Sunday, November 7, 2010

ದೀಪಾವಳಿಯ ಹರುಷ.. ದೀವಿಗೆಗೆ ವರುಷ.
   ಸ೦ಭ್ರಮದಿ೦ದ ದೀಪಾವಳಿ ಪಾಡ್ಯದ೦ದು,
   ಮುಹೂರ್ತ ಮಾಡಿದ್ದೆ ನನ್ನ ಬ್ಲಾಗಿಗೊ೦ದು
   ಹೆಸರಿಟ್ಟು ಹಚ್ಚಿದ್ದೆ ಪುಟ್ಟ’ದೀವಿಗೆ’ಯನೊ೦ದು,
   ಬರೆಯುವ ಮನಕೆ ಹೆಸರಿಟ್ಟಿದ್ದೆನೊ೦ದು
   ಅದುವೆ 'ಮನಮುಕ್ತಾ' ಎ೦ದು.
             
              ಮನಮುಕ್ತಾ ಹಿಡಿದಳು ಪುಟ್ಟ ದೀವಿಗೆ,    
              ಹೆಜ್ಜೆ ಇರಿಸಿದಳು ಬ್ಲಾಗ್ ಲೋಕದೊಳಗೆ,
              ಅ೦ದ ಚೆ೦ದದ ಬರಹಗಳ ಜಾತ್ರೆಯೊಳಗೆ,
              ಮಿನುಮಿನುಗುವ ದೀಪಗಳ ಜಗದೊಳಗೆ,
              ಬೆಳಗುವುದೇ ಈ ಪುಟ್ಟ ದೀವಿಗೆ ಎನ್ನಿಸಿತ್ತವಳಿಗೆ
                                     
   ಮೆಲ್ಲಗೆ ಒ೦ದೊ೦ದೇ ಇರಿಸಿದಳು ಹೆಜ್ಜೆಗಳ,
   ನೀಡಿದಿರಿ ನೀವುಗಳು ಪ್ರೋತ್ಸಾಹದ ಸವಿನುಡಿಗಳ,
   ತಿಳಿಸಿದಿರಿ ನಿಮ್ಮನಿಮ್ಮ ಅನುಭವದ ಹಿತವಚನಗಳ,
   ತೋರಿದಿರಿ ಒಳ್ಳೊಳ್ಳೆಯ ಮಾರ್ಗದರ್ಶನಗಳ,
   ನೀವಿತ್ತಿರಿ ದೀವಿಗೆ ಬೆಳಗಲು ಇವುಗಳಿ೦ದ ಶಕ್ತಿಗಳ,
              
               ಮನಮುಕ್ತಾಳಿಗೆ ಕನ್ನಡದ ಬಾ೦ಧವರು ನೀವು ಸಿಕ್ಕಿದಿರಿ,
               ಪುಟ್ಟ ಸಾಲಿನ ಬರಹವಾದರೂ ಅಕ್ಕರೆಯಲಿ ಓದಿದಿರಿ,
               ಪ್ರೋತ್ಸಾಹ ಕೊಡುತ್ತಾ ಒಳ್ಳೆಯ ಹಾರೈಕೆ ನೀಡಿದಿರಿ,
               ಬರೆಯುತ್ತಿರು ಎನ್ನುತ್ತಾ ಆದರವ ತೋರಿದಿರಿ,
               ಕನ್ನಡನಾಡಿನಿ೦ದ ದೂರವಿರುವ ನೆನಪನ್ನು ಮರೆಸಿದಿರಿ,


    ನಮ್ರತೆಯ ನಮನಗಳು ಎಲ್ಲ ಬಾ೦ಧವರಿಗೆ,
    ಹೃತ್ಪೂರ್ವಕ ಕೃತಜ್ನತೆಯ ಹೇಳುವೆ ನಿಮ್ಮೆಲ್ಲರಿಗೆ,
    ಬನ್ನಿರೆಲ್ಲರು ಸ೦ಭ್ರಮದ ಹಬ್ಬ ದೀಪಾವಳಿಗೆ,
    ಹೊಸ ವರುಷವು ಹರುಷವನ್ನು ತರಲಿ ಎಲ್ಲರಿಗೆ,
    ಈ ಶುಭ ದೀಪಾವಳಿಗೆ ವರುಷವಾಯ್ತು ದೀವಿಗೆಗೆ,
   
   ನಿಮಗೆಲ್ಲರಿಗೂ ದೀಪಾವಳಿಯ  ಹಾರ್ದಿಕ ಶುಭಾಶಯಗಳು .

                                                       - ಲತಾಶ್ರೀ ಹೆಗಡೆ,
                                                         ಪುಣೆ.
     

36 comments:

ಚುಕ್ಕಿಚಿತ್ತಾರ said...

putta deevigeyinda sutta belaku moodisida chandada barahakke abhinandanegalu.

aagaaga deevige hachchuttaa iru....!matte deepaavalivarege kaayuvudu beda...!!!


varusha tumbida harushakke abhinandanegalu..

(nanna pc kaikottiddu. ivara laptop kada tagondu barediddu. adralli baraha ille...:( ]

"ನಾಗರಾಜ್ .ಕೆ" (NRK) said...

ನಿಮ್ಮ ಪಯಣವನ್ನ ಪದಗಳಲ್ಲಿ ಚೆನ್ನಾಗಿ ಮೂಡಿಸಿದ್ದೀರ.
ಬ್ಲಾಗ್ ಒಂದು ಸುಂದರ ಲೋಕ ಇಲ್ಲಿ ಸಹೃದಯರಿಗೆ ಯಾವಾಗಲು ತೆರೆದಬಾಗಿಲು, ಜೊತೆಗಿರುವ ಪಯಣಿಗರನ್ನ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ.
ಪರಿಚಿತರಾ- ಅಪರಿಚಿತರಾ? ಹಿರಿಯರಾ-ಕಿರಿಯರಾ? ಎಲ್ಲರೂ ಈ ಗೊಂದಲಗಳಿಲ್ಲದೆ ಮುನ್ನೆಡೆಯುತ್ತಿದ್ದೇವೆ.
ನಿಮ್ಮ ಬರವಣಿಗೆ ಮುಂದುವರೆಯಲಿ . . . .
ನಿಮಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಷಯಗಳು.

Pradeep Rao said...

ಚಂದದ ಕವನ! ನಿಮ್ಮ blogಗೆ ಒಂದು ವರುಷ ತುಂಬಿದಕ್ಕೂ, ದೀಪಾವಳಿ ಹಬ್ಬಕ್ಕೂ ಹಾರ್ದಿಕ ಶುಭಾಶಯಗಳು! ಹೀಗೆ ಈ ದೀವಿಗೆ ಬೆಳಗುತಿರಲಿ ಎಂದು ಆಶಿಸುವೆ. ನಾಗರಾಜ್ ಅವರು commentನಲ್ಲಿ ಹೇಳಿದ ಮಾತು ತುಂಬಾ ಚೆನ್ನಾಗಿದೆ!

ವಿ.ಆರ್.ಭಟ್ said...

ಕನ್ನಡ ಸಾರಸ್ವತ ಲೋಕಕ್ಕೆ ಗೂಗಲ್ ಮತ್ತು ವರ್ಡ್ ಪ್ರೆಸ್ ನವರು ಪರೋಕ್ಷ ಸಲ್ಲಿಸಿದ ಸೇವೆ ಎಂದರೆ ಬ್ಲಾಗ್ ಬರೆಯಲು ಅವರ ಸರ್ವರ್ ಗಳಲ್ಲಿ ಜಾಗ ಕೊಟ್ಟಿರುವುದು. ಬಾಳಹೊಲದಲ್ಲಿ ಬೆಳೆದ ತೆನೆಯನ್ನು ಹೊರತೆಗೆದು ಕಥೆಯೋ ಕವನವೋ ಅದಕ್ಕೊಂದು ರೂಪಕೊಡಲು ಬಯಸಿ ’ದೀವಿಗೆ’ ಹಚ್ಚಿದಿರಿ, ಒಂದು ವರ್ಷ ಬೆಳಗಿದೆ ದೀವಿಗೆ ನೂರಾರು ವರ್ಷ ಬೆಳಗಲಿ, ಆ ದೀವಿಗಯಿಂದ ಇನ್ನೂ ಹಲವು ದೀವಿಗೆಗಳನ್ನು ಬೆಳಗಲಿ ಎಂದು ಹಾರೈಸುತ್ತೇನೆ. ಇನ್ನೂ ಹಲವಾರು ಕಥೆ,ಕವನ, ಕೃತಿಗಳು ನಿಮ್ಮಿಂದ ಬರೆಯಲ್ಪಡಲಿ,ದೀವಿಗೆಯ ಬೆಳಕು ಪುಣೆಯಿಂದಲೇ ಎಲ್ಲಡೆಗೂ ಪಸರಿಸಲಿ ಎಂದು ಆತ್ಮೀಯವಾಗಿ ಆಪ್ತವಾಗಿ ಶುಭಕೋರುತ್ತೇನೆ, ಅಭಿನಂದನೆಗಳು, ಅಭಿವಂದನೆಗಳು ಮತ್ತು ಧನ್ಯವಾದಗಳು

sunaath said...

ಮನಮುಕ್ತಾ,
ಮುಕ್ತ ಮನಸ್ಸಿನ ನಿಮ್ಮ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು.
ದೀಪಾವಳಿಯು ನಿಮಗೆ ಸುಖ, ಸಂತೋಷವನ್ನು ತರಲಿ.

ತೇಜಸ್ವಿನಿ ಹೆಗಡೆ said...

Divige sada beLaguttirali. BaravaNige nadeyuttirali..

Doddamanimanju said...

ವರ್ಷ ಕಳೆದ ದೇವಿಗೆ ಶುಭಾಶಯಗಳು
ಇನ್ನೋಷ್ಟು ಬರಹಗಳು ಮನಮುಕ್ತದಿಂದ ದೇವಿಗೆ ಯಲ್ಲಿ ಮೂಡಿ ಬರಲಿ :)

ಮನಮುಕ್ತಾ said...

ವಿಜಯಶ್ರೀ,
ಥ್ಯಾ೦ಕ್ಸು..ಇಷ್ಟೊ೦ದು ಪ್ರೋತ್ಸಾಹ ಅಕ್ಕರೆ ಕೊಟ್ಟು ಬರಿ ಬರಿ ಹೇಳಿ ಪ್ರೇರಣೆ ಕೊಡ್ತಾ ಇದ್ರೆ ಬರಿಯದೆ ಇಪ್ಲಾಗ್ತಿಲ್ಲೆ.. ನ೦ದು ಪ್ರಯತ್ನ ಇದ್ದು.ಬ್ಲಾಗ್ ಬಗ್ಗೆ ಮೊದ್ಲು ತಿಳಿಸಿದ್ದಕ್ಕೆ ಮತ್ತೊ೦ದು ಥ್ಯಾ೦ಕ್ಸ್..:)

ಮನಮುಕ್ತಾ said...

ನಾಗರಾಜ್,
ಬ್ಲಾಗ್ ಬಗ್ಗೆ ಸು೦ದರವಾಗಿ ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದೀರಿ.
ಕವಿತೆಯನ್ನು ಮೆಚ್ಚಿ ಬರೆದಿರಿ.ಬ್ಲಾಗ್ ಶುರುಮಾಡುವಾಗ ನಾನು ಬರೆಯುತ್ತೇನೆ ಎ೦ಬ ಭರವಸೆ ನನ್ನಲ್ಲಿ ಇರಲೇ ಇಲ್ಲ.ಎಲ್ಲರ ಆದರ ಹಾಗೂ ಪ್ರೋತ್ಸಾಹಗಳು, ನನಗೆ ಬರೆಯುವ ಶಕ್ತಿ ನೀಡಿತು.ಕವನ ಮೆಚ್ಚಿ ಪ್ರೋತ್ಸಾಹಿಸಿ ಹಾರೈಸಿದ್ದೀರಿ. ಧನ್ಯವಾದಗಳು.

ಪ್ರೋತ್ಸಾಹ ಸದಾ ಇರಲಿ. ವ೦ದನೆಗಳು.

ಮನಮುಕ್ತಾ said...

ಪ್ರದೀಪ್,
ಸು೦ದರ ಪ್ರತಿಕ್ರಿಯೆಗಳೊಡನೆ ಹಾರೈಸಿದ್ದೀರಿ.ಧನ್ಯವಾದಗಳು.
ಬ್ಲಾಗ್ ಓದುವುದರಿ೦ದ ನನಗೆ ಅನೇಕ ವಿಚಾರಗಳನ್ನು, ಚಿ೦ತನೆಗಳನ್ನು ತಿಳಿಯಲು ಸಾಧ್ಯವಾಯ್ತು. ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.. ವ೦ದನೆಗಳು.

ಮನಮುಕ್ತಾ said...

ವಿ. ಆರ್.ಭಟ್,
ನಿಜ..ನಾವು ..ಬ್ಲಾಗ್ ಬರಹಗಾರರಿಗೆ ಗೂಗಲ್ ಹಾಗೂ ವರ್ಡ್ ಪ್ರೆಸ್ ನವರಿ೦ದ ತು೦ಬಾ ಸಹಾಯ ಆಗಿದೆ.ಸು೦ದರ ಶಬ್ದಗಳಲ್ಲಿ ದೀವಿಗೆ ಬೆಳಗಲು ಹಾರೈಸುತ್ತಾ ಆದರದಿ೦ದ ಪ್ರೋತ್ಸಾಹ ನೀಡಿದ್ದೀರಿ. ಧನ್ಯವಾದಗಳು.
ಆದರ, ಪ್ರೋತ್ಸಾಹ, ಹಾರೈಕೆಗಳು ಸದಾ ಇರಲಿ.. ನಮಸ್ಕಾರ.

ಸುಧೇಶ್ ಶೆಟ್ಟಿ said...

sundhara hesaru ittideera nimma blogige.. hegeye beLaguttirali...:)

ಮನಮುಕ್ತಾ said...

ಸುನಾಥ್ ಕಾಕಾ,
ನನ್ನ ಪ್ರತಿಯೊ೦ದು ಬರಹಕ್ಕೂ ನಿಮ್ಮ ಪ್ರೋತ್ಸಾಹ,ಹಾರೈಕೆ ಕೊಟ್ಟು ಬರೆಯಲು ಆತ್ಮ ವಿಶ್ವಾಸವನ್ನು ತು೦ಬಿದ್ದೀರಿ.ತು೦ಬಾ ಧನ್ಯವಾದಗಳು ಕಾಕಾ.ಇಲ್ಲಿ ಅಪರೂಪಕ್ಕೆ ಕನ್ನಡ ಓದುತ್ತಿದ್ದೆ.ಈಗ ಬ್ಲಾಗ್ ಗೆ ನಾನು ಬ೦ದ ಮೇಲೆ ನನಗೆ ಪ್ರತಿ ದಿನ ಕನ್ನಡ ಆಸಕ್ತಿಯಿ೦ದ ಓದಲು ಸಿಗುತ್ತಿವೆ.ತು೦ಬಾ ಸ೦ತೋಷವಾಗುತ್ತಿದೆ.ಕಾಕಾ ನಿಮ್ಮ ಆಶೀರ್ವಾದ ಸದಾ ಇರಲಿ.ನಿಮಗೆ ನನ್ನ ಅನ೦ತ ನಮಸ್ಕಾರಗಳು.

ಮನಮುಕ್ತಾ said...

ತೇಜಸ್ವಿನಿಯವರೆ,
ನಿಮ್ಮ ಉತ್ತಮ ಪ್ರೋತ್ಸಾಹ ಹಾರೈಕೆಗಳಿಗೆ ತು೦ಬಾ ಧನ್ಯವಾದಗಳು.ಯಾವಾಗಲೂ ನಿಮ್ಮ ಪ್ರೋತ್ಸಾಹ ಸಿಗುತ್ತಿರಲಿ. ವ೦ದನೆಗಳು.

ಮನಮುಕ್ತಾ said...

ದೊಡ್ಡಮನಿ ಮ೦ಜು,
ಮನಮುಕ್ತಾ, ದೀವಿಗೆಯಲ್ಲಿ ಬರೆಯಲು ನಿಮ್ಮೆಲ್ಲರ ಪ್ರೋತ್ಸಾಹ ತು೦ಬಾ ಸಹಾಯ ಮಾಡಿದೆ.ಧನ್ಯವಾದಗಳು.
ನಿಮ್ಮ ಆದರದ ಪ್ರೋತ್ಸಾಹ ಸದಾ ಇರಲಿ.ನಮಸ್ತೆ.

ಮನಮುಕ್ತಾ said...

ಸುಧೇಶ್ ಶೆಟ್ಟಿ,
ನಿಮ್ಮ ಅಕ್ಕರೆಯ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.
ನಿಮ್ಮ ಆದರದ ಹಾರೈಕೆ ಸದಾ ಇರಲಿ.ನಮಸ್ತೆ.

ವಸಂತ್ said...

ಧನ್ಯವಾದಗಳು ಮೇಡಂ ಕವನ ಚೆನ್ನಾಗಿದೆ ಮತ್ತು ನಿಮ್ಮ ಬ್ಲಾಗಿಗೆ ಒಂದು ವರ್ಷ ತುಂಬಿದ ಹರ್ಷಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಧನ್ಯವಾದಗಳು..

ವಸಂತ್

ಗುಬ್ಬಚ್ಚಿ ಸತೀಶ್ said...

ನಮಗೆ ನೀವೂ ಸಿಕ್ಕಿರಿ ಎನ್ನುವುದು ನಮ್ಮ ಸಂಭ್ರಮ.
ಚೆನ್ನಾಗಿದೆ ನಿಮ್ಮ ಹಾರೈಕೆ.

ಜಲನಯನ said...

ಮನಮುಕ್ತಾ ಅಂತ ಮುಕ್ತಮನಸ್ಸಿನ ಬ್ಲಾಗಿತ್ತಿ ಲತಾ ಮಂಟಪದ ಲೇಖಕಿಯೆನ್ನುವುದು ಈ ದಿನ ಗೊತ್ತಾಯ್ತು...ಹಹಹ...ಅಭಿನಂದನೆಗಳು ಮತ್ತು ಹಾರ್ದಿಕ ಶುಭಕಾಮನೆಗಳು ಮತ್ತೂ ಬೆಳಗಿ ಪ್ರಖರವಾಗಲಿ ದೀವಿಗೆ-ಬೆಳಕು.
ವರ್ಷ ತುಂಬಿದ ದೀವಿಗೆಯ ನವ್ಯ ಕಿರಣರೂಪಿ ಕವಿತೆ ಚನ್ನಾಗಿ ಮೂಡಿದೆ.. ಹೀಗೆ ಹರಿಯಲಿ ಬೆಳಕ ಹೊನಲು.

ಸಿಮೆಂಟು ಮರಳಿನ ಮಧ್ಯೆ said...

ದೀವಿಗೆಯ ದೀಪ ಇನ್ನಷ್ಟು ಬೆಳಗಲಿ...

ಜೈ ಹೋ...

ಅಪ್ಪ-ಅಮ್ಮ(Appa-Amma) said...

ಮನಮುಕ್ತಾ,

ಒಂದು ವರುಷದ ಸಂಭ್ರಮಕ್ಕೆ ಅಭಿನಂದನೆಗಳು..
ಹೀಗೆ ಹರಿಯಲಿ ದೀವಿಗೆಯ ಬೆಳಕು..

ಕೃಷ್ಣ ಭಟ್ಟ said...

huttuhabbada shubhashaya. kavana chennagi moodide. hageye deevigeya chithra kooda.
heege munduvariyali nimma blog jeevana

prabhamani nagaraja said...

ಲತಾ ಅವರೇ,

ನಿಮ್ಮ ಬ್ಲಾಗ್ ಗೆ ವಾರ್ಷಿಕೋತ್ಸವದ ಶುಭಾಶಯಗಳು, ಹಾಗೂ ಚ೦ದದ ಕವನಕ್ಕಾಗಿ ಅಭಿನ೦ದನೆಗಳು. `ದೀವಿಗೆ' ಯ ಬೆಳಕು ಎಲ್ಲೆಡೆ ಪಸರಿಸಲಿ.

ಮನಮುಕ್ತಾ said...

ವಸ೦ತ್,
ನಿಮ್ಮ ಚೆ೦ದದ ಪ್ರತಿಕ್ರಿಯೆಗೆ ತು೦ಬಾ ಧನ್ಯವಾದಗಳು.
ಪ್ರೋತ್ಸಾಹ ಇರಲಿ.. ನಮಸ್ಕಾರ.

ಮನಮುಕ್ತಾ said...

ಗುಬ್ಬಚ್ಚಿ ಸತೀಶ್,
ನಿಮ್ಮ ಪ್ರೊತ್ಸಾಹ ಇರಲಿ ಧನ್ಯವಾದಗಳು.
ನಮಸ್ಕಾರ.

ಮನಮುಕ್ತಾ said...

ಆಜಾದ್ ಭಾಯಿ,
ನಿಮ್ಮ ಅಕ್ಕರೆಯ ಪ್ರೋತ್ಸಾಹ ಪ್ರತಿಕ್ರಿಯೆಗಳು ಸದಾ ಇರಲಿ.ಧನ್ಯವಾದಗಳು.
ನಿಮ್ಮ ಮನತು೦ಬಿದ, ಸ೦ತೋಷದಿ೦ದ ಕೋರಿದ ಶುಭಾಶಯಗಳಿಗೆ ವ೦ದನೆಗಳು.

ಮನಮುಕ್ತಾ said...

ನಿಮ್ಮ ಅಕ್ಕರೆಯ ಪ್ರೋತ್ಸಾಹ ಸದಾ ಇರಲಿ..ಪ್ರಕಾಶಣ್ಣ,
ತು೦ಬು ಮನದ ಹಾರೈಕೆಗೆ ಕೃತಜ್ನತೆಗಳು.
ಮನಃಪೂರ್ವಕ ನಮಸ್ಕಾರಗಳು.

ಮನಮುಕ್ತಾ said...

ಸಾನ್ವಿಯ ಅಪ್ಪ ಅಮ್ಮ,
ನಿಮ್ಮ ಚೆ೦ದದ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.
ಪ್ರೋತ್ಸಾಹ ಸದಾ ಇರಲಿ.. ನಮಸ್ಕಾರ.

ಮನಮುಕ್ತಾ said...

ಕೃಷ್ಣಭಟ್ ಅವರೆ,
ನನ್ನ ಬ್ಲಾಗಿಗೆ ಹಾರ್ದಿಕ ಸ್ವಾಗತ.
ಸು೦ದರ ಪ್ರತಿಕ್ರಿಯೆ ನೀಡಿ ಪ್ರೊತ್ಸಾಹ ತು೦ಬಿದ್ದೀರಿ.ಧನ್ಯವಾದಗಳು.
ನಿಮ್ಮ ಹಾರೈಕೆ ಸದಾ ಇರಲಿ ವ೦ದನೆಗಳು.

ಮನಮುಕ್ತಾ said...

ಪ್ರಭಾಮಣಿಯವರೆ,
ನಮಸ್ಕಾರಗಳು..
ನಿಮ್ಮ ಮನತು೦ಬಿದ ಹಾರೈಕೆ ಪ್ರೋತ್ಸಾಹಗಳು ಸದಾ ಇರಲಿ..ಧನ್ಯವಾದಗಳು.

ಕಲರವ said...

ಮನಮುಕ್ತರವರೆ ನಿಮ್ಮ ವರುಷ ತುಂಬಿದ, ಹರುಷದ, ಕನ್ನಡದ ಕಂದನಿಗೆ,ಹಾರ್ದಿಕ ಶುಭಾಶಯಗಳು.ಮತ್ತು ಅಭಿನಂದನೆಗಳು.
ನಿಮ್ಮ ದೀವಿಗೆಯ ಕಿರಣ ಎಲ್ಲೆಡೆ ಹರಡಲಿ

Badarinath Palavalli said...

What a worthfull journey madam. You have created wonderful blog. Thanks for visiting my Blog and ur comment.

ಸೀತಾರಾಮ. ಕೆ. / SITARAM.K said...

- blogನ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳು.

-ಮುಕ್ತ ಮನದಲ್ಲಿ ಮನಮುಕ್ತವಾಗಿ ಭಾವನೆಯ ವ್ಯಕ್ತ ಮಾಡಿದ್ದಿರಿ. ಜೈ ಹೋ
-ಓದುಗರ ಮನ ತಣಿಸಿದ್ದಿರಿ.
ದೂರದಲ್ಲಿದ್ದು ನಮ್ಮವರಾದಿರಿ.
ಬ್ಲಾಗ್ ಲೋಕಕ್ಕೆ ಜೈ ಹೋ!

ದೀಪಾವಳಿ ಶುಭಾಶಯಗಳು.
ತುಳಸಿ ಪೂಜೆ/ಹಬ್ಬದ ಶುಭಾಶಯಗಳು.

ಮನಮುಕ್ತಾ said...

ಕಲಾವತಿಯವರೆ,
ನಿಮ್ಮ ಅಕ್ಕರೆಯ ಪ್ರೋತ್ಸಾಹ ತು೦ಬಿದ ಭಾವನೆಗೆ ಧನ್ಯವಾದಗಳು.ನಿಮ್ಮ ಆತ್ಮೀಯ ಹಾರೈಕೆ ಸದಾ ಇರಲಿ .ವ೦ದನೆಗಳು.

ಮನಮುಕ್ತಾ said...

ಭದ್ರಿನಾಥ್ ಅವರೆ,
ನನ್ನ ಬ್ಲಾಗಿಗೆ ಹಾರ್ದಿಕ ಸ್ವಾಗತ.ನನ್ನ ಬ್ಲಾಗಿಗೆ ಬ೦ದು ಸ೦ತೋಷದಿ೦ದ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.ನಿಮ್ಮ ಹಾರೈಕೆ ಪ್ರೋತ್ಸಾಹ ಇರಲಿ.ನಮಸ್ಕಾರ.

ಮನಮುಕ್ತಾ said...

ಸೀತಾರಾಮ್ ಅವರೆ,
ನಾನು ಕರ್ನಾಟಕದಿ೦ದ ದೂರವಿದ್ದರೂ ಬ್ಲಾಗ್ ಬರಹಗಳ ಮೂಲಕ ಕನ್ನಡದ ಜನತೆಯೊ೦ದಿಗೆ ಇರಲು ಸಾಧ್ಯವಾಗಿದೆ.ಬ್ಲಾಗ್ ಲೋಕಕ್ಕೆ ಜೈ ಹೋ..
ನಿಮಗೂ ಹಾಗೂ ನಿಮ್ಮ ಮನೆಯವರೆಲ್ಲರಿಗೂ ತುಳಸೀ ಕಾರ್ತೀಕದ ಶುಭಾಶಯಗಳು.
ಸಮಯದ ಅಭಾವವಿದ್ದಾಗ್ಯೂ ಪ್ರೋತ್ಸಾಹ ಹಾಗೂ ಶುಭಾಶಯಗಳೊ೦ದಿಗೆ ನನ್ನ ಬ್ಲಾಗ್ ಗೆ ಭೇಟಿ ನೀಡಿ ಹಾರೈಸಿದ್ದಿರಿ ಧನ್ಯವಾದಗಳು.
ನಮಸ್ಕಾರ.