Friday, February 11, 2011

ಸ೦ವಾದ

ಮನವನ್ನು ಕೇಳಿತ್ತು ನಗುನಗುತ ಕನಸು,
ನಾನಲ್ಲವೇ ಹೇಳು ನಿನಗೆ ಸೊಗಸು?
ಹಗಲಲ್ಲಿ ಕಾಣುವೆ ಹಗಲುಗನಸು,
ಇರುಳಲ್ಲಿ ಕಾಣುವೆ ಇರುಳುಗನಸು.

ಅ೦ದ ಚೆ೦ದದ ರೂಪ ನೀನನಗೆ ಕೊಡುವೆ,
ಮೋಹಕ ಬಣ್ಣಗಳನು ನೀ ನನಗೆ ಇಡುವೆ,
ನನ್ನ ನೋಡುತ ನೀನು ಸ೦ತೋಷ ಪಡುವೆ, 
ನನಸಿಗಿಲ್ಲದ ಸೊಗಸು ನನ್ನಲಿಹುದಲ್ಲವೆ?
 
ನಗುನಗುತ ಹೇಳಿತ್ತು ಕನಸಿಗೆ ನನಸು,
ತೊಡಬೇಡ ನಿನ್ನಯಾ ತಳುಕಿನಾ ದಿರಿಸು,
ದಿನಕೊ೦ದು ರೂಪ ಅದು ಏನು ಸೊಗಸು?
ಬಣ್ಣವಲ್ಲದ ಬಣ್ಣಕಿರದೊ೦ದು ಚಿಕ್ಕಾಸು.

ರೂಪ ಕೊಟ್ಟರದು ನಿನಗೆ ನಿಜವೇ ಅಲ್ಲವದು,
ನೀನ್ಹೇಳುವಾ ರ೦ಗು ಕಾಣಿಸದು ಹೊರಗದು,
ನನ್ನ ಪಡೆಯಲು ಮನವು ನಿನ್ನ ಕಾಣುವುದು,
ನಿಜ ಸೊಗಸು ಮನಕೆ ನನ್ನಲ್ಲಿ ಇಹುದು.

ಕನಸು ನನಸುಗಳ ಮಾತು ಸಾಗುತಲೇ ಇತ್ತು,
ಮನವು ಮಾತ್ರಾ ಸುಮ್ಮನೆ ನಗುನಗುತಲಿತ್ತು,
ಕನಸು ನನಸುಗಳಿಗೆ ಸೊಗಸು ತಾನೆನಿಸಿತ್ತು,
ಕೊನೆಯಲ್ಲಿ ಮನವು ಹೀಗೆ ಅರುಹಿತ್ತು,

ಕನಸು ಕನಸಲಿ ಸೊಗಸು,ನನಸು ನಿಜದಲಿ ಸೊಗಸು,
ಕನಸು ನನಸಾಗದಿರಲು ಮಾಸುವುದು ಸೊಗಸು,
ಬಹು ಸಪ್ಪೆಯೆನಿಸುವುದು,ಕನಸಿಲ್ಲದಾ ನನಸು
ಕನಸು ನನಸುಗಳಲಿಹುದು ಮನಕೆ ಸೊಗಸು.

39 comments:

ಚುಕ್ಕಿಚಿತ್ತಾರ said...

ಸೊಗಸಾದ ಕನಸಿನ ಸ೦ವಾದ..

KalavathiMadhusudan said...

ಸುಂದರವಾದ ಕವನ.

Pradeep Rao said...

ಕನಸು ನನಸುಗಳ ನಡುವಿನ ಮಾತುಗಳ ಸೊಗಸನು ಸೊಗಸಾಗಿ ಸೆರೆ ಹಿಡಿದಿದೆ ನಿಮ್ಮ ಕವನ. ಚೆನ್ನಾಗಿದೆ!

Gubbachchi Sathish said...

ಕನಸು ನನಸುಗಳಲಿಹುದು ಮನಕೆ ಸೊಗಸು.

ಒಳ್ಳೇಯ ಕವನ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ.

ಅನಂತ್ ರಾಜ್ said...

kanasu sogasu nanasoo sogasu..
kavanavooo sogasu... manamukta avare...

shubhashayagalu
ananth

ಮನಮುಕ್ತಾ said...

ವಿಜಯಶ್ರೀ,
:)..ಥ್ಯಾ೦ಕ್ಸು..

ಮನಮುಕ್ತಾ said...

ಕಲಾವತಿಯವರೆ,

ಧನ್ಯವಾದಗಳು.

ಮನಮುಕ್ತಾ said...

ಪ್ರದೀಪ್,
ಧನ್ಯವಾದಗಳು.

ಮನಮುಕ್ತಾ said...

ಸತೀಶ್,
ಧನ್ಯವಾದಗಳು.

ಮನಮುಕ್ತಾ said...

ಅನ೦ತ್ ರಾಜ್ ಅವರೆ,
ಧನ್ಯವಾದಗಳು.

ಅನಿಲ್ ಬೇಡಗೆ said...

ಲತಾಶ್ರಿ ಮೇಡಂ.
ನನ್ನ, ಮನಸು ತುಂಬಾ ಕನಸು, ಕನಸು :) :)

sunaath said...

ಮನಮುಕ್ತಾ,
ಲಲಿತಶೈಲಿಯಲ್ಲಿ ನಡೆದ ನನಸು, ಕನಸುಗಳ ಕಾವ್ಯಸಂವಾದ ನನ್ನ ಮನಸಿಗೆ ಹಿತವೆನಿಸಿತು.ಎಷ್ಟೋ ದಿನಗಳ ಬಳಿಕ ರಮ್ಯ ಭಾವಗೀತೆಯೊಂದನ್ನು ಓದಿದ ಖುಶಿಯಾಯಿತು.

ಮನಮುಕ್ತಾ said...

ಹೌದಾ ಅನಿಲ್ ? ಇರ್ಲಿ..ಮನಸು ತು೦ಬಾ ಕನಸುಗಳು ಇವೆ ಅ೦ದ್ರೆ ಬೇಗ ನನಸು ಕೂಡಾ ಸಿಗತ್ತೆ ....ನಮ್ಮೆಲ್ಲರ ಆಶೀರ್ವಾದ ಇದೆ..Best of luck..:):)
welcome to my blog & thanks for coming.

ಮನಮುಕ್ತಾ said...

ಸುನಾಥ್ ಕಾಕಾ,
ನನ್ನ ಬರಹ ನಿಮಗೆ ಖುಶಿಕೊಟ್ಟಿತೆ೦ದರೆ ಅದು ನನಗೆ ಖುಶಿಯ ಸ೦ಗತಿ..
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಕಾಕಾ.

ಮಹಾಬಲಗಿರಿ ಭಟ್ಟ said...

ಕನಸು ಕನಸಲಿ ಸೊಗಸು,ನನಸು ನಿಜದಲಿ ಸೊಗಸು,
ಕನಸು ನನಸಾಗದಿರಲು ಮಾಸುವುದು ಸೊಗಸು,
ಬಹು ಸಪ್ಪೆಯೆನಿಸುವುದು,ಕನಸಿಲ್ಲದಾ ನನಸು
ಕನಸು ನನಸುಗಳಲಿಹುದು ಮನಕೆ ಸೊಗಸು.


ee saligalu tumba estavaadavu

Ittigecement said...

ಸೊಗಸಾಗಿದೆ ಕನಸು...ಮತ್ತು ಮನಸು..

ಚಂದದ ಕವಿತೆಗೆ ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

ತು೦ಬ ನಿಜ :)

ಚೆನ್ನಾಗಿತ್ತು ಕವನ :)

SATHYAPRASAD BV said...

ಕನಸು ಮನಸುಗಳ ಸಂವಾದದ ಲಹರಿ ಬಹಳ ಸೊಗಸಾಗಿ ಮೂಡಿಬಂದಿದೆ. ಈ ಸಂವಾದ ನಡೆದದ್ದು ಕನಸಲ್ಲೋ? ನನಸಲ್ಲೋ? ಅಭಿನಂದನೆಗಳು ನಿಮಗೆ.

Nivedita Thadani said...

hi
thanks for visiting me and for the lovely comments.
here is the link for Sindhi kadi
http://niveditaskitchen.blogspot.com/2010/01/sindhi-curryveg-curry-with-gramflour.html

ಮಂಜುಳಾದೇವಿ said...

kanasu...nanasu....manasu....
kavana sogasu
enditu manasu

ಅಪ್ಪ-ಅಮ್ಮ(Appa-Amma) said...

ಮನಮುಕ್ತಾ,

ಕನಸು-ನನಸು-ಮನಸುಗಳ ಸುತ್ತ ಉತ್ತಮ ಕವನವನ್ನು ಹೆಣೆದಿದ್ದೀರಿ. ಇಷ್ಟವಾಯ್ತು.

prabhamani nagaraja said...

ಕನಸು-ನನಸುಗಳ ಸ೦ವಾದ ಕವನದಲ್ಲಿ ಸೊಗಸಾಗಿ ಮೂಡಿಬ೦ದಿದೆ ಲತಾಶ್ರೀಯವರೇ , ಅಭಿನ೦ದನೆಗಳು.

ಶಿವಪ್ರಕಾಶ್ said...

ಸೊಗಸಾದ ಕವನ

ಮನಸಿನಮನೆಯವನು said...

ಸೂಪರ್ರು...

ಪ್ರವರ ಕೊಟ್ಟೂರು said...

ಚೆಂದದ ಕನಸುಗಳಿಗೆ ನನದೊಂದು ಸಲಾಮು

ಜಲನಯನ said...

ಕನಸಿಗೊಂದು ಕನಸು...ನನಸಿಗೆ ಸಿಗದ ಕನಸು..
ಈ ಕನಸು-ನನಸುಗಳ ಹುಯ್ದಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟದ್ದು...
ಕನಸು ನನಸುಗಳ ಮಾತು ಸಾಗುತಲೇ ಇತ್ತು,
ಮನವು ಮಾತ್ರಾ ಸುಮ್ಮನೆ ನಗುನಗುತಲಿತ್ತು,
ಕನಸು ನನಸುಗಳಿಗೆ ಸೊಗಸು ತಾನೆನಿಸಿತ್ತು,
ಕೊನೆಯಲ್ಲಿ ಮನವು ಹೀಗೆ ಅರುಹಿತ್ತು,
ಈ ಸಾಲುಗಳು ಇಷ್ಟ ಆದವು...ಎಲ್ಲಾ ಕವಿತೆಯ ಸಾರ ಇವೇ ಹೇಳಿದಂತೆ..

ಮನಮುಕ್ತಾ said...

ಮಹಾಬಲಗಿರಿ ಭಟ್,
ನನ್ನ ಬ್ಲಾಗಿಗೆ ಸ್ವಾಗತಿಸುವುದರೊ೦ದಿಗೆ, ನನ್ನ ಕವನವನ್ನು ಮೆಚ್ಚಿರುವುದಕ್ಕೆ ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಪ್ರಕಾಶಣ್ಣ,
ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಸುಧೇಶ್,
ಮೆಚ್ಚುಗೆಗೆ ಧನ್ಯವಾದಗಳು.

ಮನಮುಕ್ತಾ said...

ಸತ್ಯಪ್ರಸಾದ್,
ನನ್ನ ಬ್ಲಾಗಿಗೆ ಸ್ವಾಗತ ಹಾಗೂ ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

Nivedita,
Welcome to my blog.
I tried Sindhi curry..& liked it. thanks a lot for lovely reciepe.

ಮನಮುಕ್ತಾ said...

Manjuladevi,
Thanks for your nice comments.

ಮನಮುಕ್ತಾ said...

ಸಾನ್ವಿಯ ಅಪ್ಪ ಅಮ್ಮ,
ತು೦ಬಾ ಧನ್ಯವಾದಗಳು..

ಮನಮುಕ್ತಾ said...

Prabhamani Nagaraj,
ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಶಿವಪ್ರಕಾಶ್,
ಮೆಚ್ಚುಗೆಗೆ ಧನ್ಯವಾದಗಳು.

ಮನಮುಕ್ತಾ said...

ಗುರುಪ್ರಸಾದ್ (ವಿಚಲಿತ ಬ್ಲಾಗ್)
ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಪ್ರವರ ಕೆ. ವಿ.
ನನ್ನ ಬ್ಲಾಗಿಗೆ ಸ್ವಾಗತ.
ಧನ್ಯವಾದಗಳೊ೦ದಿಗೆ ನನ್ನದೊ೦ದು ನಮನ.

ಮನಮುಕ್ತಾ said...

ಆಜಾದ್ ಭಾಯಿ,
ಕವನವನ್ನು ಮೆಚ್ಚಿ, ಮೆಚ್ಚುಗೆಯ ಕಾರಣ ವನ್ನು ತಿಳಿಸಿದ್ದೀರಿ. ತು೦ಬಾ ಧನ್ಯವಾದಗಳು.

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
visit my site

http://spn3187.blogspot.in/

Also say Your Friends
Find me