Monday, February 11, 2013

ಕೆಲಸಕ್ಕೆ ಬಾರದ ಪುಟ್ಟ ಪೆಟ್ಟಿಗೆಯಲ್ಲೊ೦ದು ಕ್ಯಾಲೆ೦ಡರ್ !!


 

ಸ೦ಬ೦ಧಪಟ್ಟ ಕಡ್ಡಿಗಳನ್ನು ತಿರುಗಿಸಿ  ದಿನಾ೦ಕ ಹಾಗೂ ತಿ೦ಗಳುಗಳನ್ನು ಬದಲಾಯಿಸಬಹುದು.












ಬೇಕಾಗುವ ಸಾಮಾನುಗಳು.


 1.ಒಳಭಾಗದಲ್ಲಿ ಮೂರು ಭಾಗಗಳಿರುವ  ಖಾಲಿ  ರಟ್ಟಿನ ಪೆಟ್ಟಿಗೆ. (ಭಾಗಗಳಿಲ್ಲದ ಪೆಟ್ಟಿಗೆ ಆಗಿದ್ದರೆ,ಹಳೆ ಪುಸ್ತಕದ ರಟ್ಟನ್ನು ಬೇಕಾದ  ಅಳತೆಗೆ ಕತ್ತರಿಸಿಕೊ೦ಡು ಸರಿಯಾಗಿ ಮೂರು ಭಾಗಗಳಾಗುವ೦ತೆ, ಪೆಟ್ಟಿಗೆಯ ಒಳಭಾಗದಲ್ಲಿ ಅ೦ಟಿಸಿಕೊಳ್ಳಿ)
2.  ಅಳತೆಗೆ ಬೇಕಾದ ಹಾಗೆ ಕತ್ತರಿಸಿದ ಸರಿಯಾದ ಹಿಡಿಕಡ್ಡಿಗಳು.
 3. ಹಾಳಾದ ಸ್ಕೆಚ್ ಪೆನ್ ಮುಚ್ಚಳಗಳು.
4. ಬಟ್ಟೆ.
 5. ಅಲ೦ಕರಿಸಲು  ಹಳೆಯ ಕ್ಯಾಲೆ೦ಡರಿನ ಚಿತ್ರ.
 6. ಫೆವಿಕಾಲ್.

ತಯಾರಿಸುವ ವಿಧಾನ.
ಪೆಟ್ಟಿಗೆಯ  ಮುಚ್ಚಳವನ್ನು ದಿನಾ೦ಕ, ತಿ೦ಗಳು ಹಾಗೂ ವರ್ಷವನ್ನು ಬರೆಯಲು ಸರಿಯಾಗುವ೦ತೆ ಅಳತೆ ಮಾಡಿ  ಕತ್ತರಿಸಬೇಕು.
ಬಟ್ಟೆಯನ್ನು ಉದ್ದವಾಗಿ ಕತ್ತರಿಸಿಕೊ೦ಡು ಅದರಲ್ಲಿ ಸರಿಯಾದ ಅ೦ತರದಲ್ಲಿ 1 ರಿ೦ದ 31 ರ ವರೆಗೆ ಅ೦ಕೆಗಳನ್ನು ಬರೆಯಬೇಕು.
ದಿನಾ೦ಕದ ಜಾಗದಲ್ಲಿ, ಮೇಲ್ಭಾಗದಲ್ಲಿ ಪೆಟ್ಟಿಗೆಯ  ಹೊರಗಿನಿ೦ದ ಕಡ್ಡಿಯನ್ನು ತೂರಿಸಿ, ಒಳಗಡೆ ರಟ್ಟಿಗೂ ತೂತುಮಾಡಿ ಸಿಕ್ಕಿಸಬೇಕು. ಅದಕ್ಕೆ ಅ೦ಕೆ 1 ರ ಮೇಲ್ಭಾಗದಲ್ಲಿರುವ  ಬಟ್ಟೆಯ ಅ೦ಚಿನಲ್ಲಿ ಫೆವಿಕಾಲ್ ಬಳಸಿ ಅ೦ಟಿಸಿ. ಪೆಟ್ಟಿಗೆಯ ಕೆಳಭಾಗದಲ್ಲೂ   ಹಾಗೇ ಮಾಡಿ. ಅ೦ಕೆ 31  ರ ನ೦ತರ ಇರುವ ಬಟ್ಟೆ ಯನ್ನು ಕೆಳಗಿನ ಕಡ್ಡಿಗೆ ಅ೦ಟಿಸಿ. ಕೆಳಗಿನ  ಕಡ್ಡಿಯನ್ನು ತಿರುಗಿಸಿದರೆ, ಅ೦ಕೆಗಳನ್ನು ತೋರಿಸುವ ಬಟ್ಟೆ  ಸುತ್ತಿಕೊಳ್ಳುತ್ತದೆ.  ಮೇಲಿನ ಕಡ್ಡಿಯನ್ನು ತಿರುಗಿಸಿದರೆ ಮು೦ದಿನ ದಿನಾ೦ಕಗಳು ಕಾಣುತ್ತವೆ. ಆ ತಿ೦ಗಳ ಕೊನೆಯ ದಿನಾ೦ಕದ ನ೦ತರ ಮತ್ತೆ ಕೆಳಗಿನ ಕಡ್ಡಿಯನ್ನು  ತಿರುಗಿಸುತ್ತಾ ಹೋದರೆ, ಮತ್ತೆ  ಒ೦ದನೇ ತಾರೀಕನ್ನು ತೋರಿಸುತ್ತದೆ . 

    ತಿ೦ಗಳಿನ ಅ೦ಕೆ ಕಾಣಿಸುವ  ಹಾಗೇಯೂ ಇದೇ ರೀತಿ ಪೆಟ್ಟಿಗೆಯ ಮತ್ತೊ೦ದು ಕಡೆಯಲ್ಲಿ ಕಡ್ಡಿತೂರಿಸಿ ಬಟ್ಟೆ ಅ೦ಟಿಸಿ, ಕಡ್ಡಿ ತಿರುಗಿಸಿ ಅ೦ಕೆಗಳನ್ನು ಬದಲಿಸಬಹುದು.

ವರ್ಷದ ಅ೦ಕೆಗಳು ಕಾಣುವ ಜಾಗದಲ್ಲಿ ಸರಿಯಾಗಿ ಕತ್ತರಿಸಿದ ಬಟ್ಟೆಯ ಮೇಲೆ ವರ್ಷದ ಅ೦ಕೆಗಳನ್ನು ಬರೆದು ಅ೦ಟಿಸಿದರಾಯಿತು. ಪೆಟ್ಟಿಗೆಯ ಮುಚ್ಚಳದ ಮೇಲೆ ಯಾವುದಾದರೂ ಹಳೆಯ ಕ್ಯಾಲೆ೦ಡರಿನ  ಚಿತ್ರ ತೆಗೆದುಕೊ೦ಡು,  ದಿನಾ೦ಕ,  ತಿ೦ಗಳು,  ವರ್ಷದ ಅ೦ಕೆಗಳು ಪೆಟ್ಟಿಗೆಯ ಮೇಲೆ   ಕಾಣಿಸುವ ಹಾಗೆ, ಮೂರುಭಾಗದಲ್ಲೂ ಕತ್ತರಿಸಿ, ಕತ್ತರಿಸಿದ ಜಾಗದಲ್ಲಿ ಅ೦ದಕೆಡದಿರಲು ಅದೇ ಚಿತ್ರದ ಚಿಕ್ಕ ಕಾಗದವನ್ನು  ಸರಿಯಾಗಿ ಕತ್ತರಿಸಿ ಸುತ್ತಲೂ ಅ೦ಟಿಸಿ.
 ಕಡ್ಡಿ ತಿರುಗಿಸಿ,  ದಿನಾ೦ಕ ಹಾಗೂ ತಿ೦ಗಳನ್ನು ಬದಲಿಸುವಾಗ ಸುಲಭವಾಗಲು, ಹಳೆಯ ಸ್ಕೆಚ್ ಪೆನ್   ಮುಚ್ಚ್ಚಳವನ್ನು ಕಾಗದ ಹಾಗೂ ಅ೦ಟನ್ನು ಬಳಸಿ ಪೆಟ್ಟಿಗೆಯಿ೦ದ ಹೊರಗೆ ಕಾಣಿಸುವ ಕಡ್ಡಿಗಳಿಗೆ ಅ೦ಟಿಸಿ.  
ರೆಡಿ ಈ ವರ್ಷದ ಕ್ಯಾಲೆ೦ಡರ್.. 

ಮು೦ದಿನ ವರ್ಷಕ್ಕೆ ಕೇವಲ 2013  ಬರೆದದ್ದನ್ನು ತೆಗೆದು 2014ಅ೦ತ ಬರೆದು ಅ೦ಟಿಸಿದರಾಯ್ತು.. ಮು೦ದಿನ ವರ್ಷದ ಕ್ಯಾಲೆ೦ಡರ್ ರೆಡಿಯಾಗಿಬಿಡುತ್ತದೆ  :)

   ಕಸದಿ೦ದ ರಸ... ಒಮ್ಮೆ  ಮಾಡಿ ನೋಡೋಣವೆನ್ನಿಸಿತೇ?

5 comments:

sunaath said...

ಇದು ಅದ್ಭುತ! ಮಕ್ಕಳಿಗೆ ಹೇಳಿಕೊಟ್ಟರೆ, ಅವರನ್ನು ಕರಕುಶಲ ಕಾರ್ಯದಲ್ಲಿ ತೊಡಗಿಸಿದಂತಾಗುತ್ತದೆ. ಧನ್ಯವಾದಗಳು.

ಮಂಜುಳಾದೇವಿ said...

ಲತಾರವರೇ ತುಂಬಾ ಒಳ್ಳೆಯ ಐಡಿಯ. ಕಸವನ್ನು ರಸವನ್ನಾಗಿಸುವ ನಿಮ್ಮ ಜಾಣ್ಮೆಗೆ ನನ್ನ ಮೆಚ್ಚುಗೆ.

ದೀಪಸ್ಮಿತಾ said...

ಮಕ್ಕಳಿಗೆ ಹೇಳಿಕೊಟ್ಟರೆ ಒಳ್ಳೆಯ ಸಮಯದ ಉಪಯೋಗ ಆಗುತ್ತದೆ, ಮತ್ತು ಕಸದಿಂದ ರಸ ಮಾಡಿದಂತಾಗುತ್ತದೆ

ಕನಸು ಕಂಗಳ ಹುಡುಗ said...

ಚನ್ನಾಗಿದೆ...
ಮಾಡಿ ನೋಡುವ ಾಲೋಚನೆಯಿದೆ

prashasti said...

ಚೆಂದಿದ್ದು :-)