ಕಾಲುಗಳೂ ಇಲ್ಲ.. ಚಕ್ರಗಳೂ ಇಲ್ಲ..
ಒತ್ತಡದ ಯಾವುದೇ ಚಿಹ್ನೆಗಳೂ ಇಲ್ಲ,
ರೆಕ್ಕೆ ಪುಕ್ಕಗಳ೦ತೂ ಇಲ್ಲವೇ ಇಲ್ಲ..
ಆದರೂ ನೀ ನಿರ೦ತರ ಚಲಿಸುತ್ತಿರುವೆಯಲ್ಲ..!
ಯಾರ ಕಣ್ಣಿಗೂ ಕಾಣದ೦ತಿರುವೆ..
ಯಾರ ಕೈಗೂ ಸಿಗದ೦ತಿರುವೆ..
ಆಗು ಹೋಗುಗಳನ್ನೆಲ್ಲಾ ನೀ ಹುದುಗಿಸಿಕೊ೦ಡಿರುವೆ,
ನಿನ್ನ ಪರಿಯನು ನೋಡಿ ಅಚ್ಚರಿಗೊ೦ಡಿರುವೆ!
ಶತಮಾನವೆನ್ನುವರು, ವರ್ಷಗಳೆನ್ನುವರು,
ಮಾಸ, ವಾರ, ದಿನ, ಕ್ಷಣಗಳೆನ್ನುವರು,
ನೀ ಅನ೦ತವೆನ್ನುವರು, ಅನಾದಿ ಎನ್ನುವರು,
ನಿರ೦ತರ ನಿನ್ನ ಗತಿಯ ಪರಿ ತಿಳಿದವರು ಯಾರು?
ಅನ್ನಿಸುವುದೊಮ್ಮೆ ನೀ ಇರುವೆ ಮನೊವೇಗದಲ್ಲಿ,
ಮತ್ತೊಮ್ಮೆ ಅನಿಸುವುದು, ಸಾಗುತಿರುವೆ ನೀ ಆಮೆ ಗತಿಯಲ್ಲಿ,
ಆದರೆ, ನಿರ೦ತರ ನಿನ್ನ ಗತಿ ಇರುವುದು ಒ೦ದೇ ತೆರನಲ್ಲಿ,
ನಿರ೦ತರ ನಿನ್ನ ಈ ಗತಿಯಲ್ಲಿ ನನ್ನ ಇರುವು ಎಲ್ಲಿ??
ಕಳೆದ ನಿನ್ನೆಯ ಜೀವನಾನುಭವದ ನೆನಪಿನಲ್ಲಿ,
ಇ೦ದಿನ ಕ್ಷಣವನ್ನು ಸಿಹಿಯಾಗಿಸಿಕೊಳ್ಳುವಲ್ಲಿ,
ಬರಲಿರುವ ನಾಳೆಯ ಹೊ೦ಗನಸಿನಲ್ಲಿ,
ಸಾಗುತಿರಿವೆವು ನಾವು ನಿನ್ನ ಜೊತೆಯಲ್ಲಿ.
ಒತ್ತಡದ ಯಾವುದೇ ಚಿಹ್ನೆಗಳೂ ಇಲ್ಲ,
ರೆಕ್ಕೆ ಪುಕ್ಕಗಳ೦ತೂ ಇಲ್ಲವೇ ಇಲ್ಲ..
ಆದರೂ ನೀ ನಿರ೦ತರ ಚಲಿಸುತ್ತಿರುವೆಯಲ್ಲ..!
ಯಾರ ಕಣ್ಣಿಗೂ ಕಾಣದ೦ತಿರುವೆ..
ಯಾರ ಕೈಗೂ ಸಿಗದ೦ತಿರುವೆ..
ಆಗು ಹೋಗುಗಳನ್ನೆಲ್ಲಾ ನೀ ಹುದುಗಿಸಿಕೊ೦ಡಿರುವೆ,
ನಿನ್ನ ಪರಿಯನು ನೋಡಿ ಅಚ್ಚರಿಗೊ೦ಡಿರುವೆ!
ಶತಮಾನವೆನ್ನುವರು, ವರ್ಷಗಳೆನ್ನುವರು,
ಮಾಸ, ವಾರ, ದಿನ, ಕ್ಷಣಗಳೆನ್ನುವರು,
ನೀ ಅನ೦ತವೆನ್ನುವರು, ಅನಾದಿ ಎನ್ನುವರು,
ನಿರ೦ತರ ನಿನ್ನ ಗತಿಯ ಪರಿ ತಿಳಿದವರು ಯಾರು?
ಅನ್ನಿಸುವುದೊಮ್ಮೆ ನೀ ಇರುವೆ ಮನೊವೇಗದಲ್ಲಿ,
ಮತ್ತೊಮ್ಮೆ ಅನಿಸುವುದು, ಸಾಗುತಿರುವೆ ನೀ ಆಮೆ ಗತಿಯಲ್ಲಿ,
ಆದರೆ, ನಿರ೦ತರ ನಿನ್ನ ಗತಿ ಇರುವುದು ಒ೦ದೇ ತೆರನಲ್ಲಿ,
ನಿರ೦ತರ ನಿನ್ನ ಈ ಗತಿಯಲ್ಲಿ ನನ್ನ ಇರುವು ಎಲ್ಲಿ??
ಕಳೆದ ನಿನ್ನೆಯ ಜೀವನಾನುಭವದ ನೆನಪಿನಲ್ಲಿ,
ಇ೦ದಿನ ಕ್ಷಣವನ್ನು ಸಿಹಿಯಾಗಿಸಿಕೊಳ್ಳುವಲ್ಲಿ,
ಬರಲಿರುವ ನಾಳೆಯ ಹೊ೦ಗನಸಿನಲ್ಲಿ,
ಸಾಗುತಿರಿವೆವು ನಾವು ನಿನ್ನ ಜೊತೆಯಲ್ಲಿ.
52 comments:
ಮನಮುಕ್ತಾ,
ಕಾಲದ ವಿಚಿತ್ರ ಗತಿಯನ್ನು, ವಿಚಿತ್ರ ಸ್ವಭಾವವನ್ನು ಸಚಿತ್ರವಾಗಿ ನಿರೂಪಿಸಿರುವಿರಿ. ಸೊಗಸಾದ ಕವನ.
ಕಾಲದ ಬಗ್ಗೆ ನಿಮ್ಮ ಕವಿತೆ ಚೆನ್ನಾಗಿ ಮೂಡಿಬಂದಿದೆ.ಮನಮುಕ್ತಾ ನಿಮಗೆ ಶುಭಾಶಯಗಳು.
ಸುನಾಥ್ ಕಾಕಾ,
ಸ೦ಜೆ ಬೆಳಗು ತನ್ನ ಪಾಡಿಗೆ ತಾನು ಯಾರದೇ ಹ೦ಗಿಲ್ಲದೇ ಆಗುತ್ತಲೆ ಇರುತ್ತದೆ.ಆ ಮದ್ಯದಲ್ಲಿ ಜಗತ್ತಿನಲ್ಲಿ ಎಷ್ಟೊ೦ದು ಬದಲಾವಣೆಗಳು..!
ನಾವು ಕಾಲಕ್ಕೆ ಜೊತೆಯಾಗಿ ಸಾಗುತ್ತಿರಬೇಕು ಅಷ್ಟೆ.
ನಿಮ್ಮ ಸು೦ದರ ಪ್ರತಿಕ್ರಿಯೆಗೆ ನನ್ನ ನಮ್ರ ಧನ್ಯವಾದಗಳು.
ಕಾಲದ ಸತ್ಯಗುಣಗಳನ್ನು ಸೊಗಸಾಗಿ ಕವನದ ರೂಪದಲ್ಲಿ ತೆರೆದಿಟ್ಟಿದ್ದೀರಿ. ತುಂಬ ಚೆನ್ನಾಗಿದೆ.
kaalana gati, namma matiyannu saaruva kavana tumbaa sogasaagide....
ಕಾಲ ಚಕ್ರದ ಒಳಗಿರುವ ನಾವು ಅದರ ಪರಿಧಿಯನ್ನು ಅರಿಯುವುದು ಅಸಾಧ್ಯ, ಸಾಗುವುದು ಮಾತ್ರ ಸಾಧ್ಯ ಎನ್ನುವುದನ್ನು ಸು೦ದರ ಕವನದ ಮೂಲಕ ಮೂಡಿಸಿದ್ದೀರಿ.
ಶುಭಾಶಯಗಳು
ಅನ೦ತ್
ಸುಂದರ ಕವನ ಮನಮುಕ್ತಾ
ಯಾರ ಕಣ್ಣಿಗೂ ಕಾಣದಂತೆ, ಕೈಗೆ ಸಿಗದಂತೆ...
ಸಾಲುಗಳು ಹಿಡಿಸಿದವು.
ನಾಳೆಯ ಹೊಂಗನಸುಗಳು ನನಸಾಗಲಿ
ಸುಬ್ರಹ್ಮಣ್ಯ ಅವರೆ,
ಕಾಲದ ಬಗ್ಗೆ ಯೋಚಿಸುತ್ತಾ ಹೋದ೦ತೆ ಎಷ್ಟೊ೦ದು ಅಚ್ಚರಿಯಾಗುತ್ತದೆ..ಅಲ್ಲವೇ?
ಕವಿತೆ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಅನ೦ತ ಧನ್ಯವಾದಗಳು.
ದಿನಕರ್ ಅವರೆ,
ಮನುಷ್ಯನ ಜೀವನದ ಗತಿಯಲ್ಲಿ ಕಾಲದ ಗತಿ ಎ೦ತಹ ಪ್ರಾಮುಖ್ಯತೆ ಪಡೆದಿದೆ ಅಲ್ಲವೆ?
ಕವನದ ಬಗ್ಗೆ ಚೆ೦ದದ ಪ್ರತಿಕ್ರಿಯೆ ಕೊಟ್ಟು ಪ್ರೋತ್ಸಾಹಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಕಾಲವನ್ನ ಗೆದ್ದವರ್ಯರು ಇಲ್ಲಾ ...! ಆದ್ರು ಕಾಲದ ಪಯಣದ ಜೊತೆ ನಮ್ಮ ಜೂಟಾಟ :)
ತುಂಬಾ ಚನ್ನಾಗಿದೆ "ಸಮಯದ ಪಯಣ"
ತುಂಬಾ ಇಷ್ಟ ಆಯ್ತು ಕೆಲವೊಂದು ಸಾಲುಗಳು ;)
ಒಮ್ಮೆ ಇತ್ತ ಬನ್ನಿ
http://manjukaraguvamunna.blogspot.com/
ಅನ೦ತ್ ರಾಜ್ ಅವರೆ,
ಕಾಲಚಕ್ರದಲ್ಲಿ ಸಾಗುತ್ತಾ ಇರುವಾಗ ಚಕ್ರದ ಮೇಲೇರುವುದು ಹಾಗೆಯೇ ಕೆಳಕ್ಕಿಳಿಯುವುದು ಸ್ವಾಭಾವಿಕ..ಅದಕ್ಕೆ ಮನುಷ್ಯ ಸದಾ ಸಿದ್ಧನಾಗಿಯೇ ಇರಬೇಕಾಗುವುದು.
ಚೆ೦ದದ ಪ್ರೋತ್ಸಾಹಕರ ಅನಿಸಿಕೆಗೆ ನಮ್ರ ಧನ್ಯವಾದಗಳು.
ಅಪ್ಪ ಅಮ್ಮ ಬ್ಲಾಗ್ ನವರೆ,
ಕಣ್ಣಿಗೂ ಕಾಣದೆ ಕೈಗೂ ಸಿಗದೆ ತನ್ನಿರುವನ್ನು ಸದಾ ನೆನಪಿಸುವ ಕಾಲದ ಬಗ್ಗೆ ಯೋಚಿಸಿದರೆ ಎಷ್ಟೊ೦ದು ವಿಸ್ಮಯವೆನಿಸುತ್ತದೆ ಅಲ್ಲವೇ?
ಸು೦ದರ ಪ್ರತಿಕ್ರಿಯೆಯೊ೦ದಿಗೆ ಚೆ೦ದದ ಹಾರೈಕೆ ನೀಡಿ ಬರೆಯಲು ಪ್ರೋತ್ಸಾಹ ನೀಡಿದ್ದಕ್ಕೆ ತು೦ಬಾ ಧನ್ಯವಾದಗಳು.
ಮನಮುಕ್ತಾ
ಅವರೇ
ಸುಂದರ ಕವನ
ಕಾಲದ ಗತಿ ಯ ಬಗೆಗಿನ ನಿಮ್ಮ ಅನಿಸಿಕೆ ಇಷ್ಟವಾಯಿತು
ಕಾಲದ ಬಗ್ಗೆ ಅತ್ಯ೦ತ ಅರ್ಥಪೂರ್ಣವಾದ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು.
ಕಾಲ' ದ ಬಗ್ಗೆ ನಿಮ್ಮ ಕವನ ತುಂಬಾ ಸೊಗಸಾಗಿದೆ. ಅರ್ಥಪೂರ್ಣವಾಗಿದೆ..ಧನ್ಯವಾದಗಳು...
ಒಮ್ಮೆ ಇಲ್ಲಿ ಭೇಟಿ ನೀಡಿ....
http://ashokkodlady.blogspot.com/
ಕವನ ತುಂಬ ಸರಳವಾಗಿದ್ದು, ತುಂಬ ಗಹನವಾಗಿದೆ. ಇಷ್ಟವಾಯಿತು. ಇನ್ನು ಉಳಿದ postಗಳನ್ನು ಓದುವುದಿದೆ. ಮತ್ತೆ ಬರುತ್ತೇನೆ, ಕಾಲ ನಿರಂತರ, ಕೆಲವೊಮ್ಮೆ ನಿಧಾನವಾಗಿಯೂ, ಕೆಲವೊಮ್ಮೆ ವೇಗವಾಗಿಯೂ, ಒಟ್ನಲ್ಲಿ time ಅಂದ್ರೆ ಪಕ್ಕ 420 ಕಣ್ರಿ.. :)
ನನ್ನ ಬ್ಲಾಗ್ ಗೆ ಬಂದಿದ್ದಕ್ಕೆ ಧನ್ಯವಾದಗಳು..
ಆತ್ಮೀಯ
ಅದ್ಭುತ ಕವನ. ಸೊಗಸಾದ ಪದ ಜೋಡಣೆ. ನಿಮ್ಮ ಕವನ ಸ್ಪೂರ್ತಿಯಿ೦ದ ಒ೦ದಿಷ್ಟು ಪದಗಳ ಸಾಲು ಹೊಳೆದದ್ದು ಹೀಗಿದವೆ
ಕಾಲವೆನ್ನುವುದು ಹಾಗೆ
ಮು೦ದೆ ಸಾಗುವುದಷ್ಟೇ ಗೊತ್ತು
ನೆನಪುಗಳ ರೂಪಿಸಿ
ಭವಿಷ್ಯವ ಕಾಣಿಸಿ
ಮುನ್ನಡೆಯುವುದು ’ಹೀಗೆ’
ಈ ಘಳಿಗೆ ಕ್ಷಣದಲ್ಲಿ ಭೂತವಾಗುವ ಬಗೆಗೆ
ಅಚ್ಚರಿಗೊ೦ಡಿದ್ದೇನೆ
ಹಾಗಾದರೆ ನಾನೆಲ್ಲಿದ್ದೇನೆ
ಹರಿ
ಕಾಲಬ್ರಹ್ಮನ ಬಗ್ಗೆ ಉತ್ತಮವಾಗಿ ಕವನ ರಚಿಸಿದ್ದೀರಿ..
"ಕಾಲವು ಎಲ್ಲರಿಗೂ/ಎಲ್ಲದಕ್ಕೂ ಉತ್ತರ ನೀಡುತ್ತದೆ.."ಎಂಬುದು ಅಪ್ಪಟ ಚಿನ್ನದಂಥ ಮಾತು..
ತು೦ಬಾ ಚೆನ್ನಾಗಿದೆ ಕವನ ಮನಮುಕ್ತಾ ಅವರೆ!
Tumba chennagide!!!!!!!
ಆದರೆ, ನಿರ೦ತರ ನಿನ್ನ ಗತಿ ಇರುವುದು ಒ೦ದೇ ತೆರನಲ್ಲಿ,
ನಿರ೦ತರ ನಿನ್ನ ಈ ಗತಿಯಲ್ಲಿ ನನ್ನ ಇರುವು ಎಲ್ಲಿ??
ee saalugalu tumba ista aitu :) tumba chennagide kavana :)
ಸಮಯವಿದೆ ಸಮಯವಿಲ್ಲ ಸಮವಾದುದಿಲ್ಲ ಇದಕೆ...
ಸಮ-ಸಮಯದ ಅಸಮಾನ ವರ್ಣನೆಯಾಗಿ ಮೂಡಿದೆ ನಿಮ್ಮ ಕವನ ಮನಮುಕ್ತಾರವರೆ...
ಕಾಲವನ್ನು ಅಳೆಯೋರು ಯಾರೂ ಇಲ್ಲ
ಸಮಯದ ಮಹಿಮೆಯ ಬಹಳ ಹಿಂದಿನ "ವಕ್ತ್" ಹಿಂದಿ ಚಿತ್ರ ಎಲ್ಲ ಮೂಡಿಬಂದವು ಚಿತ್ತ ಪರದೆಯಮೇಲೆ..ನಿಮ್ಮ ಕವನ ನೋಡಿ...
samayada joteyalli namma ee jivana sagutide.. adaralli samyakke takkante hagu hogugalu jarugutiruttave... mukta manasia muktaravare nima ee samayada joteyalli saguva mansu, kanasu, kalpanegala saara chennagide..:)
ಬಾಲು ಅವರೆ,
ಸಮಯವು ಸರಿಯುತ್ತಿರುತ್ತದೆ..ನಿನ್ನೆ ನಾಳೆಗಳು ಮನುಷ್ಯನ ಕೈಯಲ್ಲಿಲ್ಲ..ವಾಸ್ತವದ ’ಈ ಕ್ಷಣ’ ಮಾತ್ರಾ ಮನುಷ್ಯನ ಬಳಿಯಲ್ಲಿರುವುದು.ಅದರ ಸರಿಯಾದ ಉಪಯೋಗ ಹಾಗು ಅದನ್ನು ಚೆ೦ದವಾಗಿಸಿಕೊಳ್ಳುವ ಪ್ರಯತ್ನ ಮಾತ್ರ ಮನುಷ್ಯನ ಕೈಯಲ್ಲಿರುವುದು.
ನಿಮಗೂ ಶುಭಾಶಯಗಳು..ಹಾಗೂ ಚೆ೦ದದ ಅನಿಸಿಕೆಯೊಡನೆ ಪ್ರೋತ್ಸಾಹ ನೀಡಿದ್ದಕ್ಕೆ ಅನ೦ತ ಧನ್ಯವಾದಗಳು.
ಕಾಲ' ದ ಬಗ್ಗೆ ನಿಮ್ಮ ಕವನ ತುಂಬಾ ಸುಂದರವಾಗಿದೆ . ಓದಿ ಸಂತೋಷವಾಯಿತು.
ದೊಡ್ಡಮನಿ ಮ೦ಜು ಅವರೆ,
ನಿಜ..ನಿಜ..ಕಾಲವನ್ನು ಗೆಲ್ಲಲಿಕ್ಕೆ ಯಾರಿ೦ದಲೂ ಸಾಧ್ಯವಿಲ್ಲ..ಆದರೆ ಅದರ ಪೂರ್ಣ ಉಪಯೋಗವನ್ನು ಯೋಗ್ಯ ರೀತಿಯಲ್ಲಿ ಮಾಡಿಕೊಳ್ಳಲು ಪ್ರಯತ್ನಿಸಬಹುದು.
ಕವನವನ್ನು ಮೆಚ್ಚಿ ಚೆ೦ದದ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ಗುರುಮೂರ್ತಿಯವರೆ,
ಕವನವನ್ನು ಮೆಚ್ಚಿ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಪ್ರಭಾ ಮಣಿಯವರೆ,
ಚೆ೦ದದ ಅನಿಸಿಕೆಯನ್ನು ವ್ಯಕ್ಯಪಡಿಸಿದ್ದೀರಿ.ಧನ್ಯವಾದಗಳು.
ಆಶೋಕ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗಳು ಬರುತ್ತಿರಲಿ..ಧನ್ಯವಾದಗಳು.
ಪ್ರಸಾದ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
:)ನಿಮ್ಮ ಚೆ೦ದದ ಅನಿಸಿಕೆಗಾಗಿ ಧನ್ಯವಾದಗಳು.ಪ್ರೋತ್ಸಾಹ ನೀಡುತ್ತಿರಿ.
ಹರೀಶ್ ಅವರೆ,
ನಾ ಬರೆದ ಕವನವನ್ನು ಮೆಚ್ಚಿ,ಇನ್ನೂ ಸು೦ದರ ಕವನವನ್ನು ಬರೆದು,ಅನಿಸಿಕೆ ತಿಳಿಸಿದ್ದಕ್ಕೆ ನನ್ನ ಧನ್ಯವಾದಗಳೊ೦ದಿಗೆ ಅನ೦ತ ವ೦ದನೆಗಳು.
ಮನಸಿನ ಮನೆಯವರೆ,
ನಿಜ.. ಕಾಲ ಎಲ್ಲಕ್ಕು/ಎಲ್ಲರಿಗೂ ಉತ್ತರಿಸುತ್ತದೆ.ಕಾಲಕ್ಕೆ ಬೆಲೆಕಟ್ಟಲು ಅಸಾಧ್ಯವೇ ಸರಿ.
ಕವನವನ್ನು ಮೆಚ್ಚಿ ನಿಮ್ಮಚೆ೦ದದ ಅನಿಸಿಕೆಯನ್ನು ತಿಳಿದ್ದೀರಿ.ಧನ್ಯವಾದಗಳು.
ಸುಧೇಶ್ ಅವರೆ,
ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಮಹಾ೦ತೇಶ್,
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಪ್ರೊತ್ಸಾಹದ ಅನಿಸಿಕೆಗಳು ಬರುತ್ತಿರಲಿ.ಧನ್ಯವಾದಗಳು.
Thanks for your lovely comments,snow white....
ಅಜಾದ್ ಭಾಯಿ,
ನಿಜ ಅಲ್ಲವೇ..ಸಮಯದ ಬಗ್ಗೆ ಯೋಚಿಸಿದಷ್ಟೂ..ಇದೆ.
ಸಮಯ ಮಾತ್ರಾ ತಾನಾಗಿಯೇ ಕಳೆದುಹೊಗುತ್ತಿರುತ್ತದೆ.. :)
ವಕ್ತ್ ಸಿನೆಮಾ ನೋಡಿಲ್ಲ ..ನೋಡುತ್ತೇನೆ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ತರುಣ್ ಅವರೆ,
ಸಮಯ ..ಎಲ್ಲದಕ್ಕೂ ಉತ್ತರಿಸುತ್ತದೆ,ಎಲ್ಲವನ್ನೂ ಮರೆಸುತ್ತದೆ,ಎಲ್ಲವನ್ನೂ ತಿಳಿಸುತ್ತದೆ..ಎಲ್ಲದರ ಜೊತೆಯಿರುತ್ತದೆ.
ನಿಮ್ಮ ಅನಿಸಿಕೆಗಾಗಿ ಧನ್ಯವಾದಗಳು.
ಶಶಿ ಜೊಯಿಸ್ ಅವರೆ,
ಸ೦ತಸದಿ೦ದ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ್ದಿರಿ.
ಧನ್ಯಾವಾದಗಳು.
ಕಾಲದ ಬಗ್ಗೆ ಕಾಲವೇ ಉತ್ತರಿಸಬೇಕು.
ಚೆನ್ನಾಗಿದೆ ಮೇಡಂ.
samayada payana savivaravagide
samayada payana savivaravagide
ಸತೀಶ್ ಅವರೆ,
ಕಾಲ ಯಾವಾಗಲು ಟಾಟಾ.. ಅನ್ನುತ್ತಲೇ ಸಾಗುತ್ತಿರುತ್ತಲೇ ಇರುತ್ತದೆ..ತನ್ನ ಬಗ್ಗೆ ಹೇಳಿಕೊಳ್ಳಲು ಅದಕ್ಕೆ ಸಮಯವೇ ಇಲ್ಲ..:)
ಪ್ರೋತ್ಸಾಹಕರ ಅನಿಸಿಕೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
ಕಲಾವತಿಯವರೆ,
ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಸು೦ದರ ಅನಿಸಿಕೆಗಳನ್ನು ತಿಳಿಸಿ ,ಪ್ರೋತ್ಸಾಹಿಸಿದ್ದೀರಿ.ತು೦ಬಾ ಧನ್ಯವಾದಗಳು.
ಮನಮುಕ್ತಾ ಅವರೆ........ ಕಾಲನ ಸುಂದರ ಚಿತ್ರಣ.... ಕೊನೆಯ ನಾಲ್ಕು ಸಾಲುಗಳು ಹೆಚ್ಚು ಇಷ್ಟವಾದವು.
ಆದರೆ, ನಿರ೦ತರ ನಿನ್ನ ಗತಿ ಇರುವುದು ಒ೦ದೇ ತೆರನಲ್ಲಿ,
ನಿರ೦ತರ ನಿನ್ನ ಈ ಗತಿಯಲ್ಲಿ ನನ್ನ ಇರುವು ಎಲ್ಲಿ??
ಮನಮುಕ್ತಾ, ನಿಮ್ಮ ಮೇಲಿನ ಸಾಲುಗಳು...ಬಹಳ ಹಿಡಿಸಿದವು...
ಮನಮುಕ್ತಾ....
ಬಹಳ ಸುಂದರ.. ಅರ್ಥ ಗರ್ಬಿತ ಸಾಲುಗಳು...
ಅಭಿನಂದನೆಗಳು... ಚಂದದ ಕವನಕ್ಕೆ...
ಗುರುಪ್ರಸಾದ್ ಅವರೆ,
ಕವನ ಮೆಚ್ಚಿ ಪ್ರೊತ್ಸಾಹದ ಪ್ರತಿಕ್ರಿಯೆ ನೀಡಿದ್ದೀರಿ.
ಧನ್ಯವಾದಗಳು.
ಆಜಾದ್ ಭಾಯಿ,
ಕವನವನ್ನು ಮತ್ತೊಮ್ಮೆ ಓದಿ ಸ೦ತೋಷದಿ೦ದ ಮತ್ತೆ ಮೆಚ್ಚುಗೆಯ ಪ್ರತಿಕ್ರಿಯಿಸಿದ್ದಿರಿ. ನಿಮ್ಮ ಆದರಕ್ಕೆ ಕೃತಜ್ನಳು.
ಮತ್ತೊಮ್ಮೆ ಧನ್ಯವಾದಗಳು.
ಪ್ರಕಾಶಣ್ಣ,
ಕವನದ ಬಗ್ಗೆ ನಿಮ್ಮ ಮೆಚ್ಚುಗೆಯ ಅನಿಸಿಕೆ ನೀಡಿ ಪ್ರೋತ್ಸಾಹಿಸಿದ್ದೀರಿ. ತು೦ಬಾ ಧನ್ಯವಾದಗಳು.
ಅದ್ಭುತ ರಚನೆ ಸಮಯವ ಕುರಿತು. ತು೦ಬಾ ಚೆನ್ನಾಗಿ ಸಮಯದ ಬಗ್ಗೆ ಕವನದಲ್ಲಿ ಹೇಳಿದ್ದಿರಾ...
ಸೀತಾರಾಮ್ ಅವರೆ,
ಕವನ ಮೆಚ್ಚಿ ಪ್ರೋತ್ಸಾಹ ನೀಡಿದ್ದೀರಿ. ಧನ್ಯವಾದಗಳು.
Post a Comment