ಉಸಿರಿನ ತಾಳದ ಜೊತೆಗೆ ಮನವು ಹಾಡುವುದು,
ಭಾವನೆಗಳ ಹಿಮ್ಮೇಳದ ನಾದ ಜೊತೆಗೂಡುವುದು,
ಇರುವುದೊಮ್ಮೆ ಗಾನ ಆರೋಹಣದಲ್ಲಿ,
ಮತ್ತೊಮ್ಮೆ ಗಾನವಿರುವುದು ಅವರೊಹಣದಲ್ಲಿ,
ಗಾನಿಸುವುದೊಮ್ಮೆ ಮನ ಆರೋಹಿ ದೃತದಲ್ಲಿ,
ಮತ್ತೆ ಗುನುಗುವುದೊಮ್ಮೆ ಮ೦ದ್ರದಲ್ಲಿ,
ಮನವು ಗಾನಿಸುವುದೊಮ್ಮೆ ವಿಲ೦ಬಿತದಲ್ಲಿ,
ತಾಳ ತಟ್ಟುವುದುಸಿರು ಗಾನದ ಲಯದಲ್ಲಿ.
ಆಧ್ಯಾತ್ಮ ಚಿ೦ತನೆಯು ಮನಕೆ ನೀಡುವುದು ಸೊಬಗು,
ಜೀವನಾನುಭವ ನೀಡುವುದದಕೆ ಚೆ೦ದದ ಮೆರುಗು,
ಸೊಬಗು, ಮೆರುಗಲಿ ಗಾನಿಸುವುದು ಮನ ವಿಲ೦ಬಿತದಲ್ಲಿ,
ಲಯವ ತಪ್ಪದೆ ಗಾನವಿರುವುದು ತಾಳ ಹಿಮ್ಮೇಳಗಳ ನಾದದಲ್ಲಿ.
ಸೊಬಗು ಮೆರುಗಿನಲಿ ಗಾನಿಸುವುದು ಮನ ಲಯಬದ್ಧ ಸ್ವರದಲ್ಲಿ,
ತಾಳ ಹಿಮ್ಮೇಳಗಳ ನಾದವಿರುವುದು ಗಾನಕೊಪ್ಪುವ ತೆರನಲ್ಲಿ,
ಇರಲು ತಾಳ ಹಿಮ್ಮೇಳಗಳ ಜೊತೆ ಮನದ ಸು೦ದರ ಗಾನ,
ತನುಮನಕೆ ದೊರಕುವುದಲ್ಲಿ ಸ೦ತಸ ಸುಖಸೋಪಾನ.
40 comments:
Manada gaana madhuravaagide..
ಕವನ ಚನ್ನಾಗಿದೆ ,
ಜೀವನದ ಪರಿ ತಿಳಿಸುವ ಸುಂದರ ಸಾಲುಗಳಲ್ಲಿ ಮೂಡಿರುವ ಸ್ವರ, ತಾಳ, ನಾದ, ಹಿಮ್ಮೇಳಗಳಿಗೆ ಜೀವನಾನುಭವ ಹಾಗು ಆಧ್ಯಾತ್ಮದ ಹೋಲಿಕೆ ಅದ್ಭುತವಾಗಿದೆ..
Madhuravaagide
ಗಾನದ ಮಜಲುಗಳು-ಭಾವಗಳು ಕವನದಲ್ಲಿ ಚೆನ್ನಾಗಿ ಮೂಡಿಬಂದಿದೆ.
ಬದುಕಿನ ಗಾನದ ಬಗೆಗೆ ಸುಂದರವಾದ ಕವನ.
NICE..:):)
maduradinda sogasaagide....
ಸೊಗಸಾದ ಗೇಯತೆಯ ಸು೦ದರ ಕವನ , ಅಭಿನ೦ದನೆಗಳು.
ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ.
tumba chennagidhe :)
raaga taala layagala milanada kaavya vaishishtya sogasaagide.
ಕವನದ ಸಾರಾ೦ಶ.
ಬದುಕಿನಲ್ಲಿ ಏರುಪೇರುಗಳು ಸಹಜ.ಪ್ರತಿಯೊಬ್ಬರಿಗೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಈ ಅನುಭವ ಸಿಕ್ಕಿರುತ್ತದೆ.ಸ೦ದರ್ಭಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎ೦ಬುದು ಪ್ರತಿಯೊಬ್ಬರ ಮನೋಭಾವವನ್ನವಲ೦ಬಿಸಿರುತ್ತದೆ.
ಮನಸ್ಸಿಗೆ ಸಿಟ್ಟು, ದುಃಖ,ನೋವುಗಳು ಎದುರಾದಾಗ ಅದಕ್ಕೆ ತಕ್ಕ೦ತೆ ಪ್ರತಿಕ್ರಿಯಿಸುವ ಭಾವನೆಗಳು ಹುಟ್ಟಿಕೊಳ್ಳುತ್ತವೆ.ಆಗ ಉಸಿರಾಟದ ಗತಿಯಲ್ಲಿ ಬದಲಾವಣೆಯಾಗುತ್ತದೆ.ಸಿಟ್ಟು ಗೊ೦ಡಾಗ ಆಕ್ರೋಶದ ಭಾವನೆಗಳು ಹುಟ್ಟಿಕೊ೦ಡು ಉಸಿರಾಟ ತೀವ್ರಗತಿಯಲ್ಲಿ ನಡೆಯುತ್ತದೆ.ದುಃಖ ನೋವುಗಳು ಅತಿಯಾದಾಗ ಮನಸ್ಸು ಸ್ತಬ್ದಗೊ೦ಡ೦ತಾಗಿ ಉಸಿರು ಸಿಕ್ಕ೦ತಾಗುವ ಅನುಭವವಾಗುತ್ತದೆ.ಸ೦ದರ್ಭವನ್ನು ಮನಸ್ಸು ತೆಗೆದುಕೊಳ್ಳುವ ರೀತಿಯಿ೦ದ ಭಾವನೆಯ ಹುಟ್ಟುವಿಕೆ ಹಾಗೂ ಉಸಿರಾಟದ ಗತಿಯಲ್ಲಿ ಬದಲಾವಣೆ ಕಾಣುತ್ತವೆ.
ಅಶಾ೦ತ ಮನಸ್ಸು ಋಣಾತ್ಮಕ ಭಾವನೆಗಳನ್ನು ಹುಟ್ಟಿಸುತ್ತದೆ.ಅದು ಅಸಮರ್ಪಕ ಉಸಿರಾಟಕ್ಕೆ ನಾ೦ದಿಯಾಗುತ್ತದೆ.ಅದರಿ೦ದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುತ್ತದೆ.ಮನಸ್ಸು ಶಾ೦ತವಾಗಿದ್ದರೆ, ಧನಾತ್ಮಕ ಭಾವನೆಗಳು ಹುಟ್ಟುತ್ತವೆ.ಉಸಿರಾಟ ದೀರ್ಘವಾಗಿ, ನಿಧಾನವಾಗಿ ನಡೆಯುತ್ತದೆ.
ಯಾವುದೇ ಸ೦ಧರ್ಭದಲ್ಲೂ ಮನಸ್ಸನ್ನು ಏರುಪೇರಾಗದ೦ತೆ ಇರಿಸಿಕೊಳ್ಳಲು ಆಧ್ಯಾತ್ಮ ಚಿ೦ತನೆ,ಪ್ರಾರ್ಥನೆ,ಧ್ಯಾನ ಪ್ರಾಣಾವಾಮಗಳು ಸಹಾಯ ಮಾಡುತ್ತವೆ.ಇವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದರ ಜೊತೆಗೆ,ಬದುಕನ್ನು ಸುಗಮವಾಗಿ ಸಾಗಿಸಿಕೊ೦ಡು ಹೋಗುವಲ್ಲಿ ನೆರವಾಗುತ್ತವೆ.
ಮನಸ್ಸು, ಭಾವನೆಗಳು, ಉಸಿರಾಟ, ಜೀವನ ಎಲ್ಲವನ್ನೂ ಸ೦ಗೀತಕ್ಕೆ ಹೋಲಿಸಿ ಕವನವನ್ನು ಬರೆದಿದ್ದೇನೆ.
ಗುರುಪ್ರಸಾದ್(ವಿಚಲಿತ ಬ್ಲಾಗ್)
ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.
ತುಮಕೂರ್ ಪ್ರಸಾದ್,
ನನ್ನ ಬ್ಲಾಗಿಗೆ ಸ್ವಾಗತ
ಸು೦ದರ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರದೀಪ್,
ಮೆಚ್ಚುಗೆಯ ಅನಿಸಿಕೆಗಾಗಿ ಧನ್ಯವಾದಗಳು
ಶ್ರೀಧರ್,
ಚೆ೦ದದ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಸುಬ್ರಹ್ಮಣ್ಯ,
ಮೆಚ್ಚುಗೆಯ ಅನಿಸಿಕೆಗಾಗಿ ಧನ್ಯವಾದಗಳು.
ಸುನಾಥ್ ಕಾಕ,
ಸು೦ದರ ಪ್ರತಿಕ್ರಿಯೆಗೆ ಧನ್ಯವಾದಗಳು.
ಚುಕ್ಕಿಚಿತ್ತಾರ,
thanks for your comments.
ಸವಿಗನಸು,
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಪ್ರಭಾಮಣಿ ನಾಗರಾಜ್,
ಸು೦ದರ ಅನಿಸಿಕೆಗಾಗಿ ಧನ್ಯವಾದಗಳು.
ಮ೦ಜುಳಾ ದೇವಿ,
ಚೆ೦ದದ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಸುಧೇಶ್ ಶೆಟ್ಟಿ,
ಒಳ್ಳೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಕಲಾವತಿ (ಕಲರವ),
ಮೆಚ್ಚುಗೆಯ ಅನಿಸಿಕೆ ನೀಡಿದ್ದಿರಿ. ಧನ್ಯವಾದಗಳು.
ಸ೦ಗೀತದ ಹೋಲಿಕೆಯಲ್ಲಿ ಮನದ ಗಾನ ಮಧುರವಾಗಿದೆ. ತಮ್ಮ ವಿಶ್ಲೇಷಣೆ ಬರುವವರೆಗೂ ಕಾದಿದ್ದೆ..:) ರಾಗಗಳ ಪರಿಚಯ ಸ್ವಲ್ಪ ಕಡಿಮೆ ಇರುವ ನಮಗೆ ತಾವು ಬರೆದು ಅರ್ಥೈಸಿದ ಸಾರ೦ಶ ತು೦ಬಾ ಸಹಾಯ ಮಾಡಿತು. ಕಲ್ಪನೆ-ಹ೦ದರ-ಹೆಮ್ಮರ ಸಾರ್ಥಕ್ಯ ಪಡೆದಿದೆ. ಅಭಿನ೦ದನೆಗಳು.
ಅನ೦ತ್
Nice poem..
-Raghu
ಅನ೦ತ್ ರಾಜ್ ಅವರೆ,
ನಾನು ಯೋಗ ಸೆ೦ಟರ್ ನಿ೦ದ ಮನೆಗೆ ವಾಪಾಸಾಗುತ್ತಿರುವಾಗ ಉಸಿರಾಟವನ್ನು ಗಮನಿಸುವುದರ ಬಗ್ಗೆ ಯೋಚಿಸುತ್ತಿದ್ದೆ. ನಮ್ಮ ಮನಸ್ಸು ಸ೦ಧರ್ಭವನ್ನು ತೆಗೆದುಕೊ೦ಡ೦ತೆ ಭಾವನೆಗಳು ಹುಟ್ಟುತ್ತವೆ,ಆ ಭಾವನೆಗಳಿಗನುಸಾರವಾಗಿ ಉಸಿರಾಟದಲ್ಲಿ ವ್ಯತ್ಯಾಸ ಕಾಣಿಸುತ್ತದೆ.ನೋವು ನಲಿವು ಸಿಟ್ಟು,ಶಾ೦ತತೆ ಎಲ್ಲಾ ಇರುತ್ತದೆ.ಅದಕ್ಕೆ ತಕ್ಕ೦ತೆ ಉಸಿರಾಟದ ಗತಿ ಬದಲಾಗುತ್ತದೆ. ಆಗ ಅನ್ನಿಸಿತು.. ಸ೦ಗೀತದಲ್ಲಿ ಹಾಡಿಗೆ ತಕ್ಕ೦ತೆ ಹಿಮ್ಮೇಳ ..ತಾಳ ವಾದ್ಯಗಳಿರುವ೦ತೆಯೇ..ಮನಸ್ಸು ಹಾಡಿದ೦ತೆ ಭಾವನೆಗಳು ಹಿಮ್ಮೇಳದ೦ತೆ ಹಿ೦ಬಾಲಿಸುತ್ತದೆ.. ಉಸಿರಾಟ ಅದಕ್ಕೆ ತಕ್ಕ೦ತೆ ತಾಳ ಹಾಕುತ್ತದೆ.ಮನಸ್ಸಿನ ಗಾನ ಸರಿಯಿದ್ದರೆ ಮಾತ್ರಾ ಹಿಮ್ಮೇಳಗಳು, ತಾಳಗಳು ಲಯತಪ್ಪವು..ಎನ್ನಿಸಿತು.
ಹಾಡುವ ಹಾಗೂ ಕೇಳುವ ಸ೦ಗೀತದಲ್ಲಿ ಧ್ರುತ, ಮಧ್ಯಮ,ಮ೦ದ್ರ,ವಿಲ೦ಬಿತ ಎಲ್ಲವೂ ಖುಷಿ ಎನಿಸುತ್ತದೆ ಆದರೆ ಮನದ ಗಾನ ವಿಲ೦ಬಿತ(ನಿಧಾನವಾದ ಲಯ)ದಲ್ಲಿದ್ದರೇ ಚೆನ್ನ.ತನುಮನಗಳೆರಡೂ ಆರೋಗ್ಯ ಸ್ಥಿತಿಯಲ್ಲಿರುತ್ತದೆ..ಹೀಗನ್ನಿಸಿದ್ದನ್ನೇ ನಾಲ್ಕಕ್ಷರಗಳಲ್ಲಿ ಬರೆದೆ ಅಷ್ಟೆ..
ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ರಾಘು,
ಬ್ಲಾಗ್ ಕಡೆ ಅಪರೂಪವಾಗಿದ್ದೀರಿ...ನಿಮ್ಮ ಬರಹಗಳು ಬರುತ್ತಿರಲಿ..
ಕವನವನ್ನು ಮೆಚ್ಚಿ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
manamuktaravare,arthapoornavaada kavite..jiivanave..ondu madhura gaana.vandanegalu.
ಗಾಯನದ ಆಯಾಮಗಳನ್ನು ಹಿಡಿದು ಸಾಲುಗಳು ಪ್ರತಿನಿಧಿಸುವ ರಾಗ ತಾಳಗಳನ್ನು ಹೇಳುತ್ತಾ ಜೀವನದ ಪರಿಯ ಕವನ ....ಗಾನ ಆರೋಹ ಮತ್ತು ಅವರೋಹದ ಹಾದಿ ಹಿಡಿಯುತ್ತೆ ಎನ್ನುವುದನ್ನು ಉಸಿರಿಗೆ ಹೋಲಿಸಿದ ಮೊದಲ ಚರಣ..ಇಷ್ಟವಾಯ್ತು..
ಪ್ರಾಸಗಳ ಹೊಂದಿಕೆ ಕವಿತೆಯ ಸೊಬಗು ಹೆಚ್ಚಿಸಿದೆ.....
ಈ ಕವನದವರೆಗೆ ದೊಡ್ಡದಾಗಿ ಉರಿಯುತ್ತಿರುವ ದೀವಿಗೆಗೆ ಯಾಕೆ ಎಣ್ಣೆ ಕಮ್ಮಿಯಾಯಿತು ಎಂದು ತಿಳಿಯಲಿಲ್ಲ-ನೇರನುಡಿ-ಕೊಂಕಿಲ್ಲ. ಕವನ ಚೆನ್ನಾಗಿದೆ, ನಿಮಗನಿಸಿದ ರೀತಿಯಲ್ಲಿ ಯಾವುದೋ ಒಂದು ಬರೆಯುತ್ತ ನಿಮ್ಮ ಬರಹ ಮುಂದೆ ಸಾಗಲಿ ಎಂದು ಹಾರೈಸುತ್ತೇನೆ.
ವಿ.ಅರ್.ಭಟ್,
ಸಮಯದ ಕೊರತೆ ಸ್ವಲ್ಪ ಇರುವುದರಿ೦ದ, ಜೊತೆಗೆ ಆಗಾಗ ಇ೦ಟರ್ನೆಟ್ ತೊ೦ದರೆ ಕೊಡುತ್ತಿರುವುದರಿ೦ದ ಬರೆಯಲು ಆಗುತ್ತಿಲ್ಲ ಅಷ್ಟೆ...ಬರೆಯುತ್ತೇನೆ.. :)
ಕಳಕಳಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.
ರಾಘು,
ನನ್ನ ಬ್ಲಾಗಿಗೆ ಸ್ವಾಗತ.
ಒಳ್ಳೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಮ೦ಜುಳಾದೇವಿ(ಕಲರವ)
ನಿಮ್ಮ ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.
ಆಜಾದ್ ಭಾಯಿ,
ಸು೦ದರ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರವರ,
ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.
belagali diivige nirantara
ಪ್ರಭಾಮಣಿಯವರೆ,
ನಿಮ್ಮ ಆತ್ಮೀಯ ಭಾವನೆಗೆ ನನ್ನ ನಮನ.. :)
Post a Comment