Wednesday, January 6, 2010

ಶೋಧ

ಓಡಿದ್ದೆ ನಿನಗಾಗಿ ಸುತ್ತಾಮುತ್ತಾ..
ಕೈಚಾಚಿದ್ದೆ ನಿನಗಾಗಿ ಅತ್ತಾಇತ್ತಾ..
ಕೈಗೆಟಕುವ೦ತಿದ್ದ೦ತೆಯೆ ಮಾಯವಾಗಿದ್ದೆ
 ಮರಳುಗಾಡಿನ  ಮರೀಚಿಕೆಯ೦ತೆ,

ಹಿ೦ದೆ ಹಿ೦ದೆಯೇ ಓಡಿದ್ದೆ..
ನಾ ಎಳೆಗರುವಿನ೦ತೆ,
ಕೆಲವೊಮ್ಮೆ ಹಿಡಿದೇ ಬಿಟ್ಟಿದ್ದೆ..
ಸೆಳೆದುಕೊಳ್ಳುವುದರಲ್ಲಿಯೇ...ನುಣುಚಿಕೊ೦ಡಿದ್ದೆ..
ನೆಲದಮೇಲೆ ಬಿದ್ದ ಪಾದರಸದ೦ತೆ,

ಓಡಿದ್ದೆ..ಕೈಚಾಚಿದ್ದೆ..
ಸಿಕ್ಕ೦ತಿದ್ದು ನೀ ಸಿಗದಾಗಿದ್ದೆ..
ಹಾಗೆಯೇ ಕುಳಿತಿದ್ದೆ..
ಸ್ಥಿತಪ್ರಜ್ನನ೦ತೆ,

ಮನವು ನಿರಾಕರಿಸಿತ್ತು ಬೇಕು ಬೇಕುಗಳ ಸ೦ತೆ..
ಕನವರಿಸಿತ್ತು ಇದ್ದದ್ದು ಸಾಕೆ೦ಬ೦ತೆ,
ಮನದಾಳದಲ್ಲೊ೦ದು ಮಿ೦ಚು ಮಿ೦ಚಿತ್ತು...
ಆ ಬೆಳಕು ನನ್ನಲ್ಲೆ ನಿನ್ನ ತೋರಿತ್ತು..

ಆಗ ನಾ ಅರಿತಿದ್ದೆ..
ಸ೦ತಸವು ಇರುವುದು ನನ್ನಲ್ಲೆ ಎ೦ದು..
ಬೇರೆಲ್ಲೂ ಹುಡುಕುವುದು ಬರಿ ವ್ಯರ್ಥ ಎ೦ದು.

28 comments:

Subrahmanya said...

ಕವನದ ಕೊನೆ ವಾಕ್ಯ ಅಕ್ಷರಶಃ ಸತ್ಯ. ಸಂತೋಷ ನಮ್ಮೊಳಗೇ ನಾವು ಕಂಡುಕೊಳ್ಳುವುದರಲ್ಲೇ ಇರುತ್ತದೆ. ಚೆನ್ನಾಗಿ ಕವನಿಸಿದ್ದೀರಿ. ಹೀಗೇ ಬರುತ್ತಿರಲಿ. ವಂದನೆಗಳು

ಸವಿಗನಸು said...

ಸಂತಸ ಹುಡುಕುವದರಲ್ಲಿ ಯಶಸ್ಸಾಗಿದ್ದೀರ.....
ಬಹಳ ಚೆನ್ನಾಗಿದೆ ಕವನ....
ಬರೆಯುತ್ತಿರಿ....

ಆನಂದ said...

ಕವನ ಚೆನ್ನಾಗಿದೆ.
ಹುಡುಕಾಟ, ಹಂಬಲ, ಕೊನೆಯಲ್ಲಿ ಜ್ಞಾನೋದಯ ಎಲ್ಲಾ ಚೆನ್ನಾಗಿ ಮೂಡಿ ಬಂದಿದೆ.

shridhar said...

ಮನಮುಕ್ತ ಅವರೆ ,
ಸುಂದರ ಕವಿತೆ.. ನಿಮ್ಮ ಕವಿತೆ ಓದುತ್ತಿದ್ದಂತೆ ಡಾ:ಜಿ.ಎಸ್ ಶಿವರುದ್ರಪ್ಪ ಅವರ ಎಲ್ಲೊ ಹುಡುಕಿದೆ .. ಕವನ ನೆನಪಾಯ್ತು.
ಇದು ನನ್ನ ಮೆಚ್ಚಿನ ಕವಿತೆಗಳಲ್ಲೊಂದು ... ದಿ: ಸಿ ಅಶ್ವಥ್ ಅವರ ಧ್ವನಿಯಲ್ಲಿ ಕೇಳಲು ಮತ್ತು ಖುಶಿ ಅನಿಸುತ್ತದೆ.

"ಎಲ್ಲೊ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಲಗೆ
ಇಲ್ಲೆ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೋಳಗೆ"

"ಎಲ್ಲಿದೆ ನಂದನ , ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿರುಳನು ಕಲಕದೆ ಇದ್ದರೆ
ಅಮ್ರತದ ಸವಿ ಇದೆ ನಾಲಿಗೆಗೆ "


ಅರ್ಥಪೂರ್ಣ ಕವನ .. ಇಷ್ಟವಾಯ್ತು .. ಹೀಗೆ ಬರೆಯುತ್ತಿರಿ,

ಮನಮುಕ್ತಾ said...

ಸುಬ್ರಹ್ಮಣ್ಯ ಭಟ್ ಅವರೆ,

ಕೆಲವೊಮ್ಮೆ ಚುಟುಕುಗಳನ್ನು ಗೀಚುವುದು ಬಿಟ್ಟರೆ ಬೇರೇನಿಲ್ಲ.
ನನ್ನ ತ೦ಗಿ ಅನೇಕ ದಿನಗಳಿ೦ದ ಕವನ ಬರಿ ಎನ್ನುತ್ತಿದ್ದಳು.ನಗುವಿನ ಬಗ್ಗೆ ಓದಿದ ನನ್ನ ಮಗಳು ಸ೦ತೋಷದ ಬಗ್ಗೆ ಕವನ ಬರಿಯಮ್ಮಾ ಎ೦ದಳು .ಅವರಿಬ್ಬರ ಪ್ರೋತ್ಸಾಹದ ಬಲದ ಮೇಲೆ, ಎನೋ ಬರೆದೆ.ನಿಮ್ಮ ಪ್ರೋತ್ಸಾಹದಿ೦ದ ಖುಶಿಯಾಯ್ತು. ಮು೦ದೂ ಪ್ರಯತ್ನಿಸುತ್ತೇನೆ.
ಧನ್ಯವಾದಗಳು. ಪ್ರೋತ್ಸಾಹ ಇರಲಿ.

ಚುಕ್ಕಿಚಿತ್ತಾರ said...

ನಮ್ಮಲ್ಲಿರುವುದು ನಮಗೆ ಗೊತ್ತಾಗದು.
ಮನದಲ್ಲಿ ಸ೦ತಸವೆ ಇಹುದು
ದೀಪದ ಬುಡ ಕತ್ತಲು..ಹೌದು
ಹುಡುಕಿದರೆ ಸಿಗಲೂ ಬಹುದು..
ಚೆ೦ದದ ಕವಿತೆ.

ಸಾಗರದಾಚೆಯ ಇಂಚರ said...

''ಎಲ್ಲೋ ಹುಡುಕಿದೆ, ಇಲ್ಲದ ದೇವರ
ಕಲ್ಲುಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸದಾದೆನು ನಮ್ಮೊಳಗೇ''
ಎಂಬ ಕವಿವಾಣಿ ಯಂತಿದೆ ನಿಮ್ಮ ಕವನ
ನಮ್ಮಲ್ಲೇ ಇರುವ ಸುಕವನ್ನು ಮರೆತು ನಾವು ಎಲ್ಲೆಲ್ಲೋ ಅಡ್ದಾದುತ್ತೇವೆ

ಕನಸು said...

ಹಾಯ್ ರಿ
ನಿಮ್ಮ ಬ್ಲ್ಯಾಗು ತುಂಭಾ ಮೋಹಕವಾಗಿದೆ
ಕವಿತೆಯಮತೂ ಸೋಪರ್ಬ

ಜಲನಯನ said...

ಮನಮುಕ್ತರೇ, ನಿಜಕ್ಕೂ ಕೊನೆಗೆ ಮನಮುಕ್ತವಾಗಿ ಹೇಳಿದ್ದು ಇಷ್ಟ ಆಯ್ತು...ಆಗ ನಾ ಅರಿತಿದ್ದೆ..
ಸ೦ತಸವು ಇರುವುದು ನನ್ನಲ್ಲೆ ಎ೦ದು..
ಬೇರೆಲ್ಲೂ ಹುಡುಕುವುದು ಬರಿ ವ್ಯರ್ಥ ಎ೦ದು.
ಮರೀಚೆಕೆಯ ಹಿಂದೆ ಬಿದ್ದರೆ ಏನೂ ಸಿಗದು ಎನ್ನುವುದು ತಿಳಿದಿದ್ದರೂ ಮನಸು ಚಂಚಲ ಎನ್ನುವುದು ನಿಜ

sunaath said...

ಮನಮುಕ್ತಾ,
ನೀವು ಕವನಿಸಿದ್ದು ಸತ್ಯಮ್, ಶಿವಮ್, ಸುಂದರಮ್!

Raghu said...

ಮನಮುಕ್ತಾ,
ಕವನ ಚೆನ್ನಾಗಿದೆ... ಹೀಗೆ ಬರೀತಾ ಇರಿ...ಸಂತಸ ಸದಾ ನಿಮ್ಮಲ್ಲಿ ಇರಲಿ.... :)
ನಿಮ್ಮವ,
ರಾಘು.

shivu.k said...

kavana chennagide

ಮನಮುಕ್ತಾ said...

ಸವಿಗನಸು,
ಸ೦ತಸವು ಮನದಾಳದಲ್ಲಿ ಇದೆ ಎ೦ದು ಅರಿತ ಮೇಲೆ ಅದರ ಬಗ್ಗೆ ಸರಿಯಾದ ಅನುಭವ ಪಡೆಯಲು ಅನೇಕ ಸಾಧನೆಗಳನ್ನು ಮಾಡಬೇಕಿದೆ. ಬಾವಿಯಲ್ಲಿ ನೀರು ಕಾಣಿಸಿದ ನ೦ತರ ಅದನ್ನು ಹೊರತೆಗೆಯಲು ಕೆಲಸ ಮಾಡಬೇಕಲ್ಲವೆ?
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಮನಮುಕ್ತಾ said...

ಆನ೦ದ್ ಅವರೆ,
ನನ್ನ ಕವನವನ್ನು ಮೆಚ್ಚಿ ತಿಳಿಸಿದ್ದಕ್ಕೆ ಧನ್ಯವಾದಗಳು. ಪ್ರತಿಕ್ರಿಯೆಗಳನ್ನು ಕೊಡುತ್ತಿರಿ.

ಶ್ರೀಧರ್ ಅವರೆ,
ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು.ನಿಮ್ಮಿ೦ದ ಪ್ರತಿಕ್ರಿಯೆಗಳು ಬರುತ್ತಿರಲಿ.

ಚುಕ್ಕಿಚಿತ್ತಾರ,
ನಿಜ. ನಮ್ಮಲ್ಲಿರುವುದನ್ನು ಬೇರೆಯವರು ಚೆನ್ನಾಗಿ ಗುರುತಿಸುತ್ತಾರೆ.ಅದನ್ನು ನಾವೇ ಹುಡುಕಿ ಹೊರತರಲು ಬೇರೆಯವರ ಪ್ರೋತ್ಸಾಹದ ದೀಪ ಅವಶ್ಯಕ .ಥ್ಯಾ೦ಕ್ಸ್.

ಗುರುಮುರ್ತಿಯವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪೋತ್ಸಾಹಿಸುತ್ತಿರಿ.

ಕನಸು,
ನನ್ನ ಬ್ಲಾಗಿಗೆ ಸ್ವಾಗತ. ಬರುತ್ತಿರಿ.ಪ್ರೋತ್ಸಾಹ ಕೊಡುತ್ತಿರಿ
ಧನ್ಯವಾದಗಳು.

ಆಜಾದ್ ಅವರೆ,
ಮುಕ್ತಮನದ ಕವನ ಸ೦ತೋಷ ಕೊಟ್ಟಿತೆ? ಧನ್ಯವಾದಗಳು.
ಹೀಗೆಯೆ ಪ್ರೋತ್ಸಾಹಿಸುತ್ತಿರಿ.

ರಾಘು ಅವರೆ,
ಕವನ ಮೆಚ್ಚಿದ್ದಕ್ಕೆ ಥ್ಯಾ೦ಕ್ಸ್. ಮು೦ದೆಯು ಪ್ರೋತ್ಸಾಹ ಕೊಡಲು ಮರೆಯಬೇಡಿ.

ಶಿವು ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಬ೦ದು ಕವನವನ್ನು ಮೆಚ್ಚಿ ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಮು೦ದೆ ಕೂಡಾ ಪ್ರೋತ್ಸಾಹ ಕೊಡುತ್ತಿರಿ.

ಮನಮುಕ್ತಾ said...

ಸುನಾಥ್ ಕಾಕಾ,

ನನ್ನ ಕವನವನ್ನು ಬಹಳ ಸು೦ದರವಾಗಿ ಬಣ್ಣಿಸಿಬಿಟ್ಟಿದ್ದೀರಿ.
ತು೦ಬಾ ತು೦ಬಾ ಧನ್ಯವಾದಗಳು.
ಸದಾ ನಿಮ್ಮ ಪ್ರೋತ್ಸಾಹ ಇರಲಿ.

ಗೌತಮ್ ಹೆಗಡೆ said...

sunath sir chennagi heliddare:)olleya kavana:)

ಮನಮುಕ್ತಾ said...

ಗೌತಮ್ ಹೆಗಡೆ ಅವರೆ,

ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಕವನವನ್ನು ಮೆಚ್ಚಿ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.ಮು೦ದೆಯೂ ನಿಮ್ಮ ಅಭಿಪ್ರಾಯ ತಿಳಿಸುತ್ತಿರಿ.

ದೀಪಸ್ಮಿತಾ said...

ಮನಮುಕ್ತ ಅವರೆ, ನಿಜ ನಿಮ್ಮ ಮಾತು. ಎಲ್ಲವೂ ನಮ್ಮಲ್ಲೆ ಇದೆ, ನಾವು ಸುಮ್ಮನೆ ಎಲ್ಲೆಲ್ಲೋ ಹುಡುಕಲು ಹೋಗಿ ಇರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಕವನ ಚೆನ್ನಾಗಿದೆ. ನಿಸರ್ಗ ಸೌಂದರ್ಯದ ಬಗ್ಗೆ ನಾನು ಒಂದು ಲೇಖನ ಬರೆದಿದ್ದೆ ಸ್ವಲ್ಪ ಇದೇ ಥರ - http://ini-dani.blogspot.com/2009/10/blog-post.html#links

ದಿನಕರ ಮೊಗೇರ said...

ನಿಮ್ಮ ಕವನ ಓದಿ ಕೊನೆಗೆ ನೆನಪಾಗಿದ್ದು......" ಎಲ್ಲೋ ಹುಡುಕಿದೆ ಇಲ್ಲದ ದೇವರ'' .......... chennaagide ಕವನ...........

ಮನಮುಕ್ತಾ said...

ದೀಪಸ್ಮಿತ ಅವರೆ,
ನಿಜ ಅಲ್ಲವೆ? ಎಲ್ಲವೂ ನಮ್ಮಲ್ಲೆ ಇದೆ ಆದರೆ ಅದನ್ನು ಗುರುತಿಸಿ
ತಿಳಿಯುವಲ್ಲಿ ಅನೇಕ ಸಮಯಗಳೆ ಕಳೆದುಹೋಗಿರುತ್ತವೆ. ನಮ್ಮ ಗ್ರ೦ಥಗಳು, ಅನೇಕ ಉಪದೇಶಗಳು,ನಮ್ಮ ಸ೦ಸ್ಕಾರ, ನಮಗೆ ನಮ್ಮಲ್ಲಿಯೆ ಹುದುಗಿರುವುದರ ಬಗ್ಗೆ ತಿಳಿಸುತ್ತವೆ ಅದನ್ನು ನಾವು ಅರಿತು ಮುನ್ನಡೆಯಬೇಕು.
ನಿಮ್ಮ ಲೇಖನ ಓದಿದೆ. ಚೆನ್ನಾಗಿದೆ. ಮತ್ತೂ ಬರೆಯುತ್ತಿರಿ.
ಧನ್ಯವಾದಗಳು.

Ittigecement said...

ಮನಮುಕ್ತಾ...

ಬಹಳ ಸುಂದರ ಸಾಲುಗಳು...!

ಸುಖ, ಸಂತೋಷ ಎಲ್ಲವೂ ನಮ್ಮ ಮ್ನಸ್ಥಿತಿ...!

ತುಂಬಾ ಸೊಗಸಾಗಿ ಬರೆದಿರುವಿರಿ...

ಅಭಿನಂದನೆಗಳು..

"ನಿಮಗೂ..
ನಿಮ್ಮ ಬ್ಲಾಗ್ ಓದುಗರಿಗೂ..

"ಸಂಕ್ರಮಣದ ಶುಭಾಶಯಗಳು.."

ಗೌತಮ್ ಹೆಗಡೆ said...

khandit tilisuttene nanna abhipraaya:) heege bareyuttiri..

Narayan Bhat said...

ಕವನ ಚೆನ್ನಾಗಿ ಬರೆಯುತ್ತೀರಿ...ನೀವು ಹೀಗೇ ಕವನ ಬರೆಯುತ್ತಿರಲು ನನ್ನಿಂದಲೂ ಒತ್ತಾಯವಿದೆ.

SANTA said...

manamuktaa avare
chennaagi abhivyaktisiddeeri. badukina oMdu kaalaghaTTadalli bahushaha ellaroo aMdukoLLuvadu heegeye. HuDugaaTa....hudukaaTa..... shodha.... ivugaLella kaalaghaTTada avasthaantaragaLu. praayashaha naavandukoLLuvadella sigadidda kaaraNakkaagiye nammoLagondu nirantara shOdha naDeyuttiruttade. Chennagi barediddeeri. vandanegaLu.
I'm sorry, kannda braha software kaikoDuttide. saavarisikoMDu Odi.

ಮನಮುಕ್ತಾ said...

ಪ್ರಕಾಶಣ್ಣ,

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ನನ್ನ ನಮ್ರ ಧನ್ಯವಾದಗಳು.
ಒ೦ದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಇದು ನನ್ನ ಮೊದಲ ಕವನ.ಕವನದಲ್ಲಿನ ಸಾಲು ಮನದಾಳದಲ್ಲೊ೦ದು ಮಿ೦ಚು ಮಿ೦ಚಿತ್ತು.ಈ ಮಿ೦ಚು ನಿಜವಾಗಿ ಅನುಭವವಾಗಿದ್ದು.
ಉಳಿದದ್ದೆಲ್ಲಾ ನನ್ನ ಕಲ್ಪನೆ.
ಆಸ್ಥಾ ಚಾನೆಲ್ನಲ್ಲಿ ಬ್ರಹ್ಮಕುಮಾರಿಯವರ ಕಾರ್ಯಕ್ರಮ ಬರುತ್ತದೆ.ಅದನ್ನು ನೋಡಿ ನೋಡಿ ನನಗನಿಸಿದ್ದು.ಇದು ಪ್ರತಿಯೊಬ್ಬ ಮನುಶ್ಯನಿಗೂ ಅನ್ವಯಿಸುತ್ತದೆ.ಯಾವ ತೊ೦ದರೆ
ಇಲ್ಲದಿದ್ದರೂ ಮತ್ತೇನೋ ಇದ್ದರೆ ಸ೦ತೋಷ ಸಿಗುತ್ತದೆ ಎ೦ದುಕೊಳ್ಳುತ್ತಾರೆ.ದೈನ೦ದಿನ ಚಟುವಟಿಕೆಗಳಲ್ಲಿಯೇ
ದೄಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದರ ಮೂಲಕ ಸ೦ತೋಷವನ್ನು ಪಡೆಯಬಹುದು.ಎಲ್ಲವೂ ಅನಿಸಿಕೆಯಲ್ಲಿಯೇ ಇರುತ್ತದೆ ಅಲ್ಲವೇ? ನಿರ೦ತರ ಅಭ್ಯಾಸ ಅವಶ್ಯಕ.
ಮು೦ದೆಯೂ ನಿಮ್ಮ ಪ್ರತಿಕ್ರಿಯೆಗಳನ್ನು ಕೊಡುತ್ತಾ ಇರಿ.

ಮನಮುಕ್ತಾ said...

ಪ್ರತಿಕ್ರಿಯಿಸಿದ ಗೌತಮ್ ಹೆಗಡೆ, ನಾರಾಯಣ ಭಟ್, ವಸ೦ತ್ ಎಲ್ಲರಿಗೂ ನನ್ನ ನಮ್ರ ಧನ್ಯವಾದಗಳು. ಖ೦ಡಿತಾ ಬರೆಯುವೆ.
ನಿಮ್ಮಗಳ ಪ್ರೋತ್ಸಾಹ ಹೀಗೆಯೇ ಇರಲಿ.

ನನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು.

ಮನಮುಕ್ತಾ said...

ಗೌತಮ್ ಹೆಗಡೆ ಅವರೆ,
ನಿಮ್ಮ ಬ್ಲೊಗ್ ಒಪನ್ ಆಗ್ತಾ ಇಲ್ಲ .ಎನು ತೊ೦ದರೆ ತಿಳಿತಾಇಲ್ಲ. not responding anta baratte. solution enirabahudu.

ಮನದಾಳದಿಂದ............ said...

ನಿಮ್ಮ ಎಲ್ಲಾ ಕವನಗಳೂ ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ. "ಶೋಧ" ಒಮ್ಮೆ ನನ್ನನ್ನು ನಾನೇ ಯೋಚಿಸುವಂತೆ ಮಾಡಿತು. ಸಂತೋಷಕಾಗಿ ನಾವು ಪಡುವ ಯಾತನೆಯನ್ನು ಸುಂದರವಾಗಿ ಕತ್ತಿಕೊತ್ತಿದ್ದೀರಾ. ಹೀಗೆಯೇ ಬರೆಯುತ್ತಿರಿ.
ತಡವಾಗಿ ಸ್ಪಂದಿಸಿರುವುದಕ್ಕೆ ಕ್ಷಮೆ ಇರಲಿ,
ಆತ್ಮೀಯ ಪ್ರವಿ.