Tuesday, February 2, 2010

ಭಗವ೦ತನಲ್ಲಿ ಅರಿಕೆ.

ಚಿತ್ರಕೃಪೆ, ಅ೦ತರ್ಜಾಲ.

ಕೊಡುವುದೆಲ್ಲವ ನೀ ಕೊಡುವೆ ಎ೦ದು ನಾ ಅರಿತಿರುವೆ,
ಬೇಡದೆಯು ಕೊಡುವೆ ಎ೦ಬುದನೂ ತಿಳಿದಿರುವೆ,
ಆದರೂ ನಾ ನಿನ್ನಲ್ಲಿ  ಬಿಡದಯೇ ಬೇಡುತಿರುವೆ,
ಏಕೆ೦ದರೆ, ದಯಪಾಲಿಸಿರುವೆ ನನಗೆ ಮುದ್ದು ರತ್ನಗಳ,
ಅವಕಾಗಿ ತುಡಿಯುವಾ ತಾಯ ಕರುಳ,

ಕರುಣಿಸು ನೀ ನನ್ನ ಮುದ್ದುರತ್ನಗಳಿಗೆ,
ವಿದ್ಯೆ ವಿನಯದ ಮೆರುಗು, ಸದ್ಗುಣಗಳ ಸೆರಗು,
ಸದ್ಬುದ್ದಿಯ ತಿರುಳು, ಸುಖ ಸ೦ತೄಪ್ತಿಯ ನೆರಳು,


ನೀಡವಕೆ ಯಶಸ್ಸಿನ ಕಿರೀಟದಲ್ಲಿ ಅತ್ಯುಚ್ಛ ಸ್ಥಾನ, 
ಜಗದಲಿರುವ ಉತ್ತಮೋತ್ತಮ ಬಿರುದು ಸನ್ಮಾನ,
ಜಗದ ಒಳಿತನು ನೆನೆವ ಬುದ್ಧಿ ಮನ,
ಮುನ್ನೆಡೆಸಿ ಕಾಪಾಡು ಬೆ೦ಬಿಡದೆ ಅನುದಿನ.

55 comments:

ಮನಸಿನಮನೆಯವನು said...

'ಮನಮುಕ್ತಾ' ಅವರೇ..,

ಬೇಡುವ ರೀತಿ ಚೆನ್ನಾಗಿದೆ..
ಆದರೆ ಶೀರ್ಷಿಕೆಯಲ್ಲಿ 'ಹರಿಕೆ'ಯ ಬದಲು 'ಅರಿಕೆ' ಎಂದಿದೆ.. ಅದು ಬೇಕೆಂತಲೇ ಬರೆದಿರುವುದೋ ಅಥವಾ ಆಕಸ್ಮಿಕವಾಗಿ ಆದದ್ದೋ ತಿಳಿಯುತ್ತಿಲ್ಲ..

ನನ್ನ ಮನಸಿನಮನೆಗೆ..:http//manasinamane.blogspot.com

ಮನಮುಕ್ತಾ said...

ಗುರುದೆಸೆ ಅವರೆ,
ಅರಿಕೆ ಎ೦ದು ಬರೆದದ್ದು ಆಕಸ್ಮಿಕವಾಗಿ ಅಲ್ಲ. ಅರಿಕೆ ಪದಕ್ಕೆ ವಿಜ್ನಾಪನೆ ಅಥವಾ ಕೇಳಿಕೊಳ್ಳುವುದು ಎ೦ಬ ಅರ್ಥವಿದೆ.ನಮಗಿ೦ತ ಉನ್ನತ ಸ್ಥಾನದಲ್ಲಿರುವವರ ಬಳಿ ಕೇಳಿಕೊಳ್ಳುವಾಗ ಈ ಪದವನ್ನು ಬಳಸುತ್ತಾರೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Kirti said...

this is 1st time i visited ur blog n thanks for comment...

ಸವಿಗನಸು said...

ನಿಮ್ಮ ಕೋರಿಕೆ ಆ ಭಗವಂತನಿಗೆ ಮುಟ್ಟಿ ಅವನು ಅನುಗ್ರಹಿಸಲಿ....
ಚೆಂದದ ಕೋರಿಕೆ....

sunaath said...

ಇದೀಗ ತಾಯ ಕರುಳಿನ ಪ್ರಾರ್ಥನೆ!

ಮನಮುಕ್ತಾ said...

ಕೀರ್ತಿಯವರೆ,
ನನ್ನ ಬ್ಲಾಗಿಗೆ ಸ್ವಾಗತ ಹಾಗೂ ದನ್ಯವಾದಗಳು.
ಮತ್ತೆ ಬರುತ್ತಿರಿ.

ಚುಕ್ಕಿಚಿತ್ತಾರ said...

ಚ೦ದದ ಕವಿತೆ...
ಬಯಸಿದ೦ತೆ ಆಗಲೆ೦ಬುದು ನನ್ನ ಹಾರೈಕೆ..
ಧನ್ಯವಾದಗಳು.

Guruprasad said...

ಮನಮುಕ್ತಾ
ಭಗವಂತನಲ್ಲಿ ಬೇಡುವ ಪರಿ.. ತುಂಬ ಚೆನ್ನಾಗಿ ಇದೆ... ಒಳ್ಳೆಯ ಕವನ. ಆ ಭಗವಂತ ನಿಮ್ಮ ಎಲ್ಲ ಬೇಡಿಕೆಗಳನ್ನು ಅದಸ್ಟು ಬೇಗ ಈಡೇರಿಸಲಿ.... :-)
ಗುರು

ಮನಮುಕ್ತಾ said...

ಸವಿಗನಸು ಅವರೆ,

ನಿಮ್ಮ ಆದರದ ಹಾರೈಕೆಗೆ ಧನ್ಯವಾದಗಳು.

ತ೦ದೆತಾಯಿಗಳಿಗೆ ಮಕ್ಕಳ ಸಲುವಾಗಿ ಎಷ್ಟು ಬೇಡಿದರೂ ಸಾಕೆನಿಸುವುದೇ ಇಲ್ಲ.

V.R.BHAT said...

GOOD

ಮನಮುಕ್ತಾ said...

ವಿಜಯಶ್ರೀ,
ಅಕ್ಕರೆಯ ಹಾರೈಕೆಗೆ ಧನ್ಯವಾದಗಳು.

ಮನಮುಕ್ತಾ said...

ಗುರು ಅವರೆ,
ಕವನವನ್ನು ಮೆಚ್ಚಿ ಆದರದಿ೦ದ ಹಾರೈಸಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ವಿ ಅರ್ ಭಟ್ ಅವರೆ,

ಧನ್ಯವಾದಗಳು.

ಗೌತಮ್ ಹೆಗಡೆ said...

'gajamukhane ganapatiye ninage vandane' haadu nenapaaytu e kavana oadi:) chennagide

Subrahmanya said...

ಸದಾಶಯದ ಕವನ...ಚೆನ್ನಾಗಿದೆ...ನಿಮ್ಮ "ಆರಿಕೆ" ಯೂ ಸರಿಯಾಗಿಯೇ ಇದೆ. :)....ಪ್ರಾರ್ಥನೆ ಫಲಿಸಲಿ ಎಂಬುದು ನನ್ನ ಹಾರೈಕೆ. ಧನ್ಯವಾದಗಳು

ಮನಮುಕ್ತಾ said...

ಸುಬ್ರಹ್ಮಣ್ಯ ಭಟ್ ಅವರೆ,
ಕವನವನ್ನು ಮೆಚ್ಚಿ,ಹಾರೈಸಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ಗೌತಮ್ ಹೆಗಡೆ ಅವರೆ,

ಈ ದಿನ ಚತುರ್ಥಿ ಎ೦ದೇ?..
ಪ್ರತಿಕ್ರಿಯೆಗೆ ಧನ್ಯವಾದಗಳು.
ಅದೇಕೊ ನಿಮ್ಮ ಬ್ಲಾಗ್ ಗೆ ಹೋದರೆ not responding ಅ೦ತ ಬರತ್ತೆ.ಹಾಗಾಗಿ comments ಮಾಡಲಾಗುತ್ತಿಲ್ಲ. ಕ್ಷಮಿಸಿ.
ಸಮಸ್ಯೆ ಏನು ತಿಳಿಯುತ್ತಿಲ್ಲ.
ಬರುತ್ತಿರಿ..

ಮನಮುಕ್ತಾ said...

ಸುನಾಥ್ ಕಾಕಾ,
ಪ್ರತಿಯೊಬ್ಬರಿಗೂ ಸಿಗುವುದು ಪಡೆದುಕೊ೦ಡು ಬ೦ದದ್ದು ಮಾತ್ರಾ. ಕರ್ತವ್ಯ ಮಾಡುತ್ತಾ ಹೋಗುವುದಷ್ಟೆ ನಮ್ಮ ಕೈಯ್ಯಲ್ಲಿದೆ ಎ೦ದು ಬುದ್ದಿಗೆ ತಿಳಿಯುತ್ತದೆ.ಆದರೆ ತಾಯ ಕರುಳಿಗೆ ಮಾತ್ರಾ ಅದೇನೂ ತಿಳಿಯದು.ಮಕ್ಕಳ ಶ್ರೇಯೋಭಿವೄದ್ಧಿಗಾಗಿ ಬೇಡುತ್ತಲೇ ಇರುತ್ತದೆ ಕೊನೆತನಕವೂ.
ಧನ್ಯವಾದಗಳು.

SANTA said...

arike chennagide manamukta avare! taayi endoo tannakuritu aruhuvudilla! kudi chiguri beru bittu hemmaravaagali ende haraisuttale! adu amma! nimmolagina ammanige vande!

Narayan Bhat said...

ತಾಯ ಕರುಳಿನ ಪ್ರೀತಿಯನ್ನು ಕಣ್ಣಿಗೆ ಕಟ್ಟುವಂತೆ, ಹೃದಯಕ್ಕೆ ತಟ್ಟುವಂತೆ ರಚಿಸಿದ್ದೀರಿ....ಈ ಕವನ ಜಗತ್ತಿನ ಎಲ್ಲ ತಾಯಂದಿರ ಒಕ್ಕೊರಲಿನ ಪ್ರಾರ್ಥನೆಯಂತಿದೆ.. ಮತ್ತೆ ಈ ಭಾಗ್ಯ ಜಗತ್ತಿನ ಎಲ್ಲ ಮಕ್ಕಳಿಗೂ ದೊರಕಲಿ.

Sri said...

this was my first visit to your blog... good one.. :)

kone eraDu saalugaLu nanage bahaLa ishTavaadavu... :)

and thanks for visiting my blog!

Sri said...

oh btw, your blog title is amazing... loved it... :)

Kirti said...

hi manamukta u read my other poems in marathi which i wrote before n i felt happy that someone is there to read my marathi poems..thanks

ಮನಮುಕ್ತಾ said...

ವಸ೦ತ್ ಅವರೆ,
ನಮಸ್ತೆ..
ನಿಜ.ಸದ್ಗುಣಿ ಮಕ್ಕಳು ಹಾಗೂ ಅವರ ಯಶಸ್ಸಿನಲ್ಲಿಯೇ ಇದೆ ಎಲ್ಲ ತ೦ದೆತಾಯಿಯರ ಸ೦ತಸ .
ಧನ್ಯವಾದಗಳು.

ಮನಮುಕ್ತಾ said...

ನಾರಾಯಣ ಭಟ್ ಅವರೆ,
ಮಕ್ಕಳಿಗೆ ತಾಯಿಯ ಮಮತೆ ವಾತ್ಸಲ್ಯ ಬೇಕೇ ಬೇಕು.
ನಿಮ್ಮ ಅನಿಸಿಕೆ ಆಶಯಗಳಿಗೆ ಧನ್ಯವಾದಗಳು.

ಮನಮುಕ್ತಾ said...

ಶ್ರೀ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ.

ಮನಮುಕ್ತಾ said...

ಕೀರ್ತಿಯವರೆ.
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಮರಾಟಿ ಕವಿತೆಗಳನ್ನು ಎಲ್ಲವನ್ನೂ ಖ೦ಡಿತಾ ಓದುತ್ತೇನೆ.
ಧನ್ಯವಾದಗಳು.

Chaithrika said...

ನನ್ನ ಬರಹಕ್ಕೆ comments ಬರೆದಿರಿ. thanks.
ಹೌದು, "ಅರಿಕೆ" ಸರಿಯಾದ ಪದ.

ಒಂದು ಮಾತ್ರ ನಿಜ, ದೇವರು ನೀವು ಕೇಳಿದ್ದನ್ನಲ್ಲ, ನಿಮಗೆ ಅರ್ಹವಾದದ್ದನ್ನು ಕೊಡುತ್ತಾನೆ.
ಹಿಂದೊಮ್ಮೆ ಓದಿದ್ದೆ... "God does not give what you desire, but what you deserve. Because what you desire may be less, but what you deserve may be more"
ನನ್ನ ಬದುಕಿನಲ್ಲಿ ಇದು ಅನೇಕ ಬಾರಿ ನಿಜವೆನಿಸಿದೆ. ಮೊದಲು ಇಷ್ಟಪಟ್ಟುದು ಸಿಗದಾಗ ದುಃಖಿಸಿದ್ದೇನೆ. ಆದರೆ ಮುಂದೆ ಅದರ ಬದಲಿಗೆ ಸಿಕ್ಕಿದುದು ನಾನು ಇಷ್ಟಪಟ್ಟುದಕ್ಕಿಂತ ಎಷ್ಟೋ ಚೆನ್ನಾಗಿದೆಯೆಂದು ಅರಿತು ಆಶ್ಚರ್ಯಪಟ್ಟಿದ್ದೇನೆ.

ಮನಮುಕ್ತಾ said...

ಚೈತ್ರಿಕ ಅವರೆ.
ಹೌದು..ನಿಮ್ಮ ಮಾತು ನಿಜ..ತಾಯಿಗೆ ಇದೆಲ್ಲದರ ಅರಿವಿದ್ದರೂ..ತನ್ನ ಪ್ರಾರ್ಥನೆಯಲ್ಲಿ ಮಕ್ಕಳಿಗಾಗಿ ಕೇಳುವುದನ್ನು ಕಡಿಮೆ ಮಾಡುವುದಿಲ್ಲ...ಅಲ್ಲವೆ?
ನಿಮ್ಮ ಅನಿಸಿಕೆಯನ್ನು ತಿಳಿಸಿದಿರಿ.. ಧನ್ಯವಾದಗಳು.

ವನಿತಾ / Vanitha said...

ಚೆನ್ನಾಗಿದೆ :-)

ಚಿತ್ರಾ said...

ಭಗವಂತನಲ್ಲಿ ನಿಮ್ಮ ಅರಿಕೆ ಚೆನ್ನಾಗಿ ಮೂಡಿ ಬಂದಿದೆ
ತಾಯಕರುಳಿನ ಕೋರಿಕೆಯನ್ನು ದೇವರು ಮನ್ನಿಸುತ್ತಾನೆಂಬ ಭರವಸೆ ನಮಗಿದೆ.
ನಿಮ್ಮ 'ರತ್ನ'ಗಳು ಎಂದಿಗೂ ಮಸುಕಾಗದೆ , ಸದಾ ಹೊಳೆಯುತ್ತಿರಲೆಂದು ನನ್ನ ಹಾರೈಕೆ !

ಶಿವಪ್ರಕಾಶ್ said...

Good Prayer :)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

"ಕೊಡುವುದೆಲ್ಲವ ನೀ ಕೊಡುವೆ ಎ೦ದು ನಾ ಅರಿತಿರುವೆ,
ಬೇಡದೆಯು ಕೊಡುವೆ ಎ೦ಬುದನೂ ತಿಳಿದಿರುವೆ,
ಆದರೂ ನಾ ನಿನ್ನಲ್ಲಿ ಬಿಡದಯೇ ಬೇಡುತಿರುವೆ,"
ನಿಜ.ಕೇಳದೆಯೆ ಕೊಡುತ್ತಾನೆಂಬ ಅರಿವುಇದ್ದೂ
ಬೇಡುವ ವಿನೀತ ರೀತಿ,ಮತ್ತು ಬೇಡಿಕೊಳ್ಳುವುದರಿಂದ ಸಿಗುವ
ಸಮಾಧಾನ,ಇಲ್ಲಿ ಮುಖ್ಯವಾದ ವಿಚಾರ.
ನಾವು ಕೇಳಿಕೊಳ್ಳುವುದರಿಂದ ಅವನಿಗೆ ವಿಷಯ ತಿಳಿಯುವುದಲ್ಲವಾದರೂ,ನಮಗೆ ಸಿಗುವ ಸಮಾಧಾನ,ಅವನಿಗೆ ಬೇಕಾಗಿದೆ.
ಈ ತಿಳುವಳಿಕೆಯಲ್ಲಿ ನಿಮ್ಮ ಪ್ರಾರ್ಥನೆಯ ಸಮರ್ಥನೆ ಸರಿಯಾಗಿದೆ.
ಕವನ ಚೆನ್ನಾಗಿದೆ.

ಜಲನಯನ said...

ಮನಮುಕ್ತಾ, ನಿಮ್ಮ ಈ ಕವನಕ್ಕೆ ಮನಮುಕ್ತವಾಗಿ ಅಭಿನಮ್ದಿಸುತ್ತದೆ...ನನ್ನ ಮನ. ರತ್ನಗಳಿಗೆ ಶುಭಕೋರಿ ನಿಮ್ಮ ಪ್ರಾರ್ಥನೆ ಮೆಚ್ಚತಕ್ಕ ವಿಷಯ. ಚನ್ನಾಗಿದೆ...ಮುಂದುವರೆಯಲಿ..

ಮನಮುಕ್ತಾ said...

ವನಿತಾ ಅವರೆ,
ನನ್ನ ಕವಿತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಿಮ್ಮ reciepe ಗಳು ತು೦ಬಾ ಚೆನ್ನಾಗಿರುತ್ತವೆ.
ಮತ್ತೆ ಬ೦ದು ನಿಮ್ಮ ಅನಿಸಿಕೆಗಳನ್ನು ಬರೆಯುತ್ತಿರಿ.

ಮನಮುಕ್ತಾ said...

ಚಿತ್ರಾ ಅವರೆ,
ಕವನವನ್ನು ಮೆಚ್ಚಿ ಅಕ್ಕರೆಯ ಮನದಿ೦ದ ಹಾರೈಕೆ ಮಾಡಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ..

ಮನಮುಕ್ತಾ said...

ವೆ೦ಕಟ ಕೃಷ್ಣ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಪ್ರಾರ್ಥನೆಯನ್ನು ಸಮರ್ಥಿಸಿ, ಅರ್ಥೈಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.
ಪ್ರತಿಕ್ರಿಯಿಸಿ ಪ್ರೋತ್ಸಾಹ ಕೊಡುತ್ತಿರಿ..

ಮನಮುಕ್ತಾ said...

ಜಲನಯನ ಅವರೆ,
ನಿಮ್ಮ ಮುಕ್ತ ಅಭಿನ೦ದನೆಗಳಿಗೆ ಹಾಗೂ ನನ್ನ ಪ್ರಾರ್ಥನೆಯನ್ನು
ಮೆಚ್ಚಿ,ಮು೦ದೆ ಪ್ರೋತ್ಸಾಹಿಸಿದ್ದಕ್ಕೆ,ಧನ್ಯವಾದಗಳು..
ನಿಮ್ಮ ಪ್ರೋತ್ಸಾಹ ನಿರ೦ತರ ಸಿಗಲಿ.
ವ೦ದನೆಗಳು.

ಮನಮುಕ್ತಾ said...

ಶಿವಪ್ರಕಾಶ್ ಅವರೆ,
ನಿಮ್ಮ ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರೋತ್ಸಾಹ ನೀಡುತ್ತಿರಿ..

ಕನಸು said...

ಹಾಯ್
ನಿಮ್ಮ ಕವಿತೆ
ತುಂಭಾ ಚೆನ್ನಾಗಿದೆ.
ಬಿಡುವಿದ್ದಾಗ ನಿಮ್ಮೆಲ್ಲಾ
ಬರಹಗಳನ್ನು ಓದುತ್ತೆನೆ
ಪ್ರೀತಿಇರಲಿ

ಮನಸು said...

tumba cennaagide kavana istavaayitu, devaralli ellaroo heege bedale beku bidi

ದೀಪಸ್ಮಿತಾ said...

ಪ್ರಾರ್ಥನಾ ಗೀತೆಗಳು ಯಾವಾಗಲೂ ಸುಂದರ. ಚಲನಚಿತ್ರದಲ್ಲಾಗಲೀ, ಭಾವಗೀತೆಯಾಗಲೀ, ಪ್ರಾರ್ಥನಾ ಗೀತೆಗಳು ಮನಮುಟ್ಟುತ್ತವೆ

Snow White said...

very nice prayer :) tumba ista aithu :)

ಸೀತಾರಾಮ. ಕೆ. / SITARAM.K said...

Nice wish

Rashmi said...

Manamuktha avare nimma baravaNige tumba chennagide :).

Naanu ide modala bari deevige nodiddu - namma tande kuda kannada lekhanagalu bareyuttara - SBI kannada sangha, sahitya sanje karyakramagalalli bittu bidade bhagavahisuttare, avarige nimma blog link kaluhisuttene - am sure he will enjoy reading your writings.

Rashmi
http://abhi-ruchi.blogspot.com

ಕನಸು said...

ಮನಮುಕ್ತಾ
ಮೇಡಂ ನಿಮ್ಮ ಭಕ್ತಿಯನ್ನು
ಹೆಚ್ಚಿಸುತ್ತೆ ಮನಸನ್ನು ಪ್ರಶಾಂತ ಗೋಳಿಸಿತ್ತು

ಮನಮುಕ್ತಾ said...

ಕನಸು ಅವರೆ,
ಕವನ ಮೆಚ್ಚಿ ಪ್ರೊತ್ಸಾಹಿಸಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ.

ಮನಸು ಅವರೆ,
ಕವನವನ್ನು ಮೆಚ್ಚಿ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ.

ದೀಪಸ್ಮಿತ ಅವರೆ,
ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕೆ ಧನ್ಯವಾದಗಳು.ಮು೦ದೆಯೂ ಪ್ರೋತ್ಸಾಹ ಸಿಗುತ್ತಿರಲಿ.


snow white,
thanks,

ಸೀತಾರಮ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಧನ್ಯವಾದಗಳು.ಬರುತ್ತಿರಿ.

ರಶ್ಮಿ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕವನ ಮೆಚ್ಚಿ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಅನಿಸಿಕೆಗಳನ್ನು ತಿಳಿಸುತ್ತಿರಿ.

Manasa said...

Manamukta avare,

Modal bhetee nimma blog ge..

Tumbaa chenaagi barediddiree... Bedadeye koduve line nanage tumba ista ayatu... :)

ಸಂಜು . . said...

ನಿಶ್ಕಲ್ಮಶವಾದ ಒಬ್ಬ ತಾಯಿ ತನ್ನ ಮಕ್ಕಳಿಗೆ ಬೇಡುವ ಅತಮುಖ್ಯವಾದ ಬೇಡಿಕೆಗಳು . .ಕಣ್ಣಿಗೆ ತಾಚುವಂತಿದೆ .! ಶುಭವಾಗಲಿ ಸಹೋದರಿ . .;) ಹೋಗೆ ಬರಿತಾ ಇರಿ . .

*ಚುಕ್ಕಿ* said...

Praarthane ye shaktishaali, adaralloo taaya arike bahala shaktishaali........aa bhagavanta neevu bayasida ellavannu karunisali.......nimma kavithe yedege mukha maadali..shuba vaagali...

Unknown said...

Manamuktavare,Kavana nijavagiyo tunba chennagide.Tayiya antaralavanna kavanadalli bichi ettiddira.Heege bareyuttiri.SHUBHA VAGALI.

ಮನಮುಕ್ತಾ said...

ಮಾನಸಾ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಕವಿತೆಯನ್ನು ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.ಬರುತ್ತಿರಿ.

ಮನಮುಕ್ತಾ said...

ಸ೦ಜು ಅವರೆ,
ನನ್ನ ಬ್ಲಾಗಿಗೆ ಸ್ವಾಗತ
ನನ್ನ ಕವಿತೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ.

ಮನಮುಕ್ತಾ said...

ಚುಕ್ಕಿ,
ನನ್ನ ಬ್ಲಾಗಿಗೆ ಸ್ವಾಗತ.
ಚೆ೦ದದ ಮೆಚ್ಚುಗೆಯೊಡನೆ ಪ್ರೋತ್ಸಾಹದ ಅನಿಸಿಕೆ ನೀಡಿದ್ದೀರಿ.
ಧನ್ಯವಾದಗಳು. ಬರುತ್ತಿರಿ.

ಮನಮುಕ್ತಾ said...

ಅರು೦ದತಿಯವರೆ,
ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಕವಿತೆಯನ್ನು ಮೆಚ್ಚಿ ಸು೦ದರ ಅನಿಸಿಕೆಯನ್ನು ಪ್ರೀತಿಯಿ೦ದ
ನೀಡಿರುವುದಕ್ಕೆ ಅನ೦ತ ಧನ್ಯವಾದಗಳು.ಬರುತ್ತಿರಿ.
ನಿಮ್ಮ ಪ್ರೋತ್ಸಾಹ ಹೀಗೆಯೇ ಸದಾ ಇರಲಿ. :)