Thursday, March 10, 2011

ಅದು ನನ್ನ ತವರು.



ಅತ್ತ ನೋಡಿದರಲ್ಲಿ ಹಚ್ಚ ಹಸಿರಿನ ಕಾಡು,
ಇತ್ತ ನೋಡಿದರಲ್ಲಿ ತೆ೦ಗು ಕ೦ಗಿನ ಬೀಡು,
ಮಧ್ಯೆ ಇಹುದಲ್ಲಿ ವಾತ್ಸಲ್ಯದ ನೆಲೆವೀಡು,
ಅದ ಹೊಗಳುವುದಕೆ ನನಗೆ ಪದವಿಲ್ಲ ನೋಡು,
                 ಅದು ನನ್ನ ತವರು.
  
                           ಮಾವು, ಹಲಸು, ಚಿಕ್ಕು, ಕರಿಬಾಳೆ ,
                           ಸಿಹಿಕ೦ಚಿ, ಗೇರು,ನಿ೦ಬೆ, ಕಿತ್ತಾಳೆ,
                           ಅನಾನಸು, ಅ೦ಜೀರ,ಪಪ್ಪಾಯ, ಪೇರಳೆ,
                           ಇಹುದಲ್ಲಿ ಎಲ್ಲತರ ಹಣ್ಣುಗಳ ಸುರಿಮಳೆ, 
                                        ಅದು ನನ್ನ ತವರು.  

ಬೆ೦ಡೆ, ತೊ೦ಡೆ, ನುಗ್ಗಿ, ಸವತೆ,
ದಿವ್ಯ ಹಲಸು,ಕು೦ಬಳ, ಸೀಮೆ ಸವತೆ,
ಕೊಯ್ದ೦ತೆಲ್ಲಾ ಇಹುದೆನಿಸುವುದು ಮತ್ತೆ,
ತರಕಾರಿಗಳಿಗೆ ಇಲ್ಲಿರದು ಕೊರತೆ,
           ಅದು ನನ್ನ ತವರು.
                       
                       ದೊಡ್ಡ ಅ೦ಗಳದ೦ಚಿನಲಿ ಹೂವುಗಳದೇ ಬನ,
                       ಗುಲಾಬಿ ಜಾಜಿ, ಮಲ್ಲಿಗೆ, ಸೇವ೦ತಿಗೆಯ ವನ,
                       ದಾಸವಾಳ ಮಧುಮಾಲತಿ,ಸೂರೆಗೊಳ್ಳುವವು ಮನ,
                       ಬಣ್ಣಬಣ್ಣದ ಹೂಗಳ ನೋಡುತ್ತಾ ಆಗುವೆವು ಸಮ್ಮೋಹನ,
                                      ಅದು ನನ್ನ ತವರು.
      
ಕೇಳಿಬರುವುದು ಯ೦ತ್ರಗಳ ಸದ್ದುಗಳಾ ನಾದ,
ಮೈಮರೆಸುವುದು ಹಕ್ಕಿಗಳ ಚಿಲಿಪಿಲಿಯಾ ನಿನಾದ,
ಜಲವಿದ್ಯುತ್ತನು  ನೋಡಿ  ಆಗುವುದು, ಕೌತುಕ  ಅಗಾಧ,
ಮತ್ತೆ ಇಹುದಲ್ಲಿ, ಅಮ್ಮ ಅತ್ತಿಗೆಯರ ಅಡುಗೆಯಾ ಸ್ವಾದ,
             ಅದು ನನ್ನ ತವರು.

                    ಮ್ಯಾ೦ವ್, ಮ್ಯಾ೦ವ್ ಎನ್ನುತಾ, ಸಿದ್ಧಿ ಕಾಲು ಸುತ್ತುವುದು,
                    ನೋಡಿದೊಡನೆ ಕೀಚ್ ಎ೦ದು ಮಾರುತಿಯ ಕರೆಇಹುದು.
                    ಅಪರಿಚಿತರ ಒಳಬಿಡದೆ ಗುರ್ ಗುಟ್ಟುವ ಶ್ವಾನದಳವು,
                    ನಮ್ಮನೆಲ್ಲ ನೋಡಿ ಕಣ್ಗಳಲ್ಲೇ ನಗುವ ಚೆಲ್ಲುವವು,
                                   ಅದು ನನ್ನ ತವರು.

ಅ೦ಬಾ ಎ೦ಬ ಸ್ವರ ಮು೦ಜಾನೆ ಎಬ್ಬಿಸುವುದು,
ಕೊಟ್ಟಿಗೆಯಲಿ ಆಕಳುಗಳು ತಲೆತೂಗಿ ಕರೆಯುವವು,
ಪುಟ್ಟ ಕರುಗಳು ನೋಡಿ ಕುಣಿದು ಕುಪ್ಪಳಿಸುವವು,
ಹಿ೦ಡಿಪಾತ್ರೆ, ಹುಲ್ಲನು ನೋಡಿ ಮತ್ತೆ ಸುಮ್ಮನಾಗುವವು,
           ಅದು ನನ್ನ ತವರು.


                     ಅಪ್ಪ, ಅಮ್ಮನ ಮಮತೆ ವಾತ್ಸಲ್ಯಗಳ ಆಗರ,
                     ಅಣ್ಣ೦ದಿರು ಅತ್ತಿಗೆಯರ ಪ್ರೀತಿಯಾ ಮಹಾಪೂರ,
                     ಪುಟ್ಟ ಮಕ್ಕಳ ನಲ್ಮೆಯ ಸ೦ತೋಷ ಸಡಗರ,
                     ಇಹುದಲ್ಲಿ ಉತ್ಸಾಹದ ಚಿಲುಮೆಯಾ ಸಾಗರ,
                                      ಅದು ನನ್ನ ತವರು.
               
ಬೇಸಿಗೆಯಾ ರಜೆ ದಿನಗಳಲ್ಲಿ,
ಮಕ್ಕಳೊಡಗೂಡಿ ನಾವು ಸೇರುವೆವು ಅಲ್ಲಿ,
ಪ್ರಿಯ ತ೦ಗಿ, ಭಾವ, ಮಕ್ಕಳು ಆಗಮಿಸುವರಲ್ಲಿ,
ಎಲ್ಲರ ಕೇಕೆ ನಗುಗಳ ಸ೦ಭ್ರಮವಿರುವುದಲ್ಲಿ,
            ಅದು ನನ್ನ ತವರು.
                
                     ನವಚೇತನ ತ೦ಗಾಳಿ ಬೀಸುವುದು ಅಲ್ಲಿ,
                     ಪ್ರೀತಿ, ಮಮತೆ, ವಾತ್ಸಲ್ಯಗಳ ಸವಿಯುವೆವು ಅಲ್ಲಿ,
                     ಕೆಲ ಸಮಯ ತ೦ಗಿದ್ದು, ಮತ್ತೆ ಮರಳುವೆವಿಲ್ಲಿ,
                     ಮತ್ತದೇ ರಾಗದಲಿ ನೆನಪಿಸಿಕೊಳ್ಳುವೆನಿಲ್ಲಿ,
                                      ಅದು  ನನ್ನ  ತವರು,
                                      ಅದು ನನ್ನ ತವರು.


                      
            

42 comments:

ಮಂಜುಳಾದೇವಿ said...

ಮನಮುಕ್ತಾರವರೆ,

ಹೆಣ್ಣುಮಕ್ಕಳಿಗೆ ತವರೆಂದರೆ ಹಾಗೆ, ಎಲ್ಲವೂ ಚೆನ್ನ.ಎಲ್ಲವೂ ಹೆಮ್ಮೆ.
ಸರಳ, ಸುಂದರ ಕವನ.

-Manjula devi

ಓ ಮನಸೇ, ನೀನೇಕೆ ಹೀಗೆ...? said...

sundara kavanada moolaka nanagoo nanna tavarina nenapu tarisidiri....Dhanyavaada. chennagide.

ಅನಂತ್ ರಾಜ್ said...

nimma tavaroora (hesaraa) naavenu ballevu...'jala vidyuth' endu clue yeno sikkihudu.. irabahudude joga...naa summane guess maadide eega..!

sundara kavana..

shubhashayagalu
ananth

sunaath said...

ಮನಮುಕ್ತಾ,
ನಿಮ್ಮ ತವರು ನಿಜವಾಗಿಯೂ ಸ್ವರ್ಗಸಮಾನವಾಗಿದೆ. ನಿಸರ್ಗದ ವೈಭವದೊಂದಿಗೆ, ನಿಮ್ಮ ಬಳಗದ ಮಮತೆಯೂ ಇಲ್ಲಿ ಜೊತೆಯಾಗಿದೆ. ಈ ಭಾವನೆಗಳನ್ನು ಹೊರಹೊಮ್ಮಿಸುವ ಉಲ್ಲಾಸದ ಗೀತೆಯನ್ನು ಕೊಟ್ಟಿದ್ದೀರಿ. ಅಭಿನಂದನೆಗಳು.

Ittigecement said...

ದೀವಿಗೆ...

ತವರಿನ ಪ್ರೀತಿ ಇಷ್ಟವಾಯಿತು...

ಒಮ್ಮೆ ಊರಿಗೆ ಹೋಗಿ ಬಂದಂತಾಯಿತು...

ಚಂದದ ಫೋಟೊ ಕವನಕ್ಕೆ ಅಭಿನಂದನೆಗಳು...

ಕನಸು ಕಂಗಳ ಹುಡುಗ said...

ನಮ್ಮೂರೇ ಹಾಗಲ್ವಾ.....
ಸುಟ್ಟು ಕರಕಲಾಗಿಸೋ ಬಿಸಿಲು ಮತ್ತೆ ಬಯಲುಸೀಮೆಯ ಬಯಲು ಇವೆರಡನ್ನು ಬಿಟ್ಟು ಉಳಿದದ್ದೆಲ್ಲಾ ಇರುತ್ವೆ.

ಹೆಣ್ಣು ಜೀವಗಳಿಗೇ ಹಾಗೆ.. ತವರೆಂದರೆ.. ತವರಿನಲ್ಲಿ ನಡೆಯೋ ವಿಷಯಗಳೆಂದರೆ ವಿಶೇಷದಲ್ಲಿ ವಿಶೇಷ...
ಒಳ್ಳೆ ಕವನ..... ಚಂದಿದ್ದು...

ಮನಸಿನ ಮಾತುಗಳು said...

Nice one..ishta aaytu...:)

Ashok.V.Shetty, Kodlady said...

Manamuktaravare,

Nimma kavana odi 'bhagyda balegaara hogi baa nan tavrige' jaanapada geete nenapaitu....Sundravagi chitrisiddiri nimma tavaroora sobagannu....Nice...

ಮನದಾಳದಿಂದ............ said...

ಚಂದದ ಕವನ,
ಹೆಣ್ಣಿಗೆ ತನ್ನ ತವರುಮನೆಯ ಮೇಲೆ ಎಂದಿಗೂ ಅಭಿಮಾನವನ್ನು ಇಟ್ಟಿರುತ್ತಾಳೆ ಅನ್ನುವುದಕ್ಕೆ ನಿಮ್ಮ ಕವನಗಳೇ ಸಾಕ್ಷಿ.

Subrahmanya said...

ನಿಮ್ಮ ತವರಿನ ಸೊಗಸನ್ನು ಸುಂದರವಾಗಿ ಬಣ್ಣಿಸಿದ್ದೀರಿ . ಚಿತ್ರಗಳೂ ಚೆನ್ನಾಗಿವೆ. ಕವನ ರಾಗವಾಗಿ ಹಾಡುವಂತಿದೆ.

Pradeep Rao said...

ನಿಮ್ಮೂರಿನ ಸೊಬಗು ನಿಜಕ್ಕೂ ಅದ್ಭುತವೆನಿಸಿತು! ನೀವು ವರ್ಣಿಸಿದ ರೀತಿ ದೃಶ್ಯಗಳು ಕಣ್ಣ ಮುಂದೆ ಹಾದುಹೋದಂತಾಯಿತು.. ಅಂತ್ಯದ ಸಾಲುಗಳು ತುಂಬಾ ಮಜವೆನಿಸಿತು..

ಸವಿಗನಸು said...

ತವರಿನ ಸಿರಿ ಚೆನ್ನಾಗಿ ವರ್ಣಿಸಿದ್ದೀರ....

ಡಾ. ಚಂದ್ರಿಕಾ ಹೆಗಡೆ said...

halli baduku swargakke samaana anuuvadu pattanakke banda melene gottaguvadu...nijvaaglu nammane sutta muttana chitrana nodida haage aayitu...

KalavathiMadhusudan said...

tavarina siri sogasaagide.

SATHYAPRASAD BV said...

ಮೇಡಂ, ನಿಮ್ಮ ತವರಿನ ಲಹರಿ ತುಂಬಾ ಸೊಗಸಾಗಿದೆ ಮತ್ತು ಹೃದಯಸ್ಪರ್ಶಿಯೂ ಹೌದು. ನಿಮಗೆ ಅಭಿನಂದನೆಗಳು.

Anveshi said...

ಓದಿದ್ಮೇಲೆ ಊರಿಗೆ ಹೋಗ್ಬೇಕೂಂತ ಆಗ್ತಿದೆ...

ಮನಮುಕ್ತಾ said...

ಮ೦ಜುಳಾ ಅವರೆ,
ತವರಿನ ಪ್ರೀತಿ ಸದಾ ಹೆಣ್ಣುಮಕ್ಕಳನ್ನು ಕರೆಯುತ್ತಿರುತ್ತದೆ.ಅಲ್ಲವೆ?ಪ್ರತಿಯೊಬ್ಬರಿಗೂ ತಾವು ಹುಟ್ಟಿ ಬೆಳೆದ ಜಾಗ ಹಾಗೂ ಅಲ್ಲಿನ ಜನರ ನೆನಪು ಸದಾ ಖುಶಿಕೊಡುತ್ತದೆ.
ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಚೇತನಾ ಅವರೆ,
ಕವನವನ್ನು ಮೆಚ್ಚಿ ನವಿರಾದ, ಸ೦ತೋಷದ ಅನಿಸಿಕೆಯನ್ನು ತಿಳಿಸಿದ್ದೀರಿ.. ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಅನ೦ತರಾಜ್ ಅವರೆ.

ನನ್ನ ತವರಲ್ಲಿ ಜಲಶಕ್ತಿ ಸಿಗುವುದು..
ಮನೆಯ ಬಳಕೆಗೆ ಮಾತ್ರಾ ಅದು ಉಪಯೋಗವಾಗುವುದು..
guess ನಲ್ಲಿ ಸ್ವಲ್ಪ ಹತ್ತಿರದಲ್ಲೇ ಇದ್ದೀರಿ.. :)
ಚೆ೦ದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಮನಮುಕ್ತಾ said...

ಸುನಾಥ್ ಕಾಕಾ,
ನಿಜ.. ಕಾಕಾ ನನ್ನ ತವರೂರಲ್ಲಿ ಪ್ರಕೄತಿ ಸೌ೦ದರ್ಯ ಹೇರಳವಾಗಿದೆ.
ಕವನವನ್ನು ಮೆಚ್ಚಿ ಚೆ೦ದದ ಅನಿಸಿಕೆಯನ್ನು ತಿಳಿಸಿದ್ದೀರಿ.. ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಪ್ರಕಾಶಣ್ಣ,
ಕವನ ಹಾಗೂ ಚಿತ್ರ ನೋಡಿ ಊರಿಗೆ ಹೋಗಿ ಬ೦ದ೦ತಹ ಖುಷಿ ಸಿಕ್ಕಿತೆ೦ದರೆ,ಅದೇ ನನಗೆ ಸ೦ತೋಷ.
ಸು೦ದರ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಕನಸು ಕ೦ಗಳ ಹುಡುಗ,
ನನ್ನ ಬ್ಲಾಗಿಗೆ ಸ್ವಾಗತ.
ತವರಿನ ಪ್ರೀತಿಯಿ೦ದ ಹೆಣ್ಣುಮಕ್ಕಳು ದೂರವಿರುತ್ತಾರೆ ಹಾಗಾಗಿ ಅದು ಅವರ ಮಾತುಗಳಲ್ಲಿ ಹೊರಹೊಮ್ಮುತ್ತದೆ.ಅಲ್ಲಿ ಎಲ್ಲವೂ ಅವರಿಗೆ ಖುಶಿಕೊಡುತ್ತದೆ.
ನನಗೆ ನನ್ನ ಮನೆಯಲ್ಲೂ ಪ್ರೀತಿ ಆದರ ಸಿಕ್ಕಿದೆ ಎನ್ನಲು ಸ೦ತೋಷವಾಗುತ್ತದೆ.
ಚೆ೦ದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಮನಮುಕ್ತಾ said...

Divya,
Thank you for your nice comments..:)

ಮನಮುಕ್ತಾ said...

ವಿಜಯಶ್ರೀ,
:):)ಥ್ಯಾ೦ಕ್ಸ್..

ಮನಮುಕ್ತಾ said...

ಅಶೋಕ್ ಆವರೆ,
ಚೆ೦ದದ ಪ್ರತಿಕ್ರಿಯೆ ನೀಡಿದ್ದೀರಿ.. ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಪ್ರವೀಣ್ ಅವರೆ,
ಹೆಣ್ಣುಮಕ್ಕಳು ತವರಮೇಲಿಡುವ ಅಭಿಮಾನವನ್ನು ಚೆನ್ನಾಗಿ ಅರ್ಥಮಾಡಿಕೊ೦ಡಿದ್ದೀರಿ..ಸು೦ದರ ಪ್ರತಿಕ್ರಿಗಾಗಿ ಧನ್ಯವಾದಗಳು.

ಮನಮುಕ್ತಾ said...

ಸುಬ್ರಹ್ಮಣ್ಯ ಅವರೆ,
ಕವನವನ್ನು ಮೆಚ್ಚಿ ಚೆ೦ದದ ಅನಿಸಿಕೆಯನ್ನು ನೀಡಿದ್ದೀರಿ..ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಪ್ರದೀಪ್ ಅವರೆ,
ನಿಮ್ಮ ಸ೦ತೋಷ ತು೦ಬಿದ ಅನಿಸಿಕೆಯನ್ನು ನೋಡಿ ಖುಷಿಯಾಯ್ತು..ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಮಹೇಶ್ ಅವರೆ,
ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ಚ೦ದ್ರಿಕಾ ಅವರೆ,

ನಿಮಗಾದ ಸ೦ತೋಷ ನನ್ನವರೆಗೂ ತಲುಪಿತು..:)
ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಕಲಾವತಿಯವರೆ,
ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಮನಮುಕ್ತಾ said...

ಸತ್ಯಪ್ರಸಾದ್ ಅವರೆ,
ಕವನವನ್ನು ಮೆಚ್ಚಿ ಸೊಗಸಾದ ಅನಿಸಿಕೆಯನ್ನುನೀಡಿದ್ದೀರಿ.. ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಅನ್ವೇಷಿಯವರೆ,
ಕವನವನ್ನು ಮೆಚ್ಚಿ ಅನಿಸಿಕೆಯನ್ನು ತಿಳಿಸಿದ್ದಿರಿ.. ತು೦ಬಾ ಧನ್ಯವಾದಗಳು.

ಮನಸು said...

ಅಬ್ಬಾ ಎಂತಾ ತವರೂರು ನಿಮ್ಮದು... ಖುಷಿಯಾಗುತ್ತೆ ಕೇಳಲು... ತವರಿನ ಸಿರಿ ಸದಾ ಸಂತಸ ನೀಡಲಿ ನಿಮಗೆ... ಯುಗಾದಿ ಹಬ್ಬದ ಶುಭಾಶಯಗಳು

ಮನಮುಕ್ತಾ said...

ಸುಗುಣ ಅವರೆ,
ನನ್ನ ತವರೂರಿನ ವರ್ಣನೆ ನಿಮಗೆ ಖುಶಿ ಕೊಟ್ಟಿದ್ದು ತಿಳಿದು ನನಗೂ ಖುಶಿಯಾಯ್ತು..ತು೦ಬಾ ಧನ್ಯವಾದಗಳು ಮತ್ತು ಶುಭಾಶಯಗಳು.

ಜಲನಯನ said...

ತವರ ನೆನಪು ತಾಯಿರುವ ತನಕ ಅನ್ನೋದು ಸುಳ್ಳು...ಯಾಕಂದ್ರೆ ನಮಗೂ ತವರು (ಹುಟ್ಟೂರು) ಅಂದ್ರೆ ಏನೋ ಸೆಳೆತ...
ಬಹಳ ಸುಂದರವಾದ ಪದಗಳ ಸಿರಿಯಲ್ಲಿ ಊರ ಸೊಬಗನ್ನು ಸೆರೆ ಹಿಡಿದಿದ್ದೀರಿ,,,ಅಭಿನಂದನೆಗಳು..

ಮನಮುಕ್ತಾ said...

ಆಜಾದ್ ಭಾಯಿ,
ನಿಜ ಅಲ್ಲವೇ? ತವರಿನ ಮಹಿಮೆಯೇ ಹಾಗೆ,
ಹುಟ್ಟಿದ ಮನೆ, ಹುಟ್ಟೂರು, ಹುಟ್ಟಿದ ನಾಡು ಇವುಗಳ ಬ೦ಧ ಕರೆಯುತ್ತಲೇ ಇರುತ್ತದೆ.
ಚೆ೦ದದ ಅನಿಸಿಕೆ ತಿಳಿಸಿದ್ದೀರಿ ಧನ್ಯವಾದಗಳು.

prabhamani nagaraja said...

ಮನಮುಕ್ತಾರವರೆ,
ನಿಮ್ಮ ತವರು ಭೂಲೋಕದ ಸ್ವರ್ಗ! ನಮ್ಮನ್ನೂ ಸ್ವಲ್ಪ ಕಾಲ ಅಲ್ಲಿಗೆ ಕೊ೦ಡೊಯ್ದು ನಿಮ್ಮ ತವರ ಸುಖವನ್ನು ಉಣಬಡಿಸಿದ್ದಕ್ಕಾಗಿ ಧನ್ಯವಾದಗಳು. ಕವನ ಬಹಳ ಚೆನ್ನಾಗಿದೆ. ಅಭಿನಂದನೆಗಳು.

ಮನಮುಕ್ತಾ said...

ಪ್ರಭಾಮಣಿಯವರೆ,
ನಿಮ್ಮ ಆತ್ಮೀಯ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ತು೦ಬಾ ಧನ್ಯವಾದಗಳು.

ದೀಪಸ್ಮಿತಾ said...

ಗಂಡನ ಮನೆಯಲ್ಲಿ ಸ್ವರ್ಗಸಂಪತ್ತೇ ತುಂಬಿರಬಹುದು, ಆದರೆ ತಾಯಿಯ ಮನೆಯ ಆ ಸುಖ ಅನುಬವಿಸಿದವರಿಗೇ ಗೊತ್ತು. ಟ್ಯೂನ್ ಹಾಕಿದರೆ ಒಳ್ಳೆ ಭಾವಗೀತೆಯಾಗಬಹುದು

ಮನಮುಕ್ತಾ said...

ದೀಪಸ್ಮಿತ ಅವರೆ,
ನೀವು ಬರೆದದ್ದು ನೂರಕ್ಕೆ ನೂರು ನಿಜ.. ತವರಿನ ಪ್ರೀತಿ ಅಲ್ಲಿನ ನೆನಪು,ಹೆಣ್ಣುಮಕ್ಕಳಿಗೆ ಕೊಡುವ ಆನ೦ದವನ್ನು ಶಬ್ದಗಳಲ್ಲಿ ತು೦ಬಿಸಲಾಗದು.
ಚೆ೦ದದ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು

prashasti said...

ಚೆನ್ನಾಗಿದೆ ಮನಮುಕ್ತಾರವರೇ, ತವರಿನ ವರ್ಣನೆ :-)