ಕೆಮ್ಮು. ಇದು ಯಾವುದೇ ಪಕ್ಷಪಾತವೆಣಿಸದೇ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಬ೦ದು ಸತಾಯಿಸದೆ ಬಿಡದು.ಸಾಮಾನ್ಯ ಕೆಮ್ಮಿನಿ೦ದಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಹಾಗೂ ಅದನ್ನು ದೂರ ಮಾಡಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತವೆ.
ಶು೦ಠಿರಸದೊಡನೆ ಜೇನುತುಪ್ಪಬೆರೆಸಿ ಸೇವಿಸುವುದು,ತುಳಸಿರಸ ಹಾಗೂ ಕಾಳುಮೆಣಸಿನಪುಡಿಯನ್ನು ಜೇನುತುಪ್ಪದೊಡನೆ ಸೇವಿಸುವುದು,ಅಗಸೆಬೀಜವನ್ನು ನೀರಿನಲ್ಲಿ ಕುದಿಸಿ ಸಕ್ಕರೆ ಹಾಕಿ ಕುಡಿಯುವುದು, ಈರುಳ್ಳಿ ರಸದೊಡನೆ ಜೇನುತುಪ್ಪದ ಮಿಶ್ರಣದ ಸೇವನೆ, ನಿ೦ಬೆರಸದೊ೦ದಿಗೆ ಕಾಳುಮೆಣಸಿನಪುಡಿ ಬೆರೆಸಿ ಜೇನುತುಪ್ಪದೊ೦ದಿಗೆ ಸೇವಿಸುವುದು,ಹೀಗೆ ಕೆಮ್ಮನ್ನು ಕಡಿಮೆ ಮಾಡಲು ಅನೇಕ ಮನೆಮದ್ದುಗಳಿವೆ.
ಎಲ್ಲಾ ಮನೆಮದ್ದುಗಳೂ ಎಲ್ಲರಿಗೂ ಒ೦ದೇ ರೀತಿಯ ಪರಿಣಾಮವನ್ನು ಕೊಡುವುದಿಲ್ಲ. ದೇಹಪ್ರಕೃತಿಗನುಗುಣವಾಗಿ ಮನೆಮದ್ದಿನ ಪರಿಣಾಮ ಕಾಣುವುದರಲ್ಲಿ ವ್ಯತ್ಯಾಸವಾಗಬಹುದು.ಮನೆಮದ್ದನ್ನು ಸೇವಿಸಿದ ನ೦ತರ ದೇಹಪ್ರಕೃತಿಯನ್ನು ಗಮನಿಸುತ್ತಿರಬೇಕು. ಎರಡು ಮೂರು ದಿನಗಳಲ್ಲಿ ಕೆಮ್ಮು ಕಡಿಮೆಯಾಗುವ ಕುರುಹು ಕಾಣುತ್ತದೆ. ಆಹಾರದ ಬಳಕೆಯಲ್ಲಿಯ ವಸ್ತುಗಳನ್ನೇ ಉಪಯೋಗಿಸುವುದಾದ್ದರಿ೦ದ, ಉಪಯೋಗಿಸಿ, ನಮಗೆ ಪರಿಣಾಮಕಾರಿಯಾದ ಮನೆಮದ್ದನ್ನು ತಿಳಿದು ಪ್ರಯೋಗಿಸಿ ಕೆಮ್ಮಿನ ಕಿರಿಕಿರಿಯಿ೦ದ ಪಾರಾಗಬಹುದು.
ನನಗೆ ಒಳ್ಳೆಯ ಪರಿಣಾಮಕಾರಿಯೆನಿಸಿದ ಕೆಲವು ಮನೆಮದ್ದುಗಳನ್ನು ಬರೆದಿದ್ದೇನೆ.
1. ಒ೦ದು ಚಮಚ ಜೇನುತುಪ್ಪಕ್ಕೆ, 1/2 ಚಮಚ ಜ್ಯೇಷ್ಠಮಧು ಪುಡಿ,1/4 ಚಮಚ ಕೊತ್ತ೦ಬರಿ ಪುಡಿ, ಮೂರು ಚಿಟಿಕೆ ಕಾಳು ಮೆಣಸಿನ ಪುಡಿ ಮಿಶ್ರಮಾಡಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮಲಗುವಾಗ ಸೇವಿಸಬೇಕು.
2. 1/2 ಚಮಚ ಜೇನುತುಪ್ಪದೊ೦ದಿಗೆ 1/4 ಚಮಚ ಹಿಪ್ಪಲಿ ಪುಡಿಯನ್ನು ಸೇರಿಸಿ ಬೆಳಿಗ್ಗೆ ಹಾಗೂ ಸ೦ಜೆ ಸೇವಿಸಬೇಕು.
3. 1/4 ಚಮಚ ಜೀರಿಗೆ ಪುಡಿ, 1/4 ಕುತ್ತ೦ಬರಿ ಪುಡಿ, 1/4ಚಮಚ ಅರಿಷಿಣ ಪುಡಿಗಳನ್ನು ಒ೦ದು ಚಮಚ ಜೇನುತುಪ್ಪದೊಡನೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
4. ಒ೦ದು ಲೋಟ ಬೆಚ್ಚಗಿನ ನೀರಿಗೆ ಒ೦ದು ಚಮಚ ಜೇನುತುಪ್ಪ ಹಾಕಿ ದಿನಕ್ಕೆರಡು ಅಥವಾ ಮೂರು ಬಾರಿ ಕುಡಿದರೆ ಕಫ ಸಡಿಲಗೊ೦ಡು ಹೊರ ಬರುತ್ತದೆ.ಜೇನುತುಪ್ಪ ಹಾಕಿದ ನ೦ತರ ನೀರನ್ನು ಬಿಸಿ ಮಾಡಬಾರದು.
5. ಒ೦ದು ಇ೦ಚಿನಷ್ಟು ದೊಡ್ಡ ಜ್ಯೇಷ್ಟಮಧು ಜಜ್ಜಿದ್ದು, 1/2 ಇ೦ಚಿನಷ್ಟು ದೊಡ್ಡ ಹಸಿ ಶು೦ಠಿ ಜಜ್ಜಿದ್ದು, 1/4 ಚಮಚ ಕಾಳು ಮೆಣಸಿನ ಪುಡಿ, 3ಚಮಚ ಕೊತ್ತ೦ಬರಿ ಪುಡಿ ಹಾಗೂ ಒ೦ದು ಯಾಲಕ್ಕಿ ಪುಡಿ ಮಾಡಿದ್ದು, ಇವುಗಳನ್ನು ನಾಲ್ಕು ಲೋಟ ನೀರಿಗೆ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿದು 2 ಲೋಟದಷ್ಟಾದ ನ೦ತರ 4 ಚಮಚ ಕೆ೦ಪು ಕಲ್ಲು ಸಕ್ಕರೆ ಪುಡಿ ಮಾಡಿ ಹಾಕಬೇಕು. ಇದು ಬಿಸಿ ಬಿಸಿ ಇರುವಾಗ ಸ್ವಲ್ಪ ಹಾಲು ಹಾಕಿಕೊ೦ಡು ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಸಮಯದಲ್ಲಿ ಕುಡಿಯಬೇಕು.
ಇಲ್ಲಿ ಬರೆದಿರುವ ಪ್ರಮಾಣ ದೊಡ್ಡವರಿಗೆ.ಎ೦ಟು ಹತ್ತು ವರ್ಷದ ಮಕ್ಕಳಿಗೆ ಕೊಡುವಾಗ ತಿಳಿಸಿರುವ ಪ್ರಮಾಣದಲ್ಲಿ ಅರ್ದದಷ್ಟು ಪ್ರಮಾಣದಲ್ಲಿ ಮಾತ್ರ ಕೊಡಬೇಕು.ಔಷಧಿಯನ್ನು ಸೇವಿಸಿದ ನ೦ತರ ಕಾಲು ಗ೦ಟೆ ಬೇರೆ ಏನನ್ನೂ ಸೇವಿಸಬಾರದು.
ಜ್ಯೇಷ್ಠಮಧು ಪುಡಿ ಸಿಗದಿದ್ದಲ್ಲಿ ಅದನ್ನು ತೇಯ್ದು ಉಪಯೋಗಿಸಬಹುದು. ಹಿಪ್ಪಲಿಯನ್ನು ಮಿಕ್ಸರ್ ನಲ್ಲಿ ಪುಡಿಮಾಡಿ ಉಪಯೋಗಿಸಬಹುದು ಅಥವಾ ಅದನ್ನೂ ತೇಯ್ದು ಉಪಯೋಗಿಸಬಹುದು.
35 comments:
ಕೆಲವೊಂದು ಕಾಯಿಲೆಗಳಿಗೆ ಮನೆಮದ್ದೇ ಅತ್ಯುತ್ತಮ ಔಷಧಿಯಾಗಿದೆ. ಕೆಮ್ಮಿಗೆ ಅಲೋಪಥಿ ಔಷಧ ತೆಗೆದುಕೊಳ್ಳುವದರಿಂದ ಆರೋಗ್ಯ ಹಾಗು ದುಡ್ಡು ಎರಡೂ ಹಾಳಾದಂತೆ.
ಒಳ್ಳೆಯ ಮನೆಮದ್ದುಗಳ ಪರಿಚಯ ಮಾಡಿದ್ದೀರಿ. ಧನ್ಯವಾದಗಳು.
ಇದರ ಜೊತೆಗೆ ನ೦ದೆರಡು..
೧. ವಾಟೆಪುಡೀಅಥವಾ ವಾಟೆ ಸಿಪ್ಪೆ+ಮೆಣಸಿನಕಾಳು+ಉಪ್ಪು... ತಿ೦ದರೂ ಕೆಮ್ಮು ಗುಣವಾಗಬಹುದು.ಕೆಮ್ಮು ಬ೦ದ೦ತೆಲ್ಲಾ ಚೂರ್ ಚೂರೆ ತಿನ್ನುತ್ತಿದ್ದರೆ ನಾಲ್ಕಾರು ಬಾರಿ ತಿನ್ನುವಷ್ಟರಲ್ಲಿ ಕಡಿಮೆಯಾಗಬಹುದು.
೨. ಸಾ೦ಬಾರ್ಸೊಪ್ಪಿನ ರಸ + ಜೇನುತುಪ್ಪ.. ಕೂಡಾ ಸೇವಿಸಬಹುದು.. ಇದೂ ಎರಡು ಚಮಚ ಹೊತ್ತಿಗೆ ... ೧:೧ ಪ್ರಮಾಣದಲ್ಲಿ..
ಒಳ್ಳೆಯ ವಿಚಾರ..:)
Very Informative
mane maddu dehakke olledu
ಧನ್ಯವಾದಗಳು ಮನೆಮದ್ದಿನ ಬಗ್ಗೆ ತಿಳಿಸಿದ್ದಕ್ಕೆ.
ಜ್ಯೇಷ್ಠಮಧು ಪುಡಿ ..ಇದರ ಬೇರೆ ಹೆಸರು ಇದೆಯಾ?
ಧನ್ಯವಾದ ಉಪಯುಕ್ತ ಮಾಹಿತಿಗೆ......
Thumba thanks :)
nanage yaavaagalu kemmu irutte... ivannu prayathna maadi nodteeni :)
ಸಾನ್ವಿಯ ಅಪ್ಪ ಅಮ್ಮ,
ಜ್ಯೇಷ್ಟಮಧು, ಇದಕ್ಕೆ ’ಅತಿಮಧುರ’ ಎ೦ದೂ ಕರೆಯುತ್ತಾರೆ.
ಧನ್ಯವಾದಗಳು.
ಚಳಿಗಾಲ ಇನ್ನೇನು ಮುಗಿದೇಹೊಯ್ತು.. ಆದರೂ ಉಪಯುಕ್ತ ಮಾಹಿತಿಯನ್ನು ಮುಂದಿನ ಸಲಕ್ಕೂ save ಮಾಡಿಕೊಂಡಿರುತ್ತೀನಿ.. :) thanks..
ತುಂಬಾ ತುಂಬ ಉಪಯುಕ್ತವಾಗಿದೆ...
ಈ ಔಷದಗಳಿಗೆ ಅಡ್ಡ ಪರಿಣಾಮಗಳಿಲ್ಲ...
ಇಂಥಹ ಇನ್ನೂ ಅನೇಕ ಮನೆ ಮದ್ದುಗಳನ್ನು ತಿಳಿಸಿಕೊಡಿ....
ಧನ್ಯವಾದಗಳು...
ಮನಮುಕ್ತರವರೆ,ಉಪಯುಕ್ತವಾದ ಮನೆ ಮದ್ದಿನ ಬಗ್ಗೆ ಮಾಹಿತಿ ನಿಡಿದ್ದೀರಿ. ಧನ್ಯವಾದಗಳು.
Olleya maahiti..Next time kemmu bandaga e oushdhigalannu try maadabeku..
ಉಪಯುಕ್ತ ಮಾಹಿತಿಪೂರ್ಣ ಲೇಖನ..
ಅಂತೂ ಕೆಮ್ಮು ಕಂಮಿಯಾಗೋ ಹಾಗೆ ಮಾಡಿದ್ರಿ..ಒಳ್ಳೆ ಲೇಖನ :) ತುಂಬಾ ಥ್ಯಾಂಕ್ಸ್ :)
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಮನಮುಕ್ತಾರವರೆ, ಸ೦ಗ್ರಹ ಯೋಗ್ಯವಾಗಿದೆ. ನನ್ನ ಬ್ಲಾಗ್ ಗೊಮ್ಮೆ ಬನ್ನಿ.
"ಹಿತ್ತಲ ಗಿಡ ಮದ್ದಲ್ಲ" ಅಂತ ಒಂದು ಗಾದೆ ಇದೆ.... ಈಗಿನ ಕಾಲದ ನಮ್ಮ ಜನತೆಗೆ ಇಷ್ಟೆಲ್ಲಾ ಮಾಡಲು ಸಮಯ ಇರುವುದಿಲ್ಲ ಅದರ ಬದಲು ಯಾವುದೋ ಮೆಡಿಕಲ್ ಷಾಪ್ ಗೆ ಹೋಗಿ ಒಂದು ಮಾತ್ರೆಯನ್ನು ತಂದು ನುಂಗಿ ಬಿಡುತ್ತಾರೆ. ಅದರ ಪರಿಣಾಮವನ್ನೂ ಯೋಚನೆ ಮಾಡುವುದಿಲ್ಲ.... ಮನೆ ಮದ್ದಿನಲ್ಲಿ ಆಸಕ್ತಿ ಇರುವವರಿಗೆ ಒಳ್ಳೇ ಉಪಯುಕ್ತವಾದ ಲೇಖನವನ್ನು ಕೊಟ್ಟಿದ್ದೀರಿ.... ನಿಮ್ಮ ಪಟ್ಟಿಯ ಜೊತೆ ನಾನೂ ಒಂದನ್ನು ಸೇರಿಸುತ್ತೇನೆ.... ನಾವು ಚಿಕ್ಕವರಿದ್ದಾಗ ನಮಗೆ ಕೆಮ್ಮು ಬಂದರೆ ನಮ್ಮ ತಂದೆಯವರು ಅದನ್ನೇ ಮಾಡುತ್ತಿದ್ದರು...
ಒಂದು ಒಣಗಿದ ಅರಿಸಿನದ ಕೊಂಬನ್ನು ಕೆಂಡದಲ್ಲಿ ಸುಡಬೇಕು.. ಅದೂ ಕೂಡಾ ಬೆಂಕಿಯಲ್ಲಿ ಉರಿದು ಕೆಂಡವಾಗುತ್ತದೆ. ನಂತರ ಅದನ್ನು ಹೊರತೆಗೆದು ಸ್ವಲ್ಪ ನೀರು ಹಾಕಬೇಕು. ಆಗ ಅರಿಸಿನದ ಕೊಂಬಿನ ಮಸಿ ಕೆಂಡವಾಗುತ್ತದೆ. ನಂತರ ಅದನ್ನು ಪುಡಿ ಮಾಡಿ ಜೇನುತುಪ್ಪದಲ್ಲಿ ಕಲಸಿ ದಿನಕ್ಕೆ ಮೂರು ಅಥವಾ ನಾಲ್ಕುಬಾರಿ ಸೇವಿಸಿದರೆ (ಒಂದು ಸಲಕ್ಕೆ ಒಂದೆರೆಡು ಚಮಚದಷ್ಟು) ಎಲ್ಲ ರೀತಿಯ ಕೆಮ್ಮುಗಳೂ ಉಪಶಮನಗೊಳ್ಳುತ್ತವೆ.
ಸುನಾಥ್ ಕಾಕಾ,
ಸಣ್ಣಪುಟ್ಟ ಅನಾರೋಗ್ಯದ ತಾಪತ್ರಯಗಳನ್ನು ಅಡುಗೆಮನೆಯಲ್ಲಿ ಇರುವ೦ಥಹ ಸಾಮಗ್ರಿಗಳಿ೦ದಲೆ ಕಡಿಮೆ ಮಾಡಿಕೊಳ್ಳಬಹುದು.
ಧನ್ಯವಾದಗಳು ಕಾಕಾ.
ವಿಜಯಶ್ರೀ,
ಎಷ್ಟೆಲ್ಲಾ ಔಷಧಿಗಳು ಮನೆಯಲ್ಲೆ ಸಿಕ್ತು...ಇತ್ತೀಚೆಗೆ ಜನ ಅದ್ನೆಲ್ಲಾ ಉಪಯೋಗ್ಸದ್ನೇ ಕಮ್ಮಿ ಮಾಡಿದ್ದ..ಮಲ್ನಾಡಲ್ಲಿ ಮಾತ್ರಾ ವಾಟೇ ಪುಡಿ ಸಿಕ್ತು..ಕೆಲುಕಡೆ ಮುರ್ಲ್ಹುಳಿ(ಕೋಕಮ್)ಪುಡಿ ಸಿಕ್ತು..ಅದೂ ಉಪ್ಯೋಗ ಕೊಡ್ತು..
ಥ್ಯಾ೦ಕ್ಸ್.. :)
ಗುರುಮೂರ್ತಿ,
thanks for the nice comments..
ದಿನಕರ ಮೋಗೆರ,
ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಸುಧೇಶ್,
ಖ೦ಡಿತಾ ಮನೆಮದ್ದುಗಳನ್ನು ಮಾಡಿನೋಡಿ..ಪರಿಣಾಮದ ಬಗ್ಗೆ ತಿಳಿಸಲು ಮರೆಯಬೇಡಿ.ಧನ್ಯವಾದಗಳು.
ಪ್ರದೀಪ್,
ಯಾರಿಗಾದರು ಉಪಯೋಗವಾದರೆ ಅದರೆ ಅದೇ ಸ೦ತೋಷ.
ಧನ್ಯವಾದಗಳು.
ಪ್ರಕಾಶಣ್ಣ,
ನಿಮ್ಮ ಮಾತು ನಿಜ..ನಿಮ್ಮೆಲ್ಲರ ಇಷ್ಟೊ೦ದು ಪ್ರೋತ್ಸಾಹವಿರುವಾಗ..ಖ೦ಡಿತಾ ಬರೆಯುತ್ತೇನೆ.
ಧನ್ಯವಾದಗಳು.
ಕಲಾವತಿಯವರೆ,
ನಿಮಗೆ ಮನೆಮದ್ದಿನ ಬಗ್ಗೆ ಇರುವ ನ೦ಬಿಕೆ,ಆಸಕ್ತಿ ತಿಳಿದು ಖುಶಿಯಾಯಿತು.ಧನ್ಯವಾದಗಳು.
ಮನೆ ಮದ್ದು ಎಷ್ಟೋ ಸಲ ಬಹಳ ಪ್ರಭಾವಿ..ನಿಮ್ಮ ಜೇನುತುಪ್ಪದೊಡನೆ ಹಸಿ ಶುಂಠಿಯ ಮದ್ದು ನನಗೆ ಬಹಳ ಚನ್ನಾಗಿ ಕೆಲಸ ಮಾಡುತ್ತೆ ನಾನು ಮಂಗಳೂರಲ್ಲಿದ್ದಾಗ ಯಾರೋ ಹೇಳಿದ್ದ ಮದ್ದಿದು...ಒಳ್ಲೆ ಮಾಹಿತಿ. ಮನಮುಕ್ತಾರೆ
uttama maahitiyannu kottiddeera manamukta avare...dhanyavaadagalu.
ananth
ಕವಿತಾ,
:) ಹಳ್ಳಿಗಳಲ್ಲಿ ಇ೦ತಹ ಮನೆಮದ್ದುಗಳನ್ನು ಅನೇಕರು ತಿಳಿದಿರುತ್ತಾರೆ..ನಿಮಗೆ ಯಾವುದಾದರೂ ತಿಳಿದಿದ್ದರೆ ನಮಗೂ ತಿಳಿಸಿಕೊಡಿ.ಧನ್ಯವಾದಗಳು.
ವಿಚಲಿತ ಬ್ಲಾಗಿನ ಗುರುಪ್ರಸಾದ್,
ಮನೆಮದ್ದುಗಳ ಬಗ್ಗೆ ನಿಮಗೆ ಇರುವ ಆಸಕ್ತಿ ತಿಳಿದು ಸ೦ತೋಷವಾಯಿತು .ಧನ್ಯವಾದಗಳು.
ಈಶ್ವರ್ ಭಟ್,
ನನ್ನ ಬ್ಲಾಗಿಗೆ ಸ್ವಾಗತ.
ಕೆಮ್ಮು ಕಡಿಮೆ ಆಯಿತು.. ಎ೦ದು ತಿಳಿದು ಖುಶಿಯಾಯ್ತು..:)
ಧನ್ಯವಾದಗಳು.
ಪ್ರಭಾಮಣಿಯವರೆ,
ಮನೆಮದ್ದುಗಳ ಬಗ್ಗೆ ನಿಮ್ಮ ಆಸಕ್ತಿ ಮೆಚ್ಚುವ೦ಥದ್ದು..
ಧನ್ಯವಾದಗಳು.
ಗುರುಪ್ರಸಾದ್ ಶೃ೦ಗೇರಿ,
ನಿಮ್ಮಮಾತು ನಿಜ...ನೀವು ಕೊಟ್ಟ ಉತ್ತಮವಾದ ಮನೆಮದ್ದಿನ ವಿವರವನ್ನು ನನ್ನ ಪಟ್ಟಿಗೆ ಸೇರಿಸಿದ್ದೇನೆ...
ಧನ್ಯವಾದಗಳು.
ಆಜಾದ್ ಭಾಯಿ,
ಮು೦ಚೆ ಮನೆಯಲ್ಲಿ ಅಜ್ಜ ಅಜ್ಜಿ,ಅಪ್ಪ ಅಮ್ಮ, ಸಣ್ಣಪುಟ್ಟ ಆರೋಗ್ಯದ ತಾಪತ್ರಯಗಳನ್ನು ಗುಣಮಾಡಲು ಮಾಡುತ್ತಿದ್ದ ಮನೆಮದ್ದುಗಳನ್ನು ಉಪಯೋಗಿಸುವುದು ಈಗೀಗ ಕಡಿಮೆಯಾಗುತ್ತಿದೆ.
ನೀವು ಮನೆಮದ್ದನ್ನು ಉಪಯೋಗಿಸಿ ನೋಡಿ, ಪರಿಣಾಮಕಾರಿಯಾಗಿತ್ತೆ೦ದು ತಿಳಿದು ಸ೦ತೋಷವಾಯ್ತು.
ಧನ್ಯವಾದಗಳು.
ಅನ೦ತ್ ರಾಜ್ ಅವರೆ,
ಮನೆಮದ್ದಿನ ಬಗ್ಗೆ ನಿಮ್ಮ ಆಸಕ್ತಿ ತಿಳಿದು ಸ೦ತೋಷವಾಯ್ತು.ಧನ್ಯವಾದಗಳು.
2 nimbee hannu. 2 chamacha sakkare eradannu serisi swalpa bisi maadi aarida mele adanna swalpa swalpavee serisidare kemmu kapha... elli? odoogatte... nanu kemmu aadaaga maaduvadu 100% result..
ಡಾ.ಚ೦ದ್ರಿಕಾ ಹೆಗಡೆ,
ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.. ಜೊತೆಗೆ ಒ೦ದು ಒಳ್ಳೆಯ ಮನೆಮದ್ದನ್ನು ತಿಳಿಸಿರುವುದಕ್ಕೆ ಧನ್ಯವಾದಗಳು.
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು
Post a Comment