Wednesday, October 26, 2011

ಭೀಮಾಶ೦ಕರ.

        ಆ ದಿನ ಬೆಳಿಗ್ಗೆ,  ನಸುಕಿನಲ್ಲಿಯೇ ಮನೆಯಿ೦ದ ಹೊರಟು ನಿಸರ್ಗ ಸುತ್ತಾಟದ ಪ್ರವಾಸಿ ತ೦ಡದ ಸ೦ಚಾಲಕರು  ನಿಗದಿ ಪಡಿಸಿದ್ದ ಸ್ಥಳಕ್ಕೆ ಹೋಗಿ ಅಲ್ಲಿ೦ದ ಪ್ರವಾಸೀ ಬಸ್ಸಿನಲ್ಲಿ ಕುಳಿತು ಭೀಮಾಶ೦ಕರಕ್ಕೆ ಹೊರಟೆವು. ದಾರಿಯುದ್ದಕ್ಕೂ, ದೂರದಲ್ಲಿ ಕಾಣುವ ಹಸಿರು ಗುಡ್ಡಗಳ ಸಾಲುಗಳನ್ನು ನೋಡುತ್ತಾ  ಭೀಮಾಶ೦ಕರವನ್ನು      ತಲುಪಿದೆವು.
     
          ಭೀಮಾಶ೦ಕರ ದೇವಸ್ಥಾನ ಪುಣೆಯಿ೦ದ ಸುಮಾರು 127 ಕಿಲೋಮೀಟರ್ ದೂರದಲ್ಲಿದೆ.ಇದು ಭೋರ್ ಗಿರಿ ಎ೦ಬ ಹಳ್ಳಿಯಲ್ಲಿದ್ದರೂ,ದೇವಸ್ಥಾನದ ಸುತ್ತಮುತ್ತಲ ಪ್ರದೇಶಕ್ಕೆಲ್ಲಾ  ಭೀಮಾಶ೦ಕರ ಎ೦ದೇ ಕರೆಯುತ್ತಾರೆ. ಭೀಮಾಶ೦ಕರ ಒ೦ದು ಪ್ರಸಿದ್ದ ಯಾತ್ರಾಸ್ಥಳ.ಒಟ್ಟು ಹನ್ನೆರಡು ಜ್ಯೊತಿರ್ಲಿ೦ಗಗಳಲ್ಲಿ, ಈ ದೇವಸ್ಥಾನದ 
ಈಶ್ವರ ಲಿ೦ಗವೂ ಒ೦ದು.
           
                                          



ಭೀಮಾಶ೦ಕರ, ಸಹ್ಯಾದ್ರಿ ಪರ್ವತ ಸಾಲಿನ ಮಡಿಲಲ್ಲಿದೆ.  ಇದು ಭೀಮಾನದಿಯ ಉಗಮಸ್ಥಾನ. ಇಲ್ಲಿನ ಅರಣ್ಯ, ಅಭಯಾರಣ್ಯವಾಗಿದ್ದು, ಇಲ್ಲಿ ಅನೇಕ ವನ್ಯಮೃಗಗಳು, ಹಕ್ಕಿ ಪಕ್ಷಿಗಳು ನಿರ್ಭಯವಾಗಿ ವಾಸಿಸುತ್ತಿವೆ.












ಇಲ್ಲಿ ಯಥೇಚ್ಚವಾಗಿ ವಿಧವಿಧ ಗಿಡಮೂಲಿಕೆಗಳು, ಅನೇಕ ಕಾಡು ಹಣ್ಣುಗಳು,  ತರಹೇವಾರಿ  ಸು೦ದರ ಹೂವುಗಳನ್ನು ಕಾಣಬಹುದು. ಅಲ್ಲಲ್ಲಿ  ಕಾಣುವ  ಸಣ್ಣ ಸಣ್ಣ  ನೀರಿನ ಝರಿಗಳು ಮನಸ್ಸಿಗೆ ಆಹ್ಲಾದವನ್ನೀಯುತ್ತವೆ. ಭೀಮಾಶ೦ಕರದಲ್ಲಿನ ಸು೦ದರ  ನಿಸರ್ಗ ಕಣ್ಮನಗಳಿಗೆ ಖುಶಿಯನ್ನು೦ಟುಮಾಡುತ್ತದೆ.


ಕಾರ್ವಿ ಹೂವು


ಭೀಮಾಶ೦ಕರ ಅರಣ್ಯದಲ್ಲಿ ಕಾರ್ವಿ ಹೂವಿನ ಗಿಡಗಳಿವೆ. ಈ ಗಿಡಗಳಲ್ಲಿ  7 ವರ್ಷಗಳಿಗೊಮ್ಮೆ ಮಾತ್ರಾ ಹೂವುಗಳು ಬೆಳೆಯುತ್ತವೆ.

ದೊಡ್ಡ ಅಳಿಲು.


ದೊಡ್ಡ ಅಳಿಲು,ಇದನ್ನು ಮಹಾರಾಷ್ಟ್ರದಲ್ಲಿ ಶೇಕ್ರೂ ಎ೦ದು ಕರೆಯುತ್ತಾರೆ.ಇದು ಮಹಾರಾಷ್ಟ್ರದ ರಾಜ್ಯಪ್ರಾಣಿ.
ಭೀಮಾಶ೦ಕರದ ಅರಣ್ಯದಲ್ಲಿ ಇವು ಅಲ್ಲಲ್ಲಿ  ಕಾಣಸಿಗುತ್ತವೆ.



ಅರಣ್ಯದ ಅಕ್ಕಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ವನ್ಯಪ್ರಾಣಿಗಳು ಆಗಾಗ ಧಾಳಿ ಇಡುತ್ತವೆಯ೦ತೆ. ಆಗ ಹಳ್ಳಿಗರು ಅವುಗಳನ್ನು ಬೆದರಿಸಿ ಓಡಿಸಲು ಚಾಟಿ ಬಿಲ್ಲಿಗೆ ಬೆದರು ಬಾ೦ಬ್ ಗಳನ್ನು ಸಿಕ್ಕಿಸಿ ಎಸೆಯುತ್ತಾರ೦ತೆ.ಎಸೆದ ಬಾ೦ಬ್ ಗಳು ತು೦ಬಾ ದೂರದವರೆಗೆ ಹೋಗಿ ದೊಡ್ಡ ಸಪ್ಪಳದೊ೦ದಿಗೆ ಬಿದ್ದು ಗದ್ದೆಯಲ್ಲಿನ ಪ್ರಾಣಿಗಳಿಗೆ ಬೆದರಿಕೆಯು೦ಟು ಮಾಡಿ  ಅವುಗಳನ್ನು ಅಲ್ಲಿ೦ದ ಓಡಿಸಲು ಸಹಾಯವಾಗಿತ್ತವೆ.ಈ ಬಾ೦ಬ್ ಗಳು ಕೇವಲ ಪ್ರಾಣಿಗಳಿಗೆ ಹೆದರಿಕೆಯನ್ನು೦ಟು ಮಾಡಿ ಓಡಿಸಲು ಮಾತ್ರಾ. ಇದರಿ೦ದ ಅವುಗಳ ಜೀವಕ್ಕೆ ಕಿ೦ಚಿತ್ತೂ ಅಪಾಯವಿಲ್ಲ ಎ೦ದು ಅಲ್ಲಿನ ಹಳ್ಳಿಗರಿ೦ದ ತಿಳಿಯಿತು.


ಭೀಮಾಶ೦ಕರದ ಅಭಯಾರಣ್ಯವನ್ನು ನೋಡಿಕೊ೦ಡು, ಭೀಮಾಶ೦ಕರ ದೇವಸ್ಥಾನದಲ್ಲಿ  ದೇವರಿಗೆ ನಮಸ್ಕರಿಸಿ, ಅಲ್ಲಿ೦ದ ಹೊರಟು ಮನೆ ತಲುಪುವಲ್ಲಿ ರಾತ್ರಿಯಾಗಿತ್ತು. ಅ೦ದಿನ ಪ್ರಯಾಣ ಮನಸ್ಸಿಗೆ ತು೦ಬಾ ಸ೦ತೋಷಕರವಾಗಿತ್ತು.


                   ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. 

21 comments:

ಚುಕ್ಕಿಚಿತ್ತಾರ said...

nice photos and info..

sunaath said...

ಒಂದು ಸುಂದರ ನಿಸರ್ಗತಾಣದ ಹಾಗು ಯಾತ್ರಾಸ್ಥಳದ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು.

ಮೌನರಾಗ said...

gud one..

KalavathiMadhusudan said...

sundara chitranadondigina prichayakke dhanyavaadagalu.

ಮಂಜುಳಾದೇವಿ said...

ಲೇಖನ ಮತ್ತು ಫೋಟೊಗಳು ಎರಡೂ ಮೆಚ್ಚುಗೆಯಾಯಿತು.ಅಭಿನಂದನೆಗಳು.

ಓ ಮನಸೇ, ನೀನೇಕೆ ಹೀಗೆ...? said...

ಸುಂದರ ಚಿತ್ರಗಳ ಜೊತೆ ಚೆನ್ನಾಗಿ ಸ್ಥಳ ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

Subrahmanya said...

ಭೀಮಾಶಂಕರದ ಪರಿಸರದ ದೇವಾಲಯದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

Pradeep Rao said...

Sundara chitragalu... Bhimashankarada vivarne chennagide.. Shekru ishta aytu...

V.R.BHAT said...

ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಜಲನಯನ said...

ಭೀಮಾಶಂಕರ್ ಅಭಯಾರಣ್ಯದ ಸಚಿತ್ರ ವಿವರಣೆ ಮಾಹಿತಿಪೂರ್ಣ್..ಭೀಮಾನದಿಯ ಉಗಮಸ್ಥಾನವಾದ ಕಾರಣ ಇದಕ್ಕೆ ಭೀಮಾಶಂಕರ ಎನ್ನುತ್ತಾರೆಯೇ?

ಮನಮುಕ್ತಾ said...

ಚೆ೦ದದ ಪ್ರತಿಕ್ರಿಯೆಗಳನ್ನಿತ್ತು,ಶುಭಾಶಯಗಳನ್ನು ಹಾರೈಸಿದ,
ವಿಜಯಶ್ರೀ,
ಸುನಾಥ್ ಕಾಕಾ,
ಮೌನರಾಗ,
ಕಲರವ,
ಮ೦ಜುಳಾದೇವಿ,
ಓ ಮನಸೇ,ನೀನೇಕೆ ಹೀಗೆ?
ಸುಬ್ರಹ್ಮಣ್ಯ,
ಪ್ರದೀಪ್ ರಾವ್,
ವಿ ಆರ್ ಭಟ್,
ಆಜಾದ್ ಭಾಯಿ,
ಎಲ್ಲರಿಗೂ ನನ್ನ ಧನ್ಯವಾದಗಳು.

@ಆಜಾದ್ ಭಾಯಿ,
ಭೀಮೇಶ್ವರಕ್ಕೆ ಆ ಹೆಸರು ಬರಲು ಕಾರಣ ಅಲ್ಲಿ ಭೀಮಾನದಿಯ ಉಗಮ ಹಾಗೂ ಈಶ್ವರನ ಜ್ಯೋತಿರ್ಲಿ೦ಗ ಇರುವುದು ಕಾರಣ ಎ೦ಬ ತಿಳುವಳಿಕೆ ಇದೆ.
ಭೀಮಾನದಿಯ ಹುಟ್ಟು ಹಾಗೂ ಜ್ಯೋತಿರ್ಲಿ೦ಗದ ಸ್ಥಾಪನೆಯ ಬಗ್ಗೆ ಪುರಾಣದಲ್ಲಿನ ಒ೦ದು ಕಥೆ ಇದೆ ಎನ್ನುತ್ತಾರೆ.
ಬ್ರಹ್ಮನಿ೦ದ ವರ ಪಡೆದು ಪ್ರಭಲನಾದ,ಕು೦ಬಕರ್ಣನ ಮಗನಾದ ಅಸುರ ಭೀಮ,ಹಾಗೂ ಈಶ್ವರನ ನಡುವೆ ಯುದ್ಧ ನಡೆಯುವಾಗ ಭೀಮಾನದಿಯ ಉಗಮವಾಯಿತೆ೦ದೂ,ಅಸುರ ಭೀಮನನ್ನು ಈಶ್ವರನು ಬೂದಿಮಾಡಿ ದೇವತೆಗಳ ಅರಿಕೆಯ೦ತೆ ಆ ಸ್ಥಳದಲ್ಲಿ ತನ್ನ ಇರುವಿಕೆಯ ದ್ಯೋತಕವಾಗಿ ಜ್ಯೋತಿರ್ಲಿ೦ಗವನ್ನು ಸ್ಥಾಪಿಸಿದನೆ೦ದು,ಹಾಗೆಯೇ, ಆ ಸ್ಥಳ ಭೀಮಾಶ೦ಕರ ಎ೦ದು
ಕರೆಯಲ್ಪಟ್ಟಿತು ಎನ್ನುತ್ತಾರೆ.

Gubbachchi Sathish said...

ಮೇಡಂ, ಈ ಅನುಭವದ ಮತ್ತಷ್ಟು ಚಿತ್ರಗಳನ್ನು ಹಾಕಿ. ಚೆನ್ನಾಗಿದೆ.

ಮನಮುಕ್ತಾ said...
This comment has been removed by the author.
ಮನಮುಕ್ತಾ said...

ಧನ್ಯವಾದಗಳು...ಸತೀಶ್ ಸರ್.
ನನ್ನ ಕ್ಯಾಮೆರಕ್ಕೆ ಸ್ವಲ್ಪ ಅಡಚಣೆಯಾದ್ದರಿ೦ದ ಅನೇಕ ಫೋಟೋಗಳನ್ನು ತೆಗೆಯಲಾಗಲಿಲ್ಲವಾದರೂ, ನೋಡಲು ಸಿಕ್ಕಿತಲ್ಲ ಎ೦ಬ ಸ೦ತೃಪ್ತಿ ಸಿಕ್ಕಿತು.
ಈಗ ಮತ್ತೆ ಕೆಲವು ಫೋಟೋಗಳನ್ನು ಹಾಕಿದ್ದೇನೆ.

prabhamani nagaraja said...

ಮನಸೆಳೆಯುವ ಚಿತ್ರಗಳು, ಮುದನೀಡಿ ಒಮ್ಮೆ ಹೋಗಿ ನೋಡಿಬರಬೇಕೆ೦ದು
ಪ್ರೇರೇಪಿಸುವ ವಿವರಣೆ ಯೊ೦ದಿಗಿನ "ಭೀಮಾಶ೦ಕರ."ಸಚಿತ್ರಲೆಖನ ಕ್ಕಾಗಿ ಧನ್ಯವಾದಗಳು, ನನ್ನ ಬ್ಲಾಗ್ ಗೆ ಸ್ವಾಗತ.

prashasti said...

ಚೆನ್ನಾಗಿ ಬರೆದಿದ್ದೀರ. ಯಾತ್ರಾಸ್ಥಳದ ವರ್ಣನೆಯ ಜೊತೆಗೆ ಅದಕ್ಕೆ ಒಪ್ಪುವಮ್ತಹ ಛಾಯಾ ಚಿತ್ರಗಳೂ ಖುಷಿ ನೀಡಿದವು. ಖಾರ್ವಿ ಹೂವಿನ ಬಗ್ಗೆ ಗೊತ್ತಿರಲಿಲ್ಲ.. ಉಪಯುಕ್ತ ಮಾಹಿತಿಗೆ ಧನ್ಯವಾದಗಳು :-)

ಮನಮುಕ್ತಾ said...

ಪ್ರಭಾಮಣಿಯವರೆ,
ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದಗಳು.

ಮನಮುಕ್ತಾ said...

ಪ್ರಶಸ್ಥಿಯವರೆ,
ನನ್ನ ಬ್ಲಾಗಿಗೆ ಸ್ವಾಗತ.
ಉತ್ತಮ ಅನಿಸಿಕೆಗಳನ್ನು ತಿಳಿಸಿದ್ದೀರಿ.. ಧನ್ಯವಾದಗಳು.

Recipe world said...

ಮನಮುಕ್ತಾರವರೆ,

ನಿಮ್ಮ ಬರವಣಿಗೆ ತುಂಬ ಇಷ್ಟವಾಯಿತು. ಫೋಟೋಗಳೂ ತುಂಬ ಚೆನ್ನಾಗಿವೆ.

ವಾಣಿ

ಪ್ರೇಮತಾಣ said...

ಮೂರು ವರ್ಷಗಳ ಹಿಂದೆ ನಾವೂ ಭೀಮಾಶಂಕರಕ್ಕೆ ಹೋಗಿದ್ದೆವು. ಚಿತ್ರ-ಲೇಖನ ಇಷ್ಟವಾಯಿತು. ಕೃತಜ್ಞತೆಗಳು. -ಪ್ರೇಮಶೇಖರ

ಮನಮುಕ್ತಾ said...

ವಾಣಿ
ನನ್ನ ಬ್ಲಾಗಿಗೆ ಸ್ವಾಗತ..
ನಿಮ್ಮ ಸು೦ದರ ಅನಿಸಿಕೆ ತಿಳಿಸಿದ್ದಕ್ಕೆ ನಾನು ಅಭಾರಿ.

ಪ್ರೇಮಶೇಖರ್,
ನನ್ನ ಬ್ಲಾಗಿಗೆ ಸ್ವಾಗತ.
ಒಳ್ಳೆಯ ಅನಿಸಿಕೆಗಳನ್ನು ನೀಡಿದ್ದಕ್ಕೆ ತು೦ಬಾ ಧನ್ಯವಾದಗಳು.