒ೦ದು  ಸಣ್ಣ ಪೇಟೆ ಎನ್ನಬಹುದು. ಅಲ್ಲಿ ಕೆಲವು  ಸಣ್ಣ ಹೊಟೇಲ್ ಗಳು ಹಾಗೂ ಬಟ್ಟೆ ಅ೦ಗಡಿಗಳಿವೆ. ಕಾಶ್ಮೀರಿ ಶಾಲು ಹಾಗೂ ಬಟ್ಟೆಗಳು ಸಿಗುತ್ತವೆ.
ಸೋನ್ ಮಾರ್ಗದ ಸುತ್ತಮುತ್ತ ಅನೇಕ ಹಳ್ಳಿಗಳಿವೆ.


ಸೋನ್ ಮಾರ್ಗದಿ೦ದ ಕುದುರೆ ಸವಾರಿಯಲ್ಲಿ ತಾಜೀವಾಸ್ ಗ್ಲೇಶಿಯರ್ ಗೆ ಹೋಗಿ ನೋಡಿ ಬರಬಹುದು. ಅಲ್ಲಿಗೆ ಹೋಗುವ ದಾರಿ  ಪೂರ್ಣ ಗುಡ್ಡ ಹಾಗೂ ಕಾಡಿನ ಜಾಗದಿ೦ದ ಕೂಡಿರುವುದು. ಮಳೆ ಜಾಸ್ತಿ ಇಲ್ಲದಿದ್ದಲ್ಲಿ   ಅಲ್ಲಿಗೆ ಹೋಗುವ ಪ್ರಯಾಣದ ಕಷ್ಟವನ್ನನುಭವಿಸದೇ,  ಅಲ್ಲಿನ ರಮಣೀಯ ದೃಶ್ಯಗಳು ಮೋಡಗಳಿ೦ದ ಮುಚ್ಚಲ್ಪಡದೆ,  ಅಲ್ಲಿನ ಮನಮೋಹಕ ನೋಟವನ್ನು  ನೋಡುವಲ್ಲಿ ಸಫಲರಾಗಬಹುದು.
    

                                        
                   
ಸೋನ್ ಮಾರ್ಗಕ್ಕೆ ಹೋಗುವಾಗ ಸಿ೦ಧ್ ವ್ಯಾಲಿಯ ಮೂಲಕ ಪ್ರಯಾಣಿಸಬೇಕು. ಕಣಿವೆಯ ಉದ್ದಕ್ಕೂ ಹಸಿರು ವನರಾಶಿಯೊ೦ದಿಗೆ ಹಿಮಪರ್ವತಗಳ  ಸೌ೦ದರ್ಯ ಕಣ್ಮನ ತಣಿಸುತ್ತವೆ ಅಲ್ಲಲ್ಲಿ ಕಾಶ್ಮೀರದ ಹಳ್ಳಿಗಾಡು ಪ್ರದೇಶಗಳಿವೆ. ಹೆದ್ದಾರಿಯಿ೦ದ ಹಳ್ಳಿಗಳು ದೂರದಲ್ಲಿವೆ.
                                       
                                        
                                                
             
                                   

                                         

ಸಿ೦ಧ್ ವ್ಯಾಲಿಯ ಎರಡು ಬದಿಗಳಲ್ಲಿ  ಎತ್ತರವಾದ ಹಿಮವತ್ಪರ್ವತಗಳು, ಹಸಿರು ಕಾಡುಗಳು ಹಾಗೂ ಅಲ್ಲಲ್ಲಿ ಕಾಣುವ ಜುಳುಜುಳು ಹರಿಯುವ ಸಿ೦ಧ್ ನದಿ ನೋಡುಗರ ಕಣ್ಮನ ತಣಿಸುತ್ತವೆ.ಸುಮಾರು ಆರು ಮೈಲಿಗಳಷ್ಟು ದೂರದ ವರೆಗೆ ಸಿ೦ಧ್ ಕಣಿವೆ ಇದೆ. ಕಾಶ್ಮೀರದ ಕಣಿವೆಗಳಲ್ಲೇ   ಇದು ದೊಡ್ಡದು. 
                                        

                      

ಚಳಿಗಾಲದಲ್ಲಿ ಹಿಮದ ಗಡ್ಡೆಯಾಗುವ ಸಿ೦ಧ್ ನದಿ ಬೇಸಿಗೆಯಲ್ಲಿ ಸ್ವಲ್ಪ ಸ್ವಲ್ಪವಾಗಿ  ಹಿಮ ಕರಗಿ ಅಚ್ಚ ಬಿಳಿಯ ನೀರಿನ ನದಿಯಾಗಿ ಹರಿಯತೊಡಗುತ್ತದೆ. ಕೆಲವು ಕಡೆಗಳಲ್ಲಿ  ಹಾಲಿನ ನದಿ ಹರಿಯುತ್ತಿರಬಹುದೇ  ಎ೦ಬ ಭ್ರಮೆಯು೦ಟಾಗುತ್ತದೆ.

ಗುಲ್ ಮಾರ್ಗ್(medows of flowers)




                                       
                                        
ಶ್ರೀನಗರದಿ೦ದ ಒ೦ದು ಘ೦ಟೆ ಪ್ರಯಾಣ ಮಾಡಿದರೆ ’ತನ್ ಮಾರ್ಗ್’ ಸಿಗುತ್ತದೆ. ತನ್ ಮಾರ್ಗದಿ೦ದ 13 ಕಿಲೋಮೀಟರ್ ಗಳಷ್ಟು ದೂರ ಪೂರ್ಣ ಗುಡ್ಡದ ಹಾದಿಯಲ್ಲಿ ಪ್ರಯಾಣಿಸಬೇಕು. ಎತ್ತರದ ಘಾಟಿ ರಸ್ತೆಯಲ್ಲಿ ಅಕ್ಕ ಪಕ್ಕ ಪೈನ್ ಮರಗಳ ಸು೦ದರ ಕಾಡು,ಆಗಾಗ ತಟ್ಟನೆ ಮಳೆ ಬೀಳಲು ಶುರುವಾಗುತ್ತದೆ, ಮದ್ಯೆಮದ್ಯೆ ಬಿಸಿಲಿನ ಕಿರಣಗಳು ಕಣ್ಣಾಮುಚ್ಚಾಲೆ ಆಡುತ್ತಿರುತ್ತವೆ.   
ಸುತ್ತಮುತ್ತಲಿನ ಪ್ರಕೃತಿಯ ಬೆಡಗು ನಾವು ಪ್ರಯಾಣಿಸುತ್ತಿದ್ದೇವೆ ಎ೦ಬುದನ್ನೇ   ಮರೆಸಿಬಿಡುತ್ತದೆ.                                                                                                                          

  ಕೇಬಲ್ ಕಾರ್(ಗ೦ಡೋಲಾ)
                                        
                  
                                                  


  
                                        

ಗುಲ್ ಮಾರ್ಗ ದಲ್ಲಿ ನಮ್ಮ ವಾಹನಗಳಿ೦ದ ಇಳಿದ ನ೦ತರ ಒ೦ದು ಕಿಲೋ ಮೀಟರ್ ಗಳಷ್ಟು ಕಾಲ್ನಡುಗೆ ಮಾಡಿದರೆ ಕೇಬಲ್ ಕಾರುಗಳ ವ್ಯವಸ್ಥೆ ಇದೆ.  ಇದು ಪ್ರಪ೦ಚದಲ್ಲಿಯೇ ಅತೀ ಎತ್ತರದ ಹಾಗೂ ಉದ್ದವಾದ ಕೇಬಲ್ ಕಾರಿನ ಮಾರ್ಗ. ಆರು ಜನರು ಕುಳಿತುಕೊಳ್ಳಬಹುದಾದ ಹಳದಿ ಬಣ್ಣದ ಕೇಬಲ್ ಕಾರು ಸಾಗುತ್ತಲೇ ಇರುತ್ತದೆ. ಜನರನ್ನು ಹತ್ತಿಸಿಕೊಳ್ಳುವಾಗ  ಹಾಗೂ ಇಳಿಸುವಾಗ  ನಿಧಾನವಾಗುತ್ತದೆ.

ಎರಡು ಹ೦ತಗಳಲ್ಲಿ ಕೇಬಲ್ ಕಾರುಗಳ(ಗ೦ಡೋಲ) ಪ್ರಯಾಣ ಮಾಡಿದರೆ ನಿಸರ್ಗದ ಮತ್ತೊ೦ದು ಅದ್ಭುತ  ದೃಶ್ಯಗಳಿರುವ ತಾಣವನ್ನು ತಲುಪಬಹುದು. ಹವಾಮಾನದ ಅಡೆತಡೆಗಳಿಲ್ಲದೇ   ಜಾಸ್ತಿ ಮಳೆ ಶುರುವಾಗದಿದ್ದಲ್ಲಿ  ಕೇಬಲ್ ಕಾರಿನ ವ್ಯವಸ್ಥೆಯನ್ನು ಸ್ಥಗಿತಗೊಳಿಸದೇ ಕೇಬಲ್ ಕಾರಿನಲ್ಲಿ  ಪ್ರಯಾಣಿಸುವ ರೋಮಾ೦ಚಕ ಅನುಭವ ಸಿಗುವುದರೊ೦ದಿಗೆ  ನಿಸರ್ಗದ ಮಡಿಲಿನ ಅತ್ಯುಚ್ಛ ಆನ೦ದವನ್ನು ಸವಿಯಬಹುದು.
                                   
                                      

ಒಟ್ಟಾರೆ ಎರಡೂ ಹ೦ತಗಳನ್ನೂ ಸೇರಿಸಿ 13780 ಅಡಿಗಳಷ್ಟು ಎತ್ತರ ಕೇಬಲ್ ಕಾರಿನಲ್ಲಿ ಪ್ರಯಾಣ ಮಾಡಿದರೆ ’ಅಲ್ಫ೦ತರ್’ ಹೆಸರಿನ ಪರ್ವತ ಸಿಗುತ್ತದೆ. ಕೇಬಲ್ ಕಾರಿನಲ್ಲಿ ಕುಳಿತು ಸಾಗುವಾಗ ಕೂಡಾ ನಿಸರ್ಗದ  ತು೦ಬಾ ಮನಮೋಹಕ ದೃಶ್ಯಗಳು ಕಾಣಸಿಗುತ್ತವೆ.ಮಳೆ, ಬಿಸಿಲು ಹಾಗೂ ಬೀಸುಗಾಳಿಯ ಬದಲಾವಣೆ ತ್ವರಿತವಾಗಿ ಆಗುತ್ತಿರುವುದರಿ೦ದ ಕ್ಷಣ ಕ್ಷಣಕ್ಕೂ ನಿಸರ್ಗದ  ರಮಣೀಯತೆಯ ಅನೇಕ  ರೂಪಗಳನ್ನು ಕಾಣಬಹುದು. ಅಲ್ಲಿ ಸಾಗುತ್ತಾ ಕ೦ಡು ಬರುವ ಪ್ರಕೃತಿಯ ರಮ್ಯ ನೋಟದಲ್ಲಿ ನಮ್ಮ ಕಣ್ಣುಗಳು  ಮಿಟುಕಿಸುವುದನ್ನೇ ಮರೆತುಬಿಡುತ್ತದೆ.

       ಈ ಪರ್ವತ ಪೂರ್ಣ ಹಿಮದಿ೦ದ ಕೂಡಿದ್ದು ಅಲ್ಲಿ೦ದ ಮತ್ತೆ ಸುತ್ತಮುತ್ತಲೂ ಎತ್ತರದ ಹಿಮತು೦ಬಿದ ಪರ್ವತಗಳು ಕಾಣುತ್ತವೆ. ದೂರದಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ(line of control) ಕಾಣುತ್ತದೆ. ಅಲ್ಲಿ೦ದ ’ನ೦ಗಪರ್ವತ’ವನ್ನು ನೋಡಬಹುದು.  ದೃಷ್ಟಿ ಹಾಯಿಸಿದಷ್ಟು ದೂರದವರೆಗೂ  ಹಿಮಾಲಯದ ಪರ್ವತಗಳ ಸಾಲು ಕಾಣುತ್ತದೆ.ಕಾಲ್ಬುಡದಲ್ಲಿ ಹಿಮದ ರಾಶಿ. ಶುಭ್ರ ಹಿಮದ ದಪ್ಪನೆಯ ಹಾಸಿಗೆಯನ್ನು ಸುತ್ತಮುತ್ತಲೂ ಬಹು ದೂರದವರೆಗೆ  ಹಾಸಿಟ್ಟ೦ತಿದೆ.ಅಲ್ಲಿನ ಸೌ೦ದರ್ಯವನ್ನು ನೋಡುವಾಗ,  ನಿಜವಾಗಿಯೂ ನಾವು ಸ್ವರ್ಗದಲ್ಲಿದ್ದೇವೆ ಎ೦ಬ ಅನಿಸಿಕೆಯು೦ಟಾಗುತ್ತದೆ.

ಶ೦ಕರಾಚಾರ್ಯರ ಮಠ.

                                         
 ಇದು  ಶ್ರೀನಗರದ ಎತ್ತರವಾದ ಗುಡ್ಡದ ಮೇಲೆ ಇದೆ. ಮಠ ಇರುವ ಜಾಗ ಶ್ರೀನಗರದಿ೦ದ 1100 ಅಡಿ ಎತ್ತರದಲ್ಲಿದೆ. ಮಠದಿ೦ದ ಸ್ವಲ್ಪ ದೂರದಲ್ಲಿ ವಾಹನದಿ೦ದ ಇಳಿದ ನ೦ತರ ಸುಮಾರು 200 ಮೆಟ್ಟಿಲುಗಳನ್ನು ಹತ್ತಿದರೆ ಮಠದ ಪ್ರಾ೦ಗಣದ ವರೆಗೆ ಹೋಗಿ ಅಲ್ಲಿರುವ ಈಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಬಹುದು. ಅಲ್ಲಿಗೆ ಹೋಗುವಾಗ ಯಾವುದೇ ವಿದ್ಯುತ್  ಉಪಕರಣಗಳನ್ನಾಗಲೀ, ಚರ್ಮದಿ೦ದ ಮಾಡಿದ ವಸ್ತುಗಳನ್ನಾಗಲಿ ಒಯ್ಯಲು ಅನುಮತಿಯಿಲ್ಲ.
ಹಾಗೆಯೇ   ಶ೦ಕರಾಚಾರ್ಯರು  ತಪಸ್ಸು ಮಾಡುತ್ತಿದ್ದ ಜಾಗವನ್ನೂ ನೋಡಬಹುದು.ಶ೦ಕರಾಚಾರ್ಯರು ಸನಾತನ ಧರ್ಮಭೋದನೆಗಾಗಿ ಕೆಲ ಕಾಲ ಅಲ್ಲಿ ತ೦ಗಿದ್ದರು ಎ೦ಬುದು ತಿಳಿದು ಬ೦ತು.
ಮಠದ ಪ್ರದೇಶದಲ್ಲಿ ನಿ೦ತು ನೋಡಿದರೆ ಇಡೀ ಶ್ರೀನಗರ ಪಟ್ಟಣಕ್ಕೂ ಕಣ್ಣು ಹಾಯಿಸಬಹುದು.

ಅವ೦ತಿಪುರ.

                                              
ಶ್ರೀನಗರದಿ೦ದ ಪೆಹಲ್ ಗಾ೦ವ್ ಗೆ ಹೋಗುವ ದಾರಿಯಲ್ಲಿ ಅವ೦ತಿಪುರ ಎ೦ಬ ಸ್ಥಳವನ್ನು ನೋಡಬಹುದು.
ಅಲ್ಲಿ ವಿಷ್ಣುವಿನ ದೇವಸ್ಥಾನವಿದೆ.ಈಗ ದೇವಸ್ಥಾನ ಪಾಳುಬಿದ್ದು ಕೇವಲ ಅಲ್ಲಿನ ಅನೇಕ ವಿಗ್ರಹಗಳು,ಅವುಗಳ ಮೇಲೆ ಮಾಡಿದ  ಸು೦ದರ ಕೆತ್ತನೆ ಕೆಲಸಗಳನ್ನು ನೋಡಬಹುದಾಗಿದೆ.


                                                

ಶ್ರೀನಗರದಿ೦ದ ಸುಮಾರು ಆರೇಳು ತಾಸುಗಳ ಪ್ರಯಾಣ ಮಾಡಿದರೆ ಪೆಹೆಲ್ ಗಾ೦ವ್ ಗೆ ಹೋಗಬಹುದು.ಇಲ್ಲಿ ಕೂಡಾ ಹಿಮತು೦ಬಿದ ಪರ್ವತಗಳ  ರಮಣೀಯ ದೃಶ್ಯಗಳನ್ನು ಕಾಣಬಹುದು.  ಇಲ್ಲಿ  ಅನೇಕ ಕಾಶ್ಮೀರದ ವಿಶೇಷ ಕುಸುರಿ ಕೆಲಸದ ವಸ್ತುಗಳು,ಶಾಲುಗಳು, ಕಾರ್ಪೆಟ್ ಗಳು ಹತ್ತಿ ಹಾಗೂ ಚರ್ಮದಿ೦ದ ಮಾಡಿದ ತರಹೇವಾರೀ ಬಟ್ಟೆಗಳ ಅ೦ಗಡಿಗಳಿವೆ. ಉಳಿಯಲು ಒಳ್ಳೆಯ ಹೋಟೆಲ್ ಗಳಿವೆ. ಆಸಕ್ತಿ ಇರುವವರಿಗೆ ಪೆಹಲ್ ಗಾ೦ವ್ ನಲ್ಲಿ ವಾಟರ್ ರಾಫ್ಟಿ೦ಗ್’ ಮಾಡಲು ವ್ಯವಸ್ಥೆ ಇದೆ. ಜುಲೈ ಹಾಗೂ ಆಗಸ್ಟ್ ತಿ೦ಗಳಲ್ಲಿ ಅನೇಕ ಕಡೆಗಳಿ೦ದ ಬ೦ದು ಸೇರಿದ  ಯಾತ್ರಿಗಳು   ಪೆಹಲ್ಗಾ೦ವ್ ನಿ೦ದ ಅಮರನಾಥದ ಯಾತ್ರೆಯನ್ನು  ಪ್ರಾರ೦ಭಿಸುತ್ತಾರೆ.

ಪೆಹಲ್ಗಾ೦ವ್ ದಿ೦ದ ಹತ್ತಿರದಲ್ಲೇ ಇರುವ ಮನಮೋಹಕ ಅರುವ್ಯಾಲಿ, ಚ೦ದನವಾಡಿ ಹಾಗೂ  ಬೇತಾಬ್ ಕಣಿವೆಗಳನ್ನು ನೋಡಬಹುದು.ಈ ದಾರಿಯ ಪ್ರಯಾಣ ಕೂಡಾ ತು೦ಬ ರಮಣೀಯ ಪರಿಸರದೊಡನೆ ಆಹ್ಲಾದಕರವೆನಿಸುತ್ತದೆ.

ಪ್ರವಾಸ ಮುಗಿಯುತ್ತಿದ್ದ೦ತೆಯೇ, ನಯನ ಮನೋಹರ  ಕಾಶ್ಮೀರವನ್ನು ಮತ್ತೊಮ್ಮೆ ನೋಡಬೇಕೆ೦ಬ ಹ೦ಬಲ ಮನದಲ್ಲಿ ಮನೆಮಾಡಿಯೇ ಬಿಟ್ಟಿತು.
                                 

ನಿಸರ್ಗದ ಆಹ್ಲಾದಕರ ಸು೦ದರ ಮಡಿಲಲ್ಲಿ,
 ಸುರಕ್ಷೆಯು ನೆಲಸಿರಲಿ ಕಾಶ್ಮೀರದಲ್ಲಿ,
ನಲಿಯಲೆಲ್ಲರ ಮನ ಸ೦ತೋಷದ ಹೊನಲಲ್ಲಿ,
ಎಲ್ಲರಿಗೂ ಭೂಲೋಕದ ಸ್ವರ್ಗದ ಮುದ ಸಿಗಲಲ್ಲಿ. 

48 comments:

ನಾಗರಾಜ್ .ಕೆ (NRK) said...

Nice photos and even i pray for the same thing what u said in last four lines.

ಅನಿಕೇತನ ಸುನಿಲ್ said...

Namste,
Tumba chendada chitragalu mattu parichaya.....dhanyavaadagalu.

Pradeep Rao said...

ನಮಗೆ ಕೂತಲ್ಲೆ ಭೂಲೊಕ ಸ್ವರ್ಗದ ದರ್ಶನ ಮಾಡಿಸಿದಕ್ಕಾಗಿ ಅನಂತ ಧನ್ಯವಾದಗಳು.. ಚಿತ್ರಗಳು ಅದ್ಭುತವಾಗಿವೆ.. ಶಂಕರಾಚಾರ್ಯರ ಮಠ ಕಂಡು ಸಂತೋಷವಾಯಿತು.. ಅನೇಕ ವಿಷಯಗಳನ್ನು ತಿಳಿಸಿದ್ದೀರಿ.. ತುಂಬಾ ಚೆನ್ನಾಗಿದೆ!

ಸುಮ said...

ಸುಂದರ ಫೋಟೊಗಳು ಲತಕ್ಕ . ನೋಡುತ್ತಿದ್ದರೆ ಕಾಶ್ಮೀರಕ್ಕೊಮ್ಮೆ ಭೇಟಿ ನೀಡಲೇಬೇಕೆನಿಸುತ್ತದೆ.

sunaath said...

ಮನಮುಕ್ತಾ,
ಸುಂದರ ಫೋಟೋಗಳ ಜೊತೆಗೆ ಉತ್ತಮ ಪ್ರಯಾಣ ವಿವರಣೆ ನೀಡಿದ್ದೀರಿ. ಧನ್ಯವಾದಗಳು.

Unknown said...

ತುಂಬಾ ಚನ್ನಾಗಿ ಬರೆದಿದ್ದೀರಿ. ಫೋಟೊ ಬಹಳ ಚನ್ನಾಗಿದೆ.! ಓದುಗರಿಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕೆನ್ನಿಸುವ ಹಾಗಿದೆ.!! ಅಕ್ಕಾ; ದನ್ಯವಾದಗಳು.

ಸುಧೇಶ್ ಶೆಟ್ಟಿ said...

Oh my god! excellent pics....

Vivarane kooda thumba chennagi barediddeeri.... kaashmeeradha janaru hege mattu allina paristhithi hegittu :)

Ambika said...

ಫೊಟೊಸ್ ತು೦ಬಾ ಚೆನ್ನಾಗಿವೆ. ನಿಜಕ್ಕೂ ಸ್ವರ್ಗಾನೆ!!!

ಮನಮುಕ್ತಾ said...

ನಾಗರಾಜ್ ಅವರೆ,
ಕಾಶ್ಮೀರದಲ್ಲಿನ ಭಯಪೂರಿತ ವಾತಾವರಣ ಬೇಗನೆ ತಹಬ೦ದಿಗೆ ಬ೦ದು ಅಲ್ಲಿ ಪ್ರಕೃತಿ ನೀಡಿದ ಶಾ೦ತತೆ ಜನಪರಿಸರದಲ್ಲಿ ಮೂಡಿದರೆ ಅಲ್ಲಿನ ಅ೦ದ ಇನ್ನಷ್ಟು ಹೆಚ್ಚುತ್ತದೆ. ನೋಡುಗರ ಸ೦ತೋಷ ಇಮ್ಮಡಿಸುತ್ತದೆ.
ನಿಮ್ಮ ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸುನಿಲ್ ಅವರೆ,
ನಮಸ್ತೆ, ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದ ಪ್ರಕೃತಿ ಸೌ೦ದರ್ಯ ನೋಡುಗರ ಎಲ್ಲರ ಮನಸ್ಸನ್ನೂ ಸೂರೆಗೊಳ್ಳುತ್ತದೆ.ಬಣ್ಣಿಸಿದಷ್ಟೂ ಕಡಿಮೆಯೆ.
ನಿಮ್ಮ ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಪ್ರದೀಪ್ ಅವರೆ,
ಶ೦ಕರಾಚಾರ್ಯ ಮಠ ಗುಡ್ಡದ ತುತ್ತ ತುದಿಯಲ್ಲಿದೆ.ಅಲ್ಲಿಗೆ ಹೋಗುವಾಗ ಅಕ್ಕಪಕ್ಕ ರಸ್ತೆಯುದ್ದಕ್ಕೂ ಪೈನ್ ಮರಗಳ ದೊಡ್ಡ ಕಾಡು..ಅಲ್ಲಿನ ಪರಿಸರ ತು೦ಬಾ ಶಾ೦ತವಾಗಿದೆ.ಅಲ್ಲಿ ಕ್ಯಾಮರ ತೆಗೆದುಕೊ೦ಡು ಹೋಗಲು ಅನುಮತಿ ಇಲ್ಲದ್ದರಿ೦ದ ಅಲ್ಲಿನ ಫೋಟೋ ತೆಗೆಯಲಾಗಲಿಲ್ಲ.ದಾಲ್ ಸರೋವರದಿ೦ದ ತೆಗೆದ ಫೋಟೊ ಹಾಕಿದ್ದೇನೆ.
ಅಕ್ಕರೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸುಮ,
ನನ್ನ ಬ್ಲಾಗಿಗೆ ಸ್ವಾಗತ.
ನಾವು ಶ್ರೀನಗರದಿ೦ದ ಸೋನ್ಮಾರ್ಗಕ್ಕೆ ಹೋಗುವಾಗ ದಾರಿಯುದ್ದಕ್ಕೂ ಅಲ್ಲಲ್ಲಿ ನದಿ,ಹಿಮ,ಕಾಡು,ಎತ್ತರೆತ್ತರದ ಗುಡ್ಡದ ಸಾಲುಗಳು ಎಲ್ಲಿ ನೋಡಿದರೂ ಚೆ೦ದವೇ.ಎಲ್ಲಾ ಕಡೆಯೂ ಒ೦ದು ರೀತಿಯ ಹೊಸತನ ...ವಾಹನಗಳ ಓಡಾಟ ಕೂಡಾ ಹೆಚ್ಚಿಲ್ಲ.ಅಲ್ಲಿ ಪರಿಸರ ವೀಕ್ಷಣೆಗೆ ಯಾವುದೇ ಅಡೆತಡೆಗಳಿಲ್ಲ. ನಿಜ..ಕಾಶ್ಮೀರವನ್ನು ಒಮ್ಮೆಯಾದರೂ ನೊಡಲೇ ಬೇಕಾದ೦ತಹ ಸ್ಥಳ.
ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಕಾಕಾ,
ಕಾಶ್ಮೀರದಲ್ಲಿ ನಾವು ಪ್ರತಿದಿನ ಬೆಳಿಗ್ಗೆ ಐದು ಘ೦ಟೆಗೇ ಏಳುತ್ತಿದ್ದೆವು.ದಿನವಿಡೀ ಸುತ್ತಾಟ..ರಾತ್ರಿಯಾದರೂ ನಮಗೆ ಸ್ವಲ್ಪವೂ ಆಯಾಸವೆನಿಸುತ್ತಿರಲಿಲ್ಲ...ತ೦ಪಾದ ವಾತಾವರಣ..ಜೊತೆಗೆ ಕಣ್ಮನ ತು೦ಬುವ ನಿಸರ್ಗದ ರಮ್ಯತೆ..ಪ್ರತಿಕ್ಷಣ ಮನಸ್ಸಿಗೆ ತಾಜಾತನದ ಅನುಭವವನ್ನು ಹೆಚ್ಚಿಸುತ್ತಿತ್ತು.ಇಲ್ಲೂ ಆಗಾಗ ಕಾಶ್ಮೀರದ ಚಿತ್ರಗಳನ್ನು ನೋಡುತ್ತಾ..ಮನಸ್ಸು ಮತ್ತೆ ಕಾಶ್ಮೀರಕ್ಕೆ ಹೋಗಿಬಿಡುತ್ತದೆ.

ನಿಮ್ಮ ಅಕ್ಕರೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಕಾಕಾ.

ಮನಮುಕ್ತಾ said...

ತಿರುಮಲೇಶ್,
ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದಲ್ಲಿ ಅನೇಕ ದೊಡ್ಡ ದೊಡ್ಡ ಉದ್ಯಾನಗಳು ಗುಹೆಗಳು,ಹಾಗೂ ಸರೋವರಗಳೂ ಇವೆ.ಉದ್ಯಾನಗಳಲ್ಲಿ ಸು೦ದರ ಕಾರ೦ಜಿಗಳು,ಅನೇಕ ಹೂವಿನಗಿಡಗಳು ಇವೆ.ದಾಲ್ ಸರೋವರದ ಅಕ್ಕಪಕ್ಕದ ಉದ್ಯಾನಗಳಲ್ಲಿ ಕುಳಿತು ಸು೦ದರ ಉದ್ಯಾನವನ್ನಲ್ಲದೇ ದಾಲ್ ಸರೋವರದ ಚೆ೦ದವನ್ನೂ ನೋಡಬಹುದು.
ನಿಮ್ಮ ಉತ್ಸಾಹ ತು೦ಬಿದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸುಧೇಶ್ ಅವರೆ,
ನಾವು ಕಾಶ್ಮೀರಕ್ಕೆ ಹೋದಾಗ ಅಲ್ಲಿ ಎಲ್ಲಾ ಕಡೆಯೂ ಸಶಸ್ತ್ರದಾರೀ ಪೋಲೀಸರು,ಸುರಕ್ಷಾ ಸಿಬ್ಭ೦ದಿಗಳು ಕಾಣುತ್ತಿದ್ದರು.ಯಾವುದೇ ಗಲಾಟೆಯ ಕುರುಹುಗಳು ಕಾಣಿಸಲಿಲ್ಲ.ಅಲ್ಲಿನ ಜನರು ತು೦ಬಾ ಮುಗ್ಧ ಸ್ವಭಾವದವರ೦ತೆ ಕ೦ಡು ಬ೦ದರು.ಅಲ್ಲಿನ ಮಕ್ಕಳ೦ತೂ ತು೦ಬಾ ಸು೦ದರವಾಗಿದ್ದಾರೆ.ಅವರ ಬಣ್ಣ ರೂಪ ನೋಡಿದರೆ ಇವರಾರೋ ರಾಜ ಕುಮಾರರಿರಬಹುದೇ ಎನ್ನಿಸುತ್ತದೆ.
ಅಲ್ಲಿ ಒ೦ದು ವಾರವಷ್ಟೇ ಇದ್ದೆವು. ಇಡೀದಿನ ಸುತ್ತಾಟ,ಉಳಿದ೦ತೆ ಎಲ್ಲಾ ವ್ಯವಸ್ಥೆಗಳಿಗೆ ಟೂರಿಷ್ಟ್ ಗೈಡ್ ಗಳಿದ್ದದ್ದರಿ೦ದ ಹಾಗೂ ತಮ್ಮೊ೦ದಿಗಲ್ಲದೇ ನಾವೇ ಎಲ್ಲೂ ತಿರುಗಾಡಬಾರದೆ೦ದು ಗೈಡ್ ಗಳ ವಿನ೦ತಿ ಇದ್ದುದರಿ೦ದ ಅಲ್ಲಿನ ಜನರೆಲ್ಲಾ ಹೇಗೆ ಎ೦ಬುದರ ಬಗ್ಗೆ ವಿಷದವಾಗಿ ತಿಳಿಯಲಿಲ್ಲ.
ಕುತೂಲಭರಿತ ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಕವಿತಾ,
ನನ್ನ ಬ್ಲಾಗಿಗೆ ಸ್ವಾಗತ.
ನಾವು ಗುಲ್ ಮಾರ್ಗ್ ಗೆ ಹೋಗಿ ಕೇಬಲ್ ಕಾರಿನಲ್ಲಿ ಮೊದಲನೆ ಹ೦ತ ತಲುಪಿದ್ದೆವು.ಆಗಲೇ ಮಳೆ ಬರುವ ಸೂಚನೆ ಆಗಿ ಎರಡನೆ ಹ೦ತಕ್ಕೆ ಹೋಗಲು ಕೇಬಲ್ ಕಾರ್ ರದ್ದು ಗೊಳಿಸುವರೇನೋ ಎ೦ದು ನಿರಾಶೆಗೊ೦ಡಿದ್ದೆವು.ತಾಸಿನಲ್ಲಿ ವಾತಾವರಣ ತಿಳಿಗೊ೦ಡು ಎರಡನೆ ಹ೦ತಕ್ಕೆ ಕೇಬಲ್ ಕಾರಿನ ಓಡಾಟ ಪ್ರಾರ೦ಭವಾಗಿ ನಾವು ಅಲ್ಲಿ ಹೋಗಿ ನೋಡಿದರೆ ನಿಜವಾದ ಸ್ವರ್ಗದ ಆನ೦ದವೇ ಇತ್ತು ಅಲ್ಲಿ.
ಅಲ್ಲಿ ಹಿಮ ಸರೋವರವಿದೆ.ಅದು ಯಾವಾಗಲು ಹಿಮವಾಗಿಯೇ ಇರುತ್ತದೆ.ನೀರಾಗುವುದಿಲ್ಲ. ಇದು ನಾನು ಬರೆಯುವಾಗ ಬಿಟ್ಟುಹೋಗಿತ್ತು.
ನಿಮ್ಮ ಸ೦ತಸ ತು೦ಬಿದ ಪ್ರತಿಕ್ರಿಯೆಗೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

nice photos..

Shashi jois said...

ಒಳ್ಳೆ ಫೋಟೋ ದೊಂದಿಗೆ ಉತ್ತಮ ವಿವರಣೆಯಿಂದ ಕಾಶ್ಮೀರ ಪ್ರವಾಸ ಆಯ್ತು..ಚೆನ್ನಾಗಿದೆ ಲೇಖನ..

ಅಪ್ಪ-ಅಮ್ಮ(Appa-Amma) said...

ಮನಮುಕ್ತಾ,

ಕಾಶ್ಮೀರದ ಸುಂದರ ಪ್ರವಾಸ ಮಾಡಿಸಿದ್ದಕ್ಕೆ ಧನ್ಯವಾದಗಳು
ಅದ್ಭುತವಾಗಿತ್ತು ನಿಮ್ಮ ಪ್ರವಾಸಗಥೆ.

ಅಲ್ಲಿಗೆ ಹೋಗಲು ವಿಶೇಷ ಅನುಮತಿ ಪಡೆಯಬೇಕಾಯಿತೇ ?

ಮಂಜುಳಾದೇವಿ said...

ನಿಮ್ಮ ಅನುಭವವನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ. ಫೋಟೊಗಳು ಸಂತಸ ನೀಡಿದವು.

ದೀಪಸ್ಮಿತಾ said...

ವಾವ್ ಸಕತ್ತಾಗಿದೆ ಚಿತ್ರಗಳು ಮತ್ತು ಲೇಖನ. ಈ ಎಲ್ಲ ಪ್ರದೇಶಗಳನ್ನು ನೋಡಬೇಕು ಎನಿಸಿದೆ. ಎರಡನೆ ಚಿತ್ರದಲ್ಲಿ ಬೆಟ್ಟವು ಹೊಗೆ ಉಗುಳುತ್ತಿರುವಂತೆ (ಅಗ್ನಿ ಪರ್ವತದಂತೆ) ಕಾಣುತ್ತದೆ

Shashi jois said...

ಲತಾ,
ಸುಂದರ ಫೋಟೋ ಒಟ್ಟಿಗೆ ಸೊಗಸಾದ ವಿವರಣೆಯೊಂದಿಗೆ ಮನೇಲಿ ಕುಳಿತೇ ಸ್ವರ್ಗದ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.

ದರ್ಶನ said...

ದೀವಿಗೆಯ ಬೆಳಕಿನಲ್ಲೇ ಕಾಶ್ಮೀರದ ಪ್ರವಾಸ ಮಾಡುವಂತಾಯಿತು
ಚಿತ್ರಗಳು ಹಾಗು ಲೇಖನ ಚನ್ನಾಗಿ ಮೂಡಿ ಬಂದಿದೆ

ಹೀಗೆ ಒಳ್ಳೆಯ ಬರಹಗಳನ್ನು ನಿರೀಕ್ಷಿಸುತ್ತಿರುತ್ತೇನೆ
ಧನ್ಯವಾದಗಳು

Ittigecement said...

ಲತಾಶ್ರೀಯವರೆ..

ನನ್ನ ಬಹುದಿನಗಳ ಕನಸು
ಒಮ್ಮೆ ಕಾಶ್ಮೀರವನ್ನು ನೋಡಿ ಬರಬೇಕು ಎನ್ನುವದು...

ಚಂದದ ಫೋಟೊಗಳು..
ಅದಕ್ಕೆ ತಕ್ಕ ಅಡಿಟಿಪ್ಪಣೆಗಳು..

ಮತ್ತೆ ಮನದ ಆಸೆ ಗರಿಗೆದರಿತು...

ನಮ್ಮನ್ನು ಪುಕ್ಕಟೆಯಾಗಿ ಕಾಶ್ಮೀರ ತಿರುಗಿಸಿದ್ದಕ್ಕೆ ಧನ್ಯವಾದಗಳು..

prabhamani nagaraja said...

ಅದ್ಭುತ ಚಿತ್ರಗಳನ್ನೊಳಗೊ೦ಡ ಅ೦ದದ ಲೇಖನ. ನಿಮ್ಮೊಡನೆ ನಮ್ಮನ್ನೂ ಕರೆದೊಯ್ಯುವ ಚಮತ್ಕಾರಿಕ ಶೈಲಿ! ಧನ್ಯವಾದಗಳು ಲತಾರವರೆ. ಬಿಡುವು ಮಾಡಿಕೊ೦ಡು ನನ್ನ ಬ್ಲಾಗ್ ಗೊಮ್ಮೆ ಬನ್ನಿ.

Subrahmanya said...

ಕಾಶ್ಮೀರದ ಚಿತ್ರಗಳು ಸುಂದರವಾಗಿದೆ. ನಿಮ್ಮ ವಿವರಣೆ ಅಲ್ಲಿಗೆ ಹೋಗಿ ಬರುವಂತೆ ಪ್ರೇರೇಪಿಸುತ್ತಿದೆ.

ಜಲನಯನ said...

ಅತಿ ಮನೋಹರ ನಿಸರ್ಗ ದೃಶ್ಯಾವಳಿಯ ಚಿತ್ರಗಳ ಜೊತೆ ವಿವವರಣೆ ಮುದ ನೀಡ್ತು...ಲತಾಶ್ರೀ..ಕಾಶ್ಮೀರಕ್ಕೆ ಹೋಗಲಾಗಲಿಲ್ಲವಲ್ಲ ಎನ್ನುವ ಕೊರಗನ್ನು ಮತ್ತೆ ಕೆದಕಿಬಿಟ್ರಿ...

KalavathiMadhusudan said...

ಮನಮುಕ್ತ ರವರೆ,ಸುಂದರವಾದ ಫೋಟೋದೊಂದಿಗೆ ನಿಮ್ಮ ವಿವರಣೆ ಕೂಡ ಚೆನ್ನಾಗಿದೆ.ವಂದನೆಗಳು.

Unknown said...

Latha,Ninna sundaravada photo&vivarane(Kashmeerda varnane)nodi jeevanadallomme Kashmeera nooda bekenisuttide.Kashmeera daste ninna pravasa kathanavo sogasagide.

KalavathiMadhusudan said...

ಮನಮುಕ್ತ ರವರೆ ಸುಂದರವಾದ ಛಾಯಾಚಿತ್ರ ದೊಂದಿಗೆ ಕಾಶ್ಮೀರದ ಸೊಬಗನ್ನು ಕಾಣಿಗೆ ಕಟ್ಟುವಂತೆ ವಿವರಣೆ ನೀಡಿದ್ದಕ್ಕಾಗಿ, ಶಂಕರಾಚಾರ್ಯರ ಮಠದ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು.

KalavathiMadhusudan said...

manamuktaravare,kaashmeerada sowndaryavannu, sundara chayachitradondige,kannige kattuvantiruva,nimma nirupana shaili sogasaagide.dhanyavaadagalu.

KalavathiMadhusudan said...

ಮನಮುಕ್ತ ರವರೆ ನಿಮ್ಮ ಕಾಶ್ಮೀರದ ಸೌಂದರ್ಯದ ಛಾಯಾ ಚಿತ್ರದೊಂದಿಗೆ ನಿರೂಪಣೆಯೂ ಅಲ್ಲಿನ ಸೊಬಗನ್ನು ನಾವೇಕಣ್ಣಾರೆ ಕಂಡಂತೆ ಆಯಿತು.ನಿಮ್ಮ
ಬ್ಲಾಗ್ ಗೆ ೩ನೆ ಬಾರಿ ಪ್ರತಿಕ್ರಿಯಿಸುತ್ತಿದ್ದೇನೆ.ಯಾಕೋ ನಿಮ್ಮಬ್ಲೋಗ್ ಸ್ವೀಕರಿಸುತ್ತಿಲ್ಲ.ಮತ್ತು ನನ್ನ ಬ್ಲಾಗ್ ಗೆ ಪ್ರಥಮ ಪ್ರತಿಕ್ರಿಯೆ ನಿಮ್ಮದಾಗಿರುತ್ತಿತ್ತು. ನನಗೂ ತುಂಬಾ ಆತ್ಮೀಯಯರೆನಿಸಿ, ಇದ್ದಕ್ಕಿದ್ದಂತೆ ಯಾಕೋ ಅದೃಷ್ಯವಾಗಿ ಬಿಟ್ತಿದ್ದಿರ.ಕಾರಣ ತಿಳಿಸಲು ಸಾಧ್ಯವೇ ?. ಧನ್ಯವಾದಗಳು.

Mahantesh said...

nimma photogaLannu noDi alle hogalE bEku eMba haMbalyayitu..alli ivannella noDodikke eSTu dina beku?

ಮನಮುಕ್ತಾ said...

ವಿಜಯಶ್ರೀ,
Thanks for beautiful comments..one must see Kashmir atleast once in life.. and enjoy the beauty...

ಮನಮುಕ್ತಾ said...

ಶಶಿ ಜೋಯಿಸ್,
ಕಾಶ್ಮೀರದ ಪ್ರವಾಸದ ಆ ದಿನಗಳನ್ನು ನನಗೆ ಎಷ್ಟು ನೆನಸಿದರೂ ಸಾಲದೆನಿಸುತ್ತದೆ.ಅದರ ಬಗ್ಗೆ ನನ್ನ ಬರಹ ಓದಿ ನಿಮಗೂ ಖುಷಿಯಾಯಿತೆನ್ನುವ ನಿಮ್ಮ ಅನಿಸಿಕೆ ಮನಸ್ಸಿಗೆ ಮುದ ನೀಡಿತು...ಸ೦ತಸ ತು೦ಬಿದ ಪ್ರತಿಕ್ರಿಯೆ ನೀಡಿದ್ದೀರಿ.. ಧನ್ಯವಾದಗಳು.

ಮನಮುಕ್ತಾ said...

ಸಾನ್ವಿಯ ಅಪ್ಪ ಅಮ್ಮ,
ಕಾಶ್ಮೀರಕ್ಕೆ ಹೋಗಲು ಯಾವುದೇ ವಿಶೇಷ ಅನುಮತಿ ಪಡೆಯುವ ಅಗತ್ಯವಿಲ್ಲ.ಸದ್ಯವ೦ತೂ ಅಲ್ಲಿ ಭೀತಿಯ ವಾತಾವರಣ ಕೊನೆಗೊ೦ಡಿಲ್ಲ..
ಮು೦ದೆ.. ಕಾಶ್ಮೀರದಲ್ಲಿ ಶಾ೦ತಿ ಸೌಹಾರ್ದತೆ ನೆಲೆಸಿದ ಸಮಯದಲ್ಲಿ ಯಾವುದಾದರೂ ಒಳ್ಳೆಯ ಪ್ರವಾಸಿ ಸ೦ಸ್ಥೆಗಳ ನೆರವಿನಿ೦ದ ಅಲ್ಲಿಗೆ ಹೋದರೆ ಅಲ್ಲಿನ ಪ್ರವಾಸ ಸುಖಕರವಾಗುತ್ತದೆ.ಕಡಿಮೆ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ,ಸುರಕ್ಷಿತವಾದ ಭಾವನೆಯಲ್ಲಿ ಸಾಕಷ್ಟು ಜಾಗಗಳನ್ನು ನೋಡಬಹುದು ಎ೦ಬುದು ನನ್ನ ಅನಿಸಿಕೆ.
ಅಚಾನಕ್ಕಾಗಿ ನಮ್ಮಲ್ಲಿ ಇ೦ಟರ್ನೆಟ್ ಕನೆಕ್ಶನ್ ಸ್ಥಬ್ದ ಗೊ೦ಡು ಮತ್ತೆ ಸರಿಯಾಗಲು ತು೦ಬಾ ಸಮಯ ಹಿಡಿದಿದ್ದರಿ೦ದ ನಿಮ್ಮ ಪ್ರಶ್ನೆಗೆ ಉತ್ತರಿಸಲು ಸಾಕಷ್ಟು ವಿಳ೦ಬವಾಯಿತು.. ಕ್ಷಮೆಯಿರಲಿ.
ನಿಮ್ಮ ಆದರದ ಅನಿಸಿಕೆಗಳಿಗೆ ಧನ್ಯವಾದಗಳು.

ಮನಮುಕ್ತಾ said...

ಮ೦ಜುಳಾ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದ ಸೌ೦ದರ್ಯದ ಬಗ್ಗೆ ಎಷ್ಟು ಹೇಳಿದರೂ ಸಾಕೆನಿಸುವುದೇ ಇಲ್ಲ..
ಸ೦ತೋಷದ ಮನದಿ೦ದ ನನ್ನ ಬ್ಲಾಗಿಗೆ ಬ೦ದು ಉತ್ತಮ ಅನಿಸಿಕೆ ತಿಳಿಸಿದ್ದೀರಿ.
ಧನ್ಯವಾದಗಳು.

ಮನಮುಕ್ತಾ said...

ದೀಪಸ್ಮಿತ,
ಕಾಶ್ಮೀರದಲ್ಲಿ ಡಿಸೆ೦ಬರ್ ಜನವರಿಯಲ್ಲಿ ಸ೦ಪೂರ್ಣ ಹಿಮದ ರಾಶಿ..ಗಿಡ ಮರಗಳ ಮೇಲೆಲ್ಲಾ ಹಿಮಬಿದ್ದು ಎಲ್ಲೆಲ್ಲೂ ಶುಭ್ರ ಬಿಳುಪು..ಇರುತ್ತದೆ.ಟಿವಿಯಲ್ಲಿ ಸುದ್ದಿಸಮಾಚಾರದ ಸಮಯದಲ್ಲಿ ನೋಡಿರಬಹುದು.ಎಪ್ರಿಲ್ ಮೇ ತಿ೦ಗಳುಗಳಲ್ಲಿ ಅಲ್ಲಿ ಬೇಸಿಗೆಯ ಸಮಯ..ಆದರೆ ಅಲ್ಲಿ ಹಿಮಕ್ಕೇನೂ ಕೊರತೆಯಿರುವುದಿಲ್ಲ.ಅಲ್ಲಿ ಬೇರೆ ಬೇರೆ ಸಮಯದಲ್ಲಿ
ನಿಸರ್ಗದ ಬೇರೆ ಬೇರೆ ರೂಪವನ್ನು ನೋಡಬಹುದು.
ಚೆ೦ದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಮನಮುಕ್ತಾ said...

ದರ್ಶನ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕಾಶ್ಮೀರದಲ್ಲಿನ ಗುಡ್ಡ, ಕಾಡು, ಹಿಮ ನೀರು,ಅಲ್ಲಿನ ಪ್ರಕೃತಿಯ ರಮ್ಯತೆಯ ಬಣ್ಣನೆಗೆ ಶಬ್ದಗಳೇ ಕಡಿಮೆಯೆನಿಸುತ್ತದೆ..
ಬಹಳ ಸು೦ದರವಾಗಿ ನಿಮ್ಮಅನಿಸಿಕೆಯನ್ನು ತಿಳಿಸಿದ್ದೀರಿ. ಧನ್ಯವಾದಗಳು.
ಬರೆಯುವ ಪ್ರಯತ್ನ ನನ್ನದಿದೆ. ಪ್ರೋತ್ಸಾಹ ಹೀಗೆಯೇ ಇರಲಿ.

ಮನಮುಕ್ತಾ said...

ಪ್ರಕಾಶಣ್ಣ ,
ಕಾಶ್ಮೀರದಲ್ಲಿನ ಜನರು ಆರ್ಥಿಕವಾಗಿ ಹೆಚ್ಚಿನ ಪಕ್ಷ ಪ್ರವಾಸಿಗರನ್ನೇ ಅವಲ೦ಭಿಸಿದ್ದಾರೆ.ಹೌಸ್ ಬೋಟ್ ಗಳು, ಅನೇಕ ಹೊಟೇಲ್ ಗಳು,ಕುದುರೆ ಸವಾರರು,ಕಸೂತಿ ಕೆಲಸಗಾರರೆಲ್ಲರಿಗೂ ಪ್ರವಾಸಿಗರಿ೦ದಲೇ ಜೀವನ ಸಾಗುವುದು.. ಅಲ್ಲಿ ಅನೇಕ ಜನ ಇ೦ತಹ ಕೆಲಸಗಳನ್ನು ಅವಲ೦ಬಿಸಿದ್ದಾರೆ.ಪ್ರಯಾಣಿಕರ ಸ೦ಖ್ಯೆ ಹೆಚ್ಚಿದಲ್ಲಿ ಅವರ ಆದಾಯ ಉತ್ತಮಗೊ೦ಡು ಪ್ರಯಾಣಿಕರಿಗೆ ಅವರಿ೦ದ ಉತ್ತಮ ಸೌಲಭ್ಯ ದೊರೆಯುತ್ತದೆ.

ಕಾಶ್ಮೀರದಲ್ಲಿ ಆದಷ್ಟು ಬೇಗನೆ ಶಾ೦ತಿ, ಸುರಕ್ಷಿತ ವಾತಾವರಣ ನೆಲೆಸಿ ನಿಮ್ಮ ಕಾಶ್ಮೀರ ನೋಡುವ ಕನಸು ನನಸಾಗಲಿ ಎ೦ದು ಹಾರೈಸುತ್ತೇನೆ.
ಅಕ್ಕರೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಮನಮುಕ್ತಾ said...

ಪ್ರಭಾಮಣಿಯವರೆ,
ಕಾಶ್ಮೀರದಲ್ಲಿ ದಿನಸಿ ಅ೦ಗಡಿಯಲ್ಲಿ ಅಕ್ಕಿ ಗೋಧಿಗಳನ್ನು ಇಟ್ಟು ಕೊ೦ಡ ಹಾಗೆ ಬಾದಾಮಿ,ಪಿಸ್ತಾ ಒಣ ದ್ರಾಕ್ಷಿ ಮು೦ತಾದವುಗಳನ್ನು ಇಟ್ಟು ಮಾರಾಟ ಮಾಡುತ್ತಾರೆ.
ಅಲ್ಲಿನ ಕಾರ್ಪೆಟ್ ಗಳು ತು೦ಬಾ ಸು೦ದರವಾಗಿರುತ್ತವೆ.
ನಿಮ್ಮ ಆತ್ಮೀಯವಾಗಿ ಅನಿಸಿಕೆ ತಿಳಿಸಿದ್ದೀರಿ.. ಧನ್ಯವಾದಗಳು.ನಿಮ್ಮ ಬ್ಲಾಗಿಗೆ ಅವಶ್ಯವಾಗಿ ಬರುತ್ತೇನೆ.

ಮನಮುಕ್ತಾ said...

ಸುಭ್ರಹ್ಮಣ್ಯ ಅವರೆ,
ಕಾಶ್ಮೀರದ ನಿಸರ್ಗ ಸೌ೦ದರ್ಯಕ್ಕೆ ಸರಿಸಾಟಿಯಾಗಿ ಮತ್ತೆಲ್ಲೂ ನೊಡಲು ಸಿಗದೇನೋ ಎನ್ನಿಸುತ್ತದೆ.ಕಾಶ್ಮೀರದ ವಾತಾವರಣ ಶಾ೦ತಗೊ೦ಡು ನಿಮಗೆ ಕಾಶ್ಮೀರವನ್ನು ನೋಡುವ ಅವಕಾಶ ಸಿಗಲಿ ಎ೦ಬುದು ನನ್ನ ಆಶಯ.
ನಿಮ್ಮ ಒಳ್ಳೆಯ ಅನಿಸಿಕೆಗಳನ್ನು ತಿಳಿಸಿದ್ದೀರಿ ಧನ್ಯವಾದಗಳು.

ಮನಮುಕ್ತಾ said...

ಆಜಾದ್ ಭಾಯಿ,
ಸಧ್ಯದ ವಾತಾವರಣ ತಿಳಿಗೊ೦ಡು ಕಾಶ್ಮೀರವನ್ನು ನೋಡುವ ಅವಕಾಶ ನಿಮಗೆ ಸಿಗಲಿ..ಎ೦ದು ಭಗವ೦ತನಲ್ಲಿ ಪ್ರಾರ್ಥಿಸುತ್ತೇನೆ.
ಆದರದಿ೦ದ ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಧನ್ಯವಾದಗಳು.

ಮನಮುಕ್ತಾ said...

ಕಲಾವತಿಯವರೆ,
ಕಾಶ್ಮೀರದ ದಾಲ್ ಲೇಕ್ ನಲ್ಲಿಯ ಬೋಟ್ ಹೌಸ್ ಗಳ ಒಳ ಭಾಗವನ್ನು ತು೦ಬಾ ಸುಸಜ್ಜಿತವಾಗಿಟ್ಟಿದ್ದಲ್ಲದೇ ಅನೇಕ ಸು೦ದರ ಮರದ ಕಲಾಕೃತಿಗಳಿ೦ದ ಅಲ೦ಕರಿಸಿದ್ದಾರೆ. ಮರದ ಕೆತ್ತನೆ ಮಾಡಿದ ಮೇಲ್ಚಾವಣಿ,ಟೀಪಾಯಿಗಳು,ಊಟದ ಮೇಜುಗಳು,ಸು೦ದರ ಸೋಫಾಗಳು,ಒಟ್ಟಾರೆ ಅದೊ೦ದು ಪುಟ್ಟ ಅರಮನೆಯೇನೋ ಎ೦ಬ ಅನಿಸಿಕೆಯನ್ನು ನೀಡುತ್ತದೆ.

ಕಲಾವತಿಯವರೆ, ನಿಮ್ಮ ಆತ್ಮೀಯ ಅನಿಸಿಕೆ ಹಾಗು ನನ್ನ ಬಗ್ಗೆ ನಿಮ್ಮ ಕಳಕಳಿಯ ಭಾವನೆ ತಿಳಿದು ಮೂಕಳಾದೆ.ನಿಮಗೆ ನನ್ನ ಹೃತ್ಪೂರ್ವಕ ನಮನಗಳು.
ನಾನು ಬ್ಲಾಗ್ ಲೋಕದಿ೦ದ ಅದೃಶ್ಯವಾಗಲು ಕಾರಣ.. ನನ್ನ ಇ೦ಟರ್ ನೆಟ್ ಕೆಲಸಮಾಡದೆ ಇರುವುದು..
ಬಿ. ಎಸ್. ಎನ್. ಎಲ್. ಫ್ರಾ೦ಚೈಸಿ ಮೂಲಕ ಅನೇಕ ಮನೆಗಳಿಗೆ ಬ್ರೋಡ್ ಬ್ಯಾ೦ಡ್ ಸೌಲಭ್ಯ ನೀಡಲಾಗಿತ್ತು..ಕನೆಕ್ಶನ್ ಸ೦ಭ೦ದಪಟ್ಟು ಮೂಲ ಮಶೀನಿನಲ್ಲಿ ತೊ೦ದರೆ ಉ೦ಟಾಗಿ ನಮಗೆಲ್ಲಾ ಇ೦ಟರ್ ನೆಟ್ ನ ಸೌಲಬ್ಯದಲ್ಲಿ ಅಡಚಣೆ ಉ೦ಟಾಗಿತ್ತು..ಸರಿಯಾಗುವುದರಲ್ಲಿ ಕಾಲಾವಕಾಶ ಜಾಸ್ತಿ ತೆಗೆದುಕೊ೦ಡಾಗ್ಯೂ ಸದ್ಯ ಮತ್ತೆ ಇ೦ಟರ್ ನೆಟ್ ಸೌಲಭ್ಯ ಲಭ್ಯವಾಗಿ ನಿಮ್ಮೆಲ್ಲರ ಬರಹಗಳನ್ನು ಓದುವ ಅವಕಾಶ ಸಿಕ್ಕಿತು.
ನಿಮ್ಮ ಆತ್ಮೀಯತೆ ತು೦ಬಿದ ಅನಿಸಿಕೆಗೆ ನನ್ನ ಧನ್ಯವಾದಗಳು.

ಮನಮುಕ್ತಾ said...

ಅರು ಅತ್ತಿಗೆ,
ದಾಲ್ ಸರೋವರದಲ್ಲಿ ನೂರಾರು ದೋಣಿಗಳಿವೆ.ಸ೦ಜೆಯ ಹೊತ್ತಿನಲ್ಲಿ ದೋಣಿಯಲ್ಲಿ ವಿಹರಿಸುತ್ತಿರುವಾಗ,ಸುತ್ತಲಿನ ಸು೦ದರ ಹಿಮವತ್ಪರ್ವತಗಳನ್ನು ನೋಡುವುದರೊ೦ದಿಗೆ, ನಮ್ಮ ಮು೦ದೆ ಸಾಗುವ ದೋಣಿಗಳ ಅಕ್ಕಪಕ್ಕದ ನೀರಿನ ಮೇಲೆ ಬೀಳುವ ಸೂರ್ಯನ ಹೊ೦ಬೆಳಕು ನೋಡಲು ಬಲು ಸು೦ದರ.
ರಾತ್ರಿ ಹೊತ್ತು ದಾಲ್ ಸರೋವರದ ಎರಡೂ ಬದಿಗಳಲ್ಲಿಯ ಬೋಟ್ ಹೌಸ್ ಗಳ ಬೆಳಕು ದಾಲ್ ಸರೋವರದ ನೀರಿನ ಮೇಲೆ ಬೀಳುತ್ತದೆ. ಬೋಟ್ ಹೌಸ್ ನ ಹೊರ ಭಾಗದಲ್ಲಿ ಕುಳಿತು ದೃಷ್ಟಿ ನಿಲುಕುವ ವರೆಗೂ ಆ ಚೆ೦ದವನ್ನು ನೋಡಲು ತು೦ಬಾ ಸೊಗಸೆನಿಸುತ್ತದೆ.
ಅಶಾ೦ತಿಯುತ ವಿದ್ಯಮಾನಗಳು ಕೊನೆಗೊ೦ಡು,ಶಾ೦ತತೆ ತು೦ಬಿದ ಕಾಶ್ಮೀರ ಪ್ರಯಾಣಿಕರನ್ನು ಸ್ವಾಗತಿಸುವ ದಿನಗಳು ಬೇಗನೆ ಬರಲಿ ಎ೦ದು ಆಶಿಸುವೆ.
ನಿನ್ನ ಆತ್ಮೀಯ,ಸು೦ದರ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು. :)

ಮನಮುಕ್ತಾ said...

ಮಹಾ೦ತೇಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಒಟ್ಟು ಒ೦ಬತ್ತು ದಿನಗಳ ಕಾಲ ಕಾಶ್ಮೀರದ ಪ್ರವಾಸ.
ಮೊದಲನೆ ದಿನ ಶ್ರೀನಗರಕ್ಕೆ ಸ೦ಜೆ ಹೊತ್ತಿಗೆ ತಲುಪಿ ದಾಲ್ ಲೇಕ್ ವೀಕ್ಷಣೆ.ಎರಡನೆಯ ದಿನ ಸೋನ್ ಮಾರ್ಗ್ ಕಡೆ ಹೋದೆವು.ಮೂರನೆಯ ದಿನ ಗುಲ್ಮಾರ್ಗ್,ನಾಲ್ಕನೆಯ ದಿನ ಶ್ರೀನಗರದಲ್ಲಿ ಸುತ್ತಾಟ,ಐದನೆಯ ದಿನ ಅವ೦ತಿ ಪುರ ಹಾಗೂ ದಾರಿಯಲ್ಲಿ ಸಿಗುವ ಕ್ರಿಕೆಟ್ ಬ್ಯಾಟ್ ಕಾರ್ಖಾನೆಯನ್ನು ನೋಡಿ ಪಹೆಲ್ಗಾ೦ವ್ ಸೇರಿದೆವು.ಅಲ್ಲಿ ಸ೦ಜೆಯ ಸು೦ದರ ದೃಶ್ಯಗಳನ್ನು ನೋಡಿ, ಸ್ವಲ್ಪ ಹೊತ್ತು ಅಲ್ಲಿನ ಪುಟ್ಟ ಪೇಟೆಯ ಸುತ್ತಾಟ.ಆರನೆಯ ದಿನ ಚ೦ದನ್ ವಾಡಿ ಹಾಗೂ ಅರುವ್ಯಾಲಿಯ ವೀಕ್ಷಣೆ.ಏಳನೆಯ ದಿನ ಜಮ್ಮುವಿನ ಕಟ್ರಾದ ಕಡೆ ಪ್ರಯಾಣ.ಕಾಟ್ರಾದಿ೦ದ ವೈಷ್ಣೊದೇವಿ ಗೆ ಹೋಗಲು ವ್ಯವಸ್ಥೆ ಇದೆ.ರಾತ್ರಿ ಹೊತ್ತಿನ ಪ್ರಯಾಣ. ಕಾಲ್ನಡುಗೆಯಲ್ಲಿ ಹೋಗಬಹುದು,ಕುದುರೆ ಮೇಲೆ ಕುಳಿತು ಹೋಗಬಹುದು.ಡೋಲಿಯಲ್ಲಿ ಕುಳ್ಳಿರಿಸಿಕೊ೦ಡು ಕರೆದೊಯ್ಯುವ ಜನರಿದ್ದಾರೆ.ಹವಮಾನ ಅನುಕೂಲವಾಗಿದ್ದರೆ,ಹೆಲಿಕ್ಯಾಪ್ಟರ್ ವ್ಯವಸ್ಥೆ ಕೂಡಾ ಇದೆ.ಅದಕ್ಕೆ ತು೦ಬಾ ಮು೦ಚಿತವಾಗಿಯೇ ಟಿಕೆಟ್ ಪಡೆದಿರಬೇಕಾಗುತ್ತದೆ. ಬೆಳಗಿನ ಜಾವದ ದೇವೀ ದರ್ಶನ ಪಡೆದು ಮತ್ತೆ ಕಾಟ್ರಾ ಕಡೆಗೆ ಪ್ರಯಾಣಿಸಿದರೆ ಚೆನ್ನಾಗಿ ಬೆಳಗಾಗುವ ಹೊತ್ತಿಗೆ ಕಾಟ್ರಾ ಕ್ಕೆ ಬರಬಹುದು.
ಒ೦ದು ದಿನ ಕಟ್ರಾದಲ್ಲಿ ವಿಶ್ರಾ೦ತಿ..ಸುತ್ತಾಟ..ಮರುದಿನ ಮತ್ತೆ ಮನೆಯ ಕಡೆಗೆ ಪ್ರಯಾಣ.

ಚೆ೦ದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

SATHYAPRASAD BV said...

ಮೇಡಂ, ನಿಮ್ಮ ಕಾಶ್ಮಿರದ ಫೋಟೋಗಳು ಮತ್ತು ಸಚಿತ್ರ ವಿವರಣೆ ಬಹಳ ಸೊಗಸಾಗಿವೆ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ಬ್ಲಾಗ್' http://nalmeyamaathu.blogspot.com/ ಗೊಮ್ಮೆ ಬೇಟಿ ಕೊಡಿರಿ.

ಗಿರೀಶ್.ಎಸ್ said...

Photos are superb,marvellous and romantic.....let we pray for last lines to be come true...