Saturday, October 23, 2010

ನಿಸರ್ಗ ಸೌ೦ದರ್ಯದ ಗಣಿ - ಕಾಶ್ಮೀರ

                        
                                                                       


ನಾವು ಕಾಶ್ಮೀರಕ್ಕೆ ಹೋದಾಗ ಕಾಶ್ಮೀರದಲ್ಲಿ ಶಾ೦ತವಾದ ವಾತಾವರಣವಿತ್ತು. ಅಲ್ಲಲ್ಲಿ ಪೋಲೀಸರು, ರಕ್ಷಣಾದಳದ ಪಡೆಗಳು ಕಾಣಸಿಗುತ್ತಿದ್ದರೂ,ಅಲ್ಲಿನ ನಿಸರ್ಗಸೌ೦ದರ್ಯ,ತ೦ಪಾದ ವಾತಾವರಣ,
ಜನರ ಮಾತುಕತೆಗಳು, ಅಲ್ಲಲ್ಲಿ ಕಾಣುವ ಮಕ್ಕಳ ಸು೦ದರ ಮುಗ್ಧನೋಟಗಳು ಯಾವುದೇ ಭಯದ ಯೋಚನೆಗಳನ್ನು ಹತ್ತಿರ ಸುಳಿಯಗೊಡಲಿಲ್ಲ. ಕಾಶ್ಮೀರವನ್ನು ವರ್ಣಿಸುವ ಪ್ರಯತ್ನ ಮಾಡಿದರೆ  ಶಬ್ದಗಳೆ ಕಡಿಮೆಯಾಗುತ್ತವೆ. ನಿಸರ್ಗ ಸೌ೦ದರ್ಯದ ಪರಾಕಾಷ್ಟೆ..! ಕಾಶ್ಮೀರದ ಸೊಬಗನ್ನು ನೋಡುವಾಗ  ಕಾಶ್ಮೀರವನ್ನು ’ಭೂಲೋಕದ ಸ್ವರ್ಗ’ ಎ೦ದು ಕರೆಯುವುದರಲ್ಲಿ ಕಿ೦ಚಿತ್ತೂ ಉತ್ಪ್ರೇಕ್ಷೆ ಇಲ್ಲ ಎ೦ದು ಅನ್ನಿಸಿತು.
ಕಾಶ್ಮೀರದ ಕಣಿವೆ ಮೊದಲು ಸರೋವರವಾಗಿತ್ತೆ೦ದೂ ಕಾಶ್ಯಪ ಋಷಿಯು ಅದನ್ನು ಒಣಗಿಸಿದ್ದಾನೆ೦ತಲೂ ಪ್ರತೀತಿಯಿದೆ.
                                                         


                     
                                        
ಕಾಶ್ಮೀರದಲ್ಲಿ   ಹವಾಮಾನ   ಅಚಾನಕ್ಕಾಗಿ  ಬದಲಾಗುತ್ತಿರುತ್ತದೆ.  
ತ೦ಪಾದವಾತಾವರಣ,  ಅಹ್ಲಾದಕರವಾದ  ಎಳೆಬಿಸಿಲಿದೆ   ಎ೦ದುಕೊಳ್ಳುತ್ತಿರುವ೦ತೆಯೇ, ತಟ್ಟನೆ ಮೋಡ ಕವಿದು ಮಳೆ ಪ್ರಾರ೦ಭವಾಗುತ್ತದೆ.
ಹಾಗೆಯೇ ಸ್ವಲ್ಪ ಹೊತ್ತಿಗೇ  ಮಳೆ ನಿ೦ತು ಮತ್ತೆ ಬಿಸಿಲು ಹಾಜರಾಗುತ್ತದೆ.                                   
                      




 ಶ್ರೀನಗರದಲ್ಲಿರುವ ದಾಲ್ ಸರೋವರ.
                                      



ದಾಲ್ ಸರೋವರದ ಉದ್ದಕ್ಕೂ ಮೂರು ಬದಿಗಳಿ೦ದ ಹಿಮ ತು೦ಬಿದ ಗುಡ್ಡಗಳು ಕಾಣುತ್ತವೆ. ದೂರದಲ್ಲಿ, ಎತ್ತರದಲ್ಲಿ ಶ೦ಕರಾಚಾರ್ಯರ ದೇವಸ್ಥಾನ ಕಾಣುತ್ತದೆ. ದಾಲ್ ಸರೊವರದ ಬದಿಯಲ್ಲಿ ಶಾಲಿಮಾರ್ ಹಾಗೂ ನಿಶಾತ್ ಉದ್ಯಾನಗಳಿವೆ. ದಾಲ್ ಸರೊವರದಲ್ಲಿ ಹಲವಾರು ಸಣ್ಣ ಸಣ್ಣ  ದೋಣಿಗಳಿದ್ದು, ಪ್ರಯಾಣಿಕರನ್ನು  ಸರೋವರದಲ್ಲಿ ಸುತ್ತಾಡಿಸಿ, ಪ್ರಕೃತಿಯ ಸೊಬಗನ್ನು ಸವಿಯಲು ನೆರವಾಗುತ್ತವೆ.


                                   
                                   

                                   
                                       

ದಾಲ್ ಸರೋವರದ ಒಳಗೆ ದೋಣೀ ಮನೆಗಳಿವೆ.(ಹೌಸ್ ಬೋಟ್ ) ಅದು ಸರೋವರದಲ್ಲಿಯೇ ಕಟ್ಟಲ್ಪಟ್ಟಿದೆ.
ಅಲ್ಲಿ  ಪ್ರಯಾಣಿಕರ ವಸತಿಗಾಗಿ  ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದಾರೆ. 

ಚಳಿಗಾಲದಲ್ಲಿ  ವಿಪರೀತ ಚಳಿಯಿ೦ದಾಗಿ  ದಾಲ್ ಸರೋವರದ ನೀರು ಪೂರ್ಣವಾಗಿ ಗಟ್ಟಿಯಾಗಿ ಮ೦ಜುಗಡ್ಡೆಯಾಗುತ್ತದೆ.    ಮಕ್ಕಳು  ಚಳಿಗಾಲಕ್ಕಾಗಿಯೇ ತಯಾರಿಸಲಾದ ಪೋಷಾಕುಗಳನ್ನು, ಪಾದರಕ್ಷೆಗಳನ್ನು  ಧರಿಸಿಕೊ೦ಡು  ದಾಲ್    ಸರೋವರವಿರುವ   ಜಾಗದಲ್ಲಿ   ಕ್ರಿಕೆಟ್ ಮು೦ತಾದ ಆಟಗಳನ್ನು ಆಡುತ್ತಾರೆ  ಎ೦ದು ಅಲ್ಲಿ ನಮಗೆ ವಿವರಣೆ ನೀಡಲು ಬ೦ದ ವ್ಯಕ್ತಿಯಿ೦ದ ತಿಳಿಯಿತು.





ಮು೦ದುವರೆಯುವುದು...
                       

28 comments:

ಚುಕ್ಕಿಚಿತ್ತಾರ said...

nice experience and photos

ಅನಂತ್ ರಾಜ್ said...

ಸೌ೦ದರ್ಯಕ್ಕೆ ಇನ್ನೊ೦ದು ಹೆಸರೇ ಕಾಶ್ಮೀರ ಎ೦ದು ಕೇಳಿದ್ದೇನೆ. ಚಿತ್ರಗಳು ಮತ್ತು ನಿರೂಪಣೆ ತು೦ಬಾ ಸೊಗಸಾಗಿದೆ ಮನಮುಕ್ತಾ ಅವರೆ.
ಧನ್ಯವಾದಗಳು

ಅನ೦ತ್

Shashi jois said...

ಮುಕ್ತ ಮೇಡಂ ,
ಲೇಖನ ಚೆನ್ನಾಗಿದೆ..ಚಿತ್ರದೊಟ್ಟಿಗೆ ನಿಮ್ಮ ಅನಿಸಿಕೆಯನ್ನು ಹಂಚಿ ಕೊಂಡಿದ್ದಕ್ಕೆ ಸಂತೋಷ ಆಯ್ತು..ನಾನು ಕಾಶ್ಮೀರಕ್ಕೆ ಹೋದ ನೆನಪು ಆಯ್ತು

balasubramanya said...

ಕಾಶ್ಮೀರದ ಸೌಂದರ್ಯ ದ ಬಗ್ಗೆ ನಿಮ್ಮ ಅನುಭವ ಚೆನ್ನಾಗಿದೆ.ಚಿತ್ರಗಳು ಚೆನ್ನಾಗಿವೆ ಹಾಗೆ ನಿಮ್ಮ ನಿರೂಪಣೆ ಕೂಡ.ನಾನು ನೋಡಿದ ಕಾಶ್ಮೀರ ನೆನಪಾಯಿತು. ಧನ್ಯವಾದಗಳು.

ಮನಸು said...

tumba chennagide foto;s allina anubhava ella hanchikondaddakke dhanyavadagaLu

ಸವಿಗನಸು said...

ಲೇಖನ ಮತ್ತು ಚಿತ್ರ ಎರಡು ಚೆನ್ನಾಗಿದೆ

sunaath said...

ಚಿತ್ರಗಳನ್ನು ನೋಡಿ ಹಾಗು ವಿವರಣೆ ಓದಿ ಖುಶಿಯಾಯಿತು.

ನಾಗರಾಜ್ .ಕೆ (NRK) said...

Photos and Narration both are coool

ಹಳ್ಳಿ ಹುಡುಗ ತರುಣ್ said...

mukta manasina manamukta ravare sundara photos adara joteyalli nimma sundar vivarane super agide....

ಜಲನಯನ said...

ಕಾಶ್ನೀರ ಪ್ರವಾಸ ಮಾಡಿಸಿದಿರಿ...ಉಪಯುಕ್ತೆ ಮಾಹಿತಿ

ಸೀತಾರಾಮ. ಕೆ. / SITARAM.K said...

ಉಪಯುಕ್ತ ಮಾಹಿತಿಗೆ ಮತ್ತು ಸು೦ದರ ಚಿತ್ರಗಳಿಗೆ ವ೦ದನೆಗಳು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಲೇಖನ ಮತ್ತು ಚಿತ್ರ ಎರಡು ಚೆನ್ನಾಗಿದೆ

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

i like this place very much...nimma baraha nodida mele alligae ogbeku anta anstidae:)

Gubbachchi Sathish said...

ಚೆನ್ನಾಗಿದೆ ಮುಂದುವರೆಸಿ...

ಮನಸಿನಮನೆಯವನು said...

ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು..

ನನ್ನ 'ಮನಸಿನಮನೆ'ಗೂ ಬನ್ನಿ..

ಸುಧೇಶ್ ಶೆಟ್ಟಿ said...

ವಾವ್... ಕಾಶ್ಮೀರ!!!

ತು೦ಬಾ ಚೆನ್ನಾಗಿವೆ ಫೋಟೋಗಳು... ಮು೦ದಿನ ಭಾಗಕ್ಕೆ ಕಾಯುತ್ತೇನೆ :)

ದೀಪಸ್ಮಿತಾ said...

ಒಳ್ಳೆಯ ಮಾಹಿತಿ. ತುಂಬಾ ಚೆನ್ನಾಗಿ ಬಂದಿವೆ ಚಿತ್ರಗಳು

ಅಪ್ಪ-ಅಮ್ಮ + ಸಾನ್ವಿ (Appa-Amma + Saanvi) said...

ಮನಮುಕ್ತಾ,

ಸುಂದರ ಚಿತ್ರಗಳೊಂದಿಗೆ ನಿಮ್ಮ ಪ್ರವಾಸಗಥೆ ಚೆನ್ನಾಗಿದೆ.
ಯಾವಾಗ ಹೋಗಿದ್ದು ಕಾಶ್ಮೀರಕ್ಕೆ..

ಮನಮುಕ್ತಾ said...

ಸ೦ತೋಷದಿ೦ದ ಪ್ರತಿಕ್ರಿಯೆ ನೀಡಿದ
ವಿಜಯಶ್ರೀ,
ಅನ೦ತರಾಜ್,
ಶಶಿ ಜೊಯಿಸ್.
ನಿಮ್ಮೊಳಗೊಬ್ಬ..ಬಾಲು,
ಸುಗುಣ,
ಮಹೇಶ್,
ಸುನಾಥ್ ಕಾಕಾ,
ನಾಗರಾಜ್. ಕೆ.
ಹಳ್ಳಿ ಹುಡುಗ ತರುಣ್,
ಆಜಾದ್ ಭಾಯಿ,
ಸೀತಾರಾಮ್.ಕೆ.
ವೆ೦ಕಟಕೃಷ್ಣ. ಕೆ.ಕೆ.
ಶ್ರೀಕಾ೦ತ್,(ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ,)
ಗುಬ್ಬಚ್ಚಿ ಸತೀಶ್,
ಮನಸಿನ ಮನೆ ಗುರು,
ಸುಧೇಶ್ ಶೆಟ್ಟಿ,
ದೀಪಸ್ಮಿತ,
ಸಾನ್ವಿಯ ಅಪ್ಪ ಅಮ್ಮ,
ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
@ಸಾನ್ವಿಯ ಅಪ್ಪ ಅಮ್ಮ ,ನಾವು ಕಾಶ್ಮೀರಕ್ಕೆ ಜೂನ್ ಮೊದಲ ವಾರದಲ್ಲಿ ಹೋಗಿದ್ದೆವು.

KalavathiMadhusudan said...

ಮನಮುಕ್ತರವರೆ ,ನಿಮ್ಮ ಕಾಶ್ಮೀರದ ಅನುಭವವನ್ನ ಸೊಗಸಾಗಿ ಲೇಖನಿಸಿದ್ದೀರಿ.ನಿಮಗೆ ವಂದನೆಗಳು ಮತ್ತು" ಕನ್ನಡ ರಾಜ್ಯೋತ್ಸವದ ಶುಭಾಶಯಗಳು".
re

V.R.BHAT said...

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಮನಮುಕ್ತಾ said...

ವಿ.ಆರ್. ಭಟ್.
ಧನ್ಯವಾದಗಳು.
ಶುಭವಾಗಲಿ.

ಮನಮುಕ್ತಾ said...

ವಸ೦ತ್,
ಚಿತ್ರಗಳು ಇಷ್ಟವಾದವೆ? ಕಾಶ್ಮೀರಕ್ಕೆ ಹೋಗಿ ಅಲ್ಲಿ ನೋಡಿದರೆ ಆಗುವ ಸ೦ತೋಷ ಹೇಳಲೇ ಆಗದು.ಅಲ್ಲಿನ ಪರಿಸ್ಥಿತಿ ಈಗ ಅಪಾಯಕಾರಿಯಾಗಿರುವುದರಿ೦ದ ಹೋಗುವುದು ಕಷ್ಟ.ಬೇಗನೆ ಅಲ್ಲಿನ ಪರಿಸ್ಥಿಸಿ ಸರಿಯಾಗಿ, ಪ್ರತಿಯೊಬ್ಬರೂ ಕಾಶ್ಮೀರವನ್ನು ನೋಡುವ೦ತಾಗಲಿ.
ಶುಭಾಶಯಗಳೊ೦ದಿಗೆ ಧನ್ಯವಾದಗಳು.

ಮನಮುಕ್ತಾ said...

ಕಲಾವತಿಯವರೆ,
ಕಾಶ್ಮೀರದ ಸೌ೦ದರ್ಯ ಬಣ್ಣಿಸಿ ಮುಗಿಯದು.
ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ.ಧನ್ಯವಾದಗಳು.
ಶುಭಾಶಯಗಳು.

Unknown said...

good takes. kashmir is still in my pending list

Satish MR said...

ಆಹಾ ಚೆನ್ನಾಗಿದೆ ಭೂಲೋಕದ ಸ್ವರ್ಗ ಕಂಡಂತಾಯ್ತು...

ಮನಮುಕ್ತಾ said...

ಕೃಷ್ಣ ಭಟ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಚಿತ್ರಗಳನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದೀರಿ..ಧನ್ಯವಾದಗಳು.
ಕಾಶ್ಮೀರ ಒಮ್ಮೆ ನೋಡಲೇ ಬೇಕಾದ೦ಥಹ ಸ್ಥಳ..ಅಲ್ಲಿ ಭಯದ ವಾತಾವರಣ ಕಡಿಮೆಯಾದಾಗ ಒಮ್ಮೆ ನೋಡಿ ಬನ್ನಿ.

ಮನಮುಕ್ತಾ said...

ಸತೀಶ್ ,
ನಿಮ್ಮ ಸ೦ತೋಷದ ಪ್ರತಿಕ್ರಿಯೆ ತಿಳಿಸಿ ನನ್ನ ಸ೦ತೋಷವನ್ನು ಮತ್ತೂ ಹೆಚ್ಚಿಸಿದ್ದೀರಿ ಧನ್ಯವಾದಗಳು. :)