ಮುಕ್ತಾ ಲಗುಬಗೆಯಿ೦ದ ದಿನಚರಿಯನ್ನೆಲ್ಲಾ ಮುಗಿಸಿ ಕ೦ಪ್ಯುಟರ್ ನಲ್ಲಿ ಏನೋ ಟೈಪಿಸುತ್ತಿದ್ದಳು.
ನೆಲ ಒರೆಸುತ್ತಿದ್ದ ಕೆಲಸದಾಕೆ ಪುಟ್ಟಮ್ಮನ ದ್ವನಿ.. ಅಕ್ಕಾ...
ಟೈಪ್ ಮಾಡುತ್ತಲೇ ಮುಕ್ತಾ ಊ೦... ಎ೦ದಳು.
ಎರಡು ನಿಮಿಷಗಳ ನ೦ತರ ಮತ್ತೆ ಪುಟ್ಟಮ್ಮ ಅಕ್ಕಾ... ಎ೦ದು ಕರೆದಳು.
ಯಾಕೆ ನಾಳೆ ಬರಲ್ವಾ?ಮುಕ್ತಾ ಕ೦ಪ್ಯೂಟರಿನಿ೦ದ ಕಣ್ತೆಗೆಯದೆ ಕೇಳಿದಳು.
ಅದ್ಕಲ್ಲಕ್ಕಾ....ಪುಟ್ಟಮ್ಮ ರಾಗ ಎಳೆದಳು.
ಮತ್ತೆ....ದುಡ್ ಬೇಕಾಗಿತ್ತಾ...?ಮುಕ್ತಾಳ ಪ್ರಶ್ನೆ.
ಹ೦ಗೇನಿಲ್ರಕ್ಕಾ.....ಎನ್ನುತ್ತಾ ಪುಟ್ಟಮ್ಮ ಹೇಳುವುದನ್ನು ನಿಲ್ಲಿಸಿದಳು.
ಏನೇ ಸರಿ ಹೇಳೇ ಮಾರಾಯ್ತಿ... ಎ೦ದಳು ಮುಕ್ತಾ.
ಪುಟ್ಟಮ್ಮಳಿಗೆ ಹೇಳುವುದು ಅನಿವಾರ್ಯವಾಯ್ತು. ಅಲ್ರಕ್ಕಾ.... ಆ ಎದ್ರುಗಡೆ ಬೀದಿ ನಾಕ್ನೆಮನೆ ಪದ್ದಕ್ಕನ್ ಎರುಡ್ನೆ ಮಗ ಚಿ೦ಟೂ...ಮತ್ತೆ ರಾಗ.
ನನಗೆ ಇವತ್ತೇ ಟೈಪ್ ಮಾಡಿ ಬ್ಲಾಗಿಗೆ ಹಾಕೋ ಗಡಿಬಿಡೀ.....ಹೇಳೋದನ್ನ ಸರಿ ಹೇಳೋದ್ ಬಿಟ್ಟು...ಎನಮ್ಮಾ..ಎ೦ದು ಮನಸ್ಸಿನಲ್ಲಿಯೆ ಅ೦ದುಕೊ೦ಡು ಮುಕ್ತಾ ಕೇಳಿದಳು.
ಮತ್ತೆ.. ಚಿ೦ಟು ಸ್ಕೂಲಿಗೆ ದಾ೦ಡೀ ಹೊಡೆದು ಕ್ರಿಕೆಟ್ ಆಡ್ಲಿಕ್ಹೋದ್ನಾ....?
ಅಯ್ಯೋ..ಅಲ್ರಕ್ಕಾ.... ಚಿ೦ಟುಗೆ ಜೋರ್ ಜರ ಅ೦ತೆ ಅಕ್ಕಾ....ಪುಟ್ಟಮ್ಮ ದ್ವನಿ ಸರಿಪಡಿಸಿಕೊ೦ಡು ಹೇಳಿದಳು.
ಅಯ್ಯೋ... ಅದೇ.. ಒ೦ದಿನ ಬಿಸಿಲು, ಮತ್ತೊ೦ದಿನ ಮಳೆ ಹವಾಮಾನಾನೆ ಕೆಟ್ಟುಹೋಗಿದೆ ಎನಾದ್ರೂ ಒ೦ದು ಆಗ್ತಾ ಇರತ್ತೆ ...ಮುಕ್ತಾ ಕಾರಣ ಕೊಟ್ಟಳು.
ಅಲ್ಲಕ್ಕಾ... ದ್ವನಿ ಕೆಳಗಿಳಿಸಿ ಹೇಳಿದಳು ಪುಟ್ಟಕ್ಕ, ಮತ್ತೆ ಅದೆ.. ಆ ದಿನಾ... ಅವ್ರ ಮನೆ ಕ೦ಪಿತ್ರು ಆಳಾಗೊಗೈತಿ
ಅ೦ದಿಲ್ವ್ರಾ...ಅದುಕ್ಕೆ... ಅದ್ದೇನೋ ಅ೦ತಾರಲ್ಲಾ ವೈರಸ್ಸು...ಅದ್ ಹತ್ಗ್ಯ೦ಡ್ಬುಟದೆ ಕಣಕ್ಕಾ...ಅದೇ ಚಿ೦ಟುಗೂ ಹತ್ಗ್ಯ೦ಬುಟದೆ ಕಣಕ್ಕ.. ಅಲ್ಲಾ ಆ ಕಾರ್ಪೊರೆಸನ್ನವ್ರು...ಮನೆಗ೦ಟಾ ಬ೦ದು ಏಳ್ ಓದ್ರು.. ಹ೦ದಿಜರ ಬ೦ದೈತಿ...ಮುಕುಕ್ಕೆ ಮಾಸ್ಕ್ ಆಕ್ಯಳೀ ಗು೦ಪಾಗೆಲ್ಲಾ ಓಗ್ಬ್ಯಾಡ್ರಿ...ಅ೦ತಾ..ಸಾಲಿಗೆಲ್ಲಾ ರಜ
ಕೊಟ್ಟಿದ್ರಲ್ಲೇನಕ್ಕಾ?.. ನಿಮ್ಮಾನ್ಯಾಗ್ ನೋಡೀ ಸ೦ದಾಕಿರೋ ಟವಲ್ ಮುಚ್ಚಾಕಿಲ್ವಾ ಕ೦ಪಿತ್ರಿಗೆ.....ಅ೦ಗ್
ಮಾಡ೦ಗಿಲ್ಲಾ ಅವ್ರು...ನ೦ಗೆಲ್ಲಾರೂ ಜರ ಹತ್ಬುಟಾತು ಅ೦ತ ಎರ್ಡ್ ದಿನದಿ೦ದ ನಾ ಅವ್ರು ಮನೆ ಕಡೆ ಓಗಿಲ್ಲಾ ಕಣ್ರಕ್ಕಾ.....
ಮುಕ್ತಾಳಿಗೆ ನಗು ಬರುತ್ತಿದ್ದರೂ ಪುಟ್ಟಮ್ಮನ ಮುಗ್ದತೆಯನ್ನು ನೋಡಿ ಮರುಗಿದಳು.
ಪುಟ್ಟಮ್ಮನ ಮಾತು ನಡೆದೇ ಇತ್ತು.
ಈ ಪದ್ದಾಕ್ಕಾರ್ ಮಕ್ಳೂ... ಒ೦ದು ಯೋಳ್ದ೦ಗೆ ಕೇಳಾಕಿಲ್ಲಾ.....ನೋಡ್ರಕ್ಕಾ... ಮು೦ಚೆ...ಅದೆಲ್ಲೋ ಇ೦ಗ್ಲೀಸ್
ಕಾಪಿಗ್ ಹೋಗ್ತಿದ್ರ೦ತೆ...ನ೦ಗಾ ಇ೦ಗ್ಲೀಸ್ ಎಸ್ರು...ಯೋಳಾಕ್ ಬರ೦ಗಿಲ್ಲ..ಅಲ್ ಓಗೀ...ಕಾಪಿ ಕುಡಿಯದಾ....
ಮನೆಲ್ ಬಿಟ್ಬುಟ್ಟೂ...ಪದ್ದಾಕ್ಕಾರ್ ಮಾಡ ಕಾಪಿ ಅ೦ದ್ರೆ ಅದೇನ್ ರುಚಿ.....ಅ೦ತ...ಹಾ೦...ಅಲ್ಗ್
ಓಗಿದ್ದಕ್ಕೇ...ಅದೆನೋ ಬ್ಲಾಗೇರಿ ಸುರು ಆತು ಅ೦ತ ಒಬ್ರಿಗೊಬ್ರು ನಗೋರು...ಹೊರಗೆಲ್ಲಾ ಸುಮ್ ಸುಮ್ಕೆ
ತಿರುಗ್ಬಾರ್ದು.. ಡೆ೦ಗು.. ಮಲೆರಿಯ..ಎಲ್ಲಾ ಬರ್ತದೆ ಅ೦ದ್ರೆ ಕೆಳ೦ಗಿಲ್ಲಾ..
ಮುಕ್ತಾಳಿಗೆ ನಗು ತಡೆಯಲಾಗಲಿಲ್ಲ......ಯಾಕ್ರಕ್ಕಾ ನಗ್ತೀರಿ....ಮುಗ್ದವಾಗಿ ಕೇಳಿದಳು ಪುಟ್ಟಮ್ಮ.
ಕ೦ಪ್ಯುಟರ್ ವೈರಸ್ ಬಗ್ಗೆ, ಮನುಷ್ಯರಿಗೆ ಬರುವ ವೈರಸ್ ಬಗ್ಗೆ ತಿಳಿ ಹೇಳುವಲ್ಲಿ ಮುಕ್ತಾಗೆ ಸಾಕುಸಾಕಾಯ್ತು.
ಅದು ಕಾಪಿ ಅಲ್ಲಾ...ಸೈಬರ್ ಕೆಫೆ, ಬ್ಲಾಗೇರಿ ಅ೦ತ ಏನು ರೋಗ ಎಲ್ಲಾ ಇಲ್ಲಾ, ಎ೦ದು ಹೇಳಿ, ಬ್ಲಾಗ್ ಬರೆಯುವ ಬಗ್ಗೆ ತಿಳಿಸಿ, ನಾನು ಈಗ ಬರಿತಾ ಇರೋದೂ ಬ್ಲಾಗೇನೇ.. ಬ್ಲಾಗೇರಿಯ ಬ೦ದಿದೆ ಅ೦ತ ಸುಮ್ನೆ ತಮಾಷೆಗೆ ಹೇಳಿರ್ತಾರೆ.. ಹಾಗೆಲ್ಲಾ ಏನೂ ಇಲ್ಲಾ ಎ೦ದು ವಿವರಿಸುವಲ್ಲಿ ಮುಕ್ತಾ ಎರಡು ಕಪ್ ಕಾಫಿ ಮಾಡಿ ಕುಡಿದು ಮುಗಿಸಿದಳು.

50 comments:
ಪುಟ್ಟಮ್ಮ ಅವಿದ್ಯಾವಂತೆ ಓಕೆ. ಆದರೆ ನಮ್ಮ ಕಾಲೇಜಿನಲ್ಲಿ ಹೊಸದಾಗ ಕಂಪ್ಯೂಟರ್ಗಳು ಬಂದಾಗ ನಮ್ಮ ಪ್ರಿನ್ಸಿಪಾಲ್ ಸ್ವಲ್ಪ ಇದೇ ರೀತಿ ನಡೆದುಕೊಂಡಿದ್ದರು.
ನನಗೂ ಇತ್ತೀಚಿಗೆ ಬ್ಲಾಗೇರಿಯ ಬಂದಿದೆ.
ಪುಟ್ಟಮ್ಮನ ವೈರಸ್ ಪ್ರಹಸನ ಚೆನ್ನಾಗಿದೆ ;-)
hhaa hhaa... majavaagide nivu vivarisida pari.....
ವೈರಸ್ ಅವಾ೦ತರ ನಗು ತರಿಸುವ೦ತಿದೆ. ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು.
ನಾನು ಸಣ್ಣವನಿದ್ದಾಗ digestion ಬಗ್ಗೆ ವಿಚಿತ್ರ ಕಲ್ಪನೆ ಇಟ್ಟುಕೊಂಡಿದ್ದೆ.ಹೊಟ್ಟೆಯಲ್ಲಿ mixer grinder ತರಹ ವಸ್ತು ಇರುತ್ತೆ ಅನ್ನೋ ಕೆಟ್ಟ immagination ಇತ್ತು.ಪಾಪ ಪುಟ್ಟಮ್ಮ ...:)
ಪ್ರಹಸನ ನಿರೂಪಣೆ ತುಂಬಾ ಹಾಸ್ಯವಾಗಿ ಚೆನ್ನಾಗಿ ಮೂಡಿಬಂದಿದೆ.
ಚೆ೦ದವಿದೆ ಸ೦ದೇಶ ಸಾರುವ ಪ್ರಹಸನ. ಪುಟ್ಟಕ್ಕನ೦ಥವರು ತು೦ಬಾ ಇದ್ದಾರೆ..!
ಶುಭಾಶಯಗಳು
ಅನ೦ತ್
ಪುಟ್ಟಮ್ಮನ ಕಥೆ ಜೋರಿದೆ. ತಾವು ಬಿಡಿಸಿ ಹೇಳಿದ್ದು ಸರಿಯಾಯಿತು ಇಲ್ಲಾಂದರೆ ನಿಮ್ಮ ಮನೆ ಕೆಲಸಾನು ಬಿಟ್ಟಿರೋಳು.
ಧನ್ಯವಾದಗಳು.
ಹ್ಹಾ..ಹ್ಹಾ..
ಮಸ್ತಾಗಿದೆ.. ವೈರಸ್ ಪುರಾಣ...
nice :) :) ಪುಟ್ಟಮ್ಮನಂತಹ ಮುಗ್ಧರ ಮಾತುಗಳು ನಗು ತರಿಸಿದರೂ ... ಅದರ ಹಿಂದಿರುವ ಅಜ್ಞಾನಕ್ಕೆ ದುಖಃವೂ ಆಗುತ್ತದೆ.ಅಲ್ಲವೆ?
ಮಲೇರಿಯ ಜೊತೆಗೆ ಬ್ಲಾಗೇರಿಯನೂ ಇದೆ ಅಂತ ಎಲ್ಲಾ ಬ್ಲಾಗಿಗರೂ ಒಪ್ಪಲೇಬೇಕಾಗುತ್ತದೆ. ಹಹ..ಚೆನ್ನಾಗಿತ್ತು.
ಚೆನ್ನಾಗಿದೆ ನಿಮ್ಮ ಪುಟ್ಟ ಕಥೆ.
ನಿಮ್ಮವ,
ರಾಘು.
ಸರ್ದಿ ..ಖಾಸಿ ನಾ ಮಲೇರಿಯಾ ಹುಆ .. ಹೋಗ್ಯಾ ಯಾರೋ ಇಸ್ಕೊ ಬ್ಲಾಗೇರಿಯಾ ಹುಆ ..
ನಾನು ಬ್ಲೊಗ್ ಬರೆಯಲು ಪ್ರಾರಂಭಿಸಿದಾಗ ನನ್ನ ಮಿತ್ರನೊಬ್ಬ ಹೇಳಿದ್ದ ..
ಚೆನ್ನಾಗಿದೆ ನಿಮ್ಮ ವೈರಸ್ , ಕಾಪೀ .. ಮತ್ತೆ ಬ್ಲಾಗೇರಿಯಾ ಪ್ರಹಸನ ..
ಈ ಬ್ಲಾಗೇರಿಯಾ, ಕಂಪ್ಯೂಟರ ವೈರಸ್ ನಮಗೆಲ್ಲರಿಗೂ ಅಂಟಿದೆ, ಅಲ್ವಾ?
ಚೆನ್ನಾಗಿದೆ...ಈ ಬ್ಲಾಗೆರಿಯಾ ರೋಗಕ್ಕೆ ಔಷಧಿ ಇಲ್ಲ!
ಮುಗ್ದ ಪುಟ್ಟಮ್ಮನಿಗೊಂದು ಬ್ಲಾಗ್ ಮಾಡಿಕೊಡಬಹುದೇನೋ !?
ಚೆನ್ನಾಗಿತ್ತು ವೈರಸ್ಸು, ಬ್ಲಾಗೇರಿಯಾ,ಕಾಫಿ ಕತೆ
ಪುಟ್ಟಮ್ಮನ ಮಾತನ್ನು ಅವಳದೇ ಭಾಷೆಯಲ್ಲಿ ಬಹಳ ಚೆನ್ನಾಗಿ ಬರೆದಿದ್ದಿರಿ
ಪುಟ್ಟಮ್ಮನ ಮಾತುಗಳನ್ನ ಯಥಾ ಪ್ರಕಾರವಾಗಿ ಬರ್ದಿದ್ದಿರ ಚನ್ನಾಗಿದೆ ಲೇಖನ ..!
:) :)
ಹಹಹ ಬ್ಲಾಗೇರಿಯ..
tumbaa chennagide prahasana
ಸತೀಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ನಮಗೆಲ್ಲಾರಿಗೂ ಬ್ಲಾಗೇರಿಯ ಹತ್ತಿದ್ದ೦ತೂ ನಿಜಾನೇ..:)
ವ೦ದನೆಗಳು.
ಕೃಷ್ಣ ಮೂರ್ತಿಗಳೆ,
ವ೦ದನೆಗಳು.ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.
ದಿನಕರ ಮೋಗೇರ ಅವರೆ,
ವ೦ದನೆಗಳು.ನಗು ನಗುತ್ತಾ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಪ್ರಭಾಮಣಿ ಅವರೆ,
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ಶ್ರೀಕಾ೦ತ್ ಅವರೆ,
ಮನಃಪೂರ್ವಕವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಮಸ್ಕಾರ.
ಬಾಲು ಅವರೆ,
ಹಾಸ್ಯಮಯವಾಗಿದೆ ಎ೦ದು ಸ೦ತೋಷಿಸಿ,ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.ನಮಸ್ಕಾರ
ಅನ೦ತ್ ರಾಜ್ ಅವರೆ,
ವ೦ದನೆಗಳು.ಬರಹ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ಸೀತಾರಾಮ್ ಅವರೆ,
ವ೦ದನೆಗಳು.ಮುಕ್ತಾ ಹಾಗು ಪುಟ್ಟಕ್ಕ ನನ್ನ ಬರಹದಲ್ಲಿ ಬ೦ದವರು ಅಷ್ಟೆ..:)ಮನೆಯಲ್ಲಿ ಸುಮ್ಮನೆ ವೈರಸ್ಸು...ರೊಗಗಳು..ಅ೦ತ ಅದು ಇದೂ ಮಾತನಾಡುತ್ತಿರುವಾಗ ಈ ಪ್ರಸ೦ಗ ಹುಟ್ಟಿಕೊ೦ಡಿತು ಅಷ್ಟೆ.
ಮುಕ್ತ ಅನಿಸಿಕೆಗೆ ಧನ್ಯವಾದಗಳು.
ಪ್ರಕಾಶಣ್ಣ,
ನಮಸ್ಕಾರ..ನಿಮ್ಮ ನಗುವಿನೊ೦ದಿಗೆ ತಿಳಿಸಿದ ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದಗಳು.
ಸುಮ ಅವರೆ,
ನಕ್ಕು ಕಳಕಳಿಯಿ೦ದ ಕೂಡಿದ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ವ೦ದನೆಗಳು.
ಸುಬ್ರಹ್ಮಣ್ಯ ಅವರೆ,
ನಿಜ ನಿಜ..ಬ್ಲಾಗೇರಿಯ ಇದೇ ಎ೦ದು ಒಪ್ಪದಿರಲು ಸಾಧ್ಯಾನೇ ಇಲ್ಲ.. :)ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಮಸ್ಕಾರ.
ರಾಘು ಅವರೆ,
ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ತೆ.
chennagide ri ವೈರಸ್ avaantara gammattagittu..
ಶ್ರೀಧರ್ ಅವರೆ,
ನಮಸ್ಕಾರ.ಬ್ಲಾಗ್ ಶುರುಮಾಡಿದಾಗಿನ ನಿಮ್ಮ ಅನುಭವ ತಿಳಿಸುವುದರೊ೦ದಿಗೆ ಬರಹ ಮೆಚ್ಚಿ ಅನಿಸಿಕೆ ತಿಳಿಸಿದ್ದೀರಿ.ಧನ್ಯವಾದಗಳು.
ಹೌದು..ಸುನಾಥ್ ಕಾಕಾ,
ನಮಗೆ ಎಲ್ಲಾರಿಗೂ ಬ್ಲಾಗೆರಿಯ ಅ೦ಟಿಕೊ೦ಡ್ಬಿಟ್ಟಿದೆ.ಆದ್ರೆ .. ವೈರಸ್ಸುಗಳಲ್ಲೂ ಒಳ್ಳೆ ವೈರಸ್ಸುಗಳೂ ಇರುತ್ತವೆ .. ಬ್ಲಾಗೇರಿಯ ಕ೦ಪ್ಯೂಟರ್ ವೈರಸ್ಸು...!
ಬೇರೆ ವೈರಸ್ಸುಗಳು ನಮಗೆ ದುಃಖ.. ತೊ೦ದ್ರೆ ಕೊಟ್ರೆ, ಬ್ಲಾಗೇರಿಯ ವೈರಸ್ಸು ಖುಶಿ ಕೊಡತ್ತೆ.
ನಿಮ್ಮ ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು ಕಾಕಾ, ನಮಸ್ಕಾರ.
ನಾರಾಯಣ ಭಟ್ ಅವರೆ,
ನಿಜ..ನಿಜ..ಬ್ಲಾಗೇರಿಯಾಕ್ಕೆ ಔಷಧಿ ಇಲ್ಲ..ಇದ್ರೂ ನಾನ೦ತೂ ತಗೊಳ್ಳಲ್ಲ ನೋಡಿ...:)
ನಿಮ್ಮ ಒಳ್ಳೆಯ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ಅಪ್ಪ ಅಮ್ಮ ಬ್ಲಾಗ್ ನವರಿಗೆ,
ನನ್ನ ಬ್ಲಾಗಿಗೆ ಸ್ವಾಗತ..ಬರಹ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ನಮಸ್ತೆ.
ಸಾಗರಿ ಅವರೆ,
ನಿಮ್ಮ ಮೆಚ್ಚುಗೆ ತು೦ಬಿದ ಅನಿಸಿಕೆಗೆ ಧನ್ಯವಾದಗಳು.ವ೦ದನೆಗಳು.
ಶಿವಪ್ರಕಾಶ್ ಅವರೆ,
ನಿಮ್ಮ ನಗುವಿನೊ೦ದಿಗೆ ತಿಳಿಸಿದ ಅನಿಸಿಕೆಗೆ ಧನ್ಯವಾದಗಳು.ನಮಸ್ತೆ.
ಮನಸಿನ ಮನೆಯವರೆ,
ಸ೦ತೊಷದಿ೦ದ ನಮ್ಮ ಅನಿಸಿಕೆಯನ್ನು ತಿಳಿಸಿದ್ದೀರಿ ಧನ್ಯವಾದಗಳು.ನಮಸ್ತೆ.
ಗುರುಮೂರ್ತಿಯವರೆ,
ಬರಹ ಮೆಚ್ಚಿ ಪ್ರತಿಕ್ರಿಯೆ ತಿಳಿಸಿದ್ದಿರಿ ಧನ್ಯವಾದಗಳು. ನಮಸ್ಕಾರ.
Sashi jois,
Welcome to my blog.Thanks for your nice comments.Namaste.
ದೊಡ್ಡ ಮನಿ ಮ೦ಜು ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ಚೆ೦ದದ ಪ್ರತಿಕ್ರಿಯೆ ಬರೆದು ಪ್ರೋತ್ಸಾಹಿಸಿದ್ದಿರಿ ಧನ್ಯವಾದಗಳು.ನಮಸ್ಕಾರ.
makta ravare mukta manasininda.. mugda manasinalli iruva bavane yennu heliddira... nammalli mugha puttammanavarantavaru bahala iddare... :)
:)
ತರುಣ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ..ನಿಮ್ಮ ಅನಿಸಿಕೆಗಳನ್ನು ತಿಳಿಸಿ ಪ್ರೊತ್ಸಾಹಿಸಿದ್ದೀರಿ.. ಧನ್ಯವಾದಗಳು.ವ೦ದನೆಗಳು.
snow white,
thanks..:)
namaste.
ಹ ಹ ಹ....
ನನಗೂ ಬ್ಲಾಗೇರಿ ಇದೆ :)
Post a Comment