Sunday, July 18, 2010

ಕಹಿ..ಸಿಹಿ.

ಸಮಯ ನೀಡಿದ  ಕಹಿ ಅನುಭವದಲ್ಲಿ,
ತನುಮನಗಳು ತಲ್ಲಣಗೊ೦ಡಿರುವಲ್ಲಿ,

ನಗುವಿನ ಚಿಲುಮೆ ಹಾರಿ ಹೋಗಿತ್ತು,
ಮನವು ಸ್ತಬ್ದಗೊ೦ಡಿತ್ತು
ಕಣ್ಣು ನಿಸ್ತೇಜವಾಗಿತ್ತು,
ನೋವು ವ್ಯಾಪಕವಾಗಿತ್ತು..

ಪ್ರೀತಿಯ ಹೃದಯ ದುಗುಡದಲಿ ನೊ೦ದಿತ್ತು,
ತನುಮನ ಧನ ಸಹಿತ  ಕಾರ್ಯದಲಿ ಮುಳುಗಿತ್ತು,
ಭಗವ೦ತನ ಕೃಪೆ ಅಗಾಧವಾಗಿತ್ತು,
ಅಪರಿಚಿತ ಕೈಗಳ ಸಹಾಯ ಒದಗಿ ಬ೦ದಿತ್ತು,


ನೋವಲ್ಲಿದ್ದರೂ ಮುದ್ದುರತ್ನಗಳ ಪ್ರೀತಿಯ ಬೆಳಕಿನಲ್ಲಿ,
ಮಮತೆಯಾ ಕರುಳುಗಳ ಸಾ೦ತ್ವಾನದ ನಡೆನುಡಿಗಳಲ್ಲಿ,
ತು೦ಬು ಮನಗಳ ಆತ್ಮೀಯ ಸವಿದನಿಗಳಲ್ಲಿ,

ವಾಸ್ತವದ ನೋವು ಸಹನೆಗೊ೦ಡಿಹುದು,
ನೋವಿನಾ ನೆನಪುಗಳು ದೂರ ಸಾಗಿಹುದು,
ಜೀವನದಿ,  ಉತ್ಸಾಹ, ಲವಲವಿಕೆ ಮತ್ತೆ ಮರುಕಳಿಸಿಹುದು.


                ............................


(ಅನೇಕ ದಿನಗಳಿ೦ದ ಬ್ಲೊಗ್ ನಿ೦ದ ದೂರವಿದ್ದೆ.  ಕ್ಷಮೆ ಇರಲಿ. ಮತ್ತೆ ನಿಮ್ಮೆಲ್ಲರ ಸು೦ದರ ಬರಹಗಳನ್ನು ಓದಲು ಬ೦ದಿದ್ದೇನೆ. ನಿಧಾನವಾಗಿ ಓದುತ್ತೇನೆ. )

55 comments:

sunaath said...

ಮನಮುಕ್ತಾ,
ಬಹಳ ದಿನಗಳಿಂದ ನಿಮ್ಮ ಪ್ರತೀಕ್ಷೆಯಲ್ಲಿದ್ದೆವು. ನೀವು ಮರಳಿದ್ದಕ್ಕಾಗಿ ಸಂತೋಷ ಹಾಗು ಸಮಾಧಾನವಾಗಿವೆ. ನೀವು ನೋವು ಉಂಡಿರುವದಾಗಿ ಹಾಗು ಆ ನೋವನ್ನು ಮರೆತಿರುವದಾಗಿ ನಿಮ್ಮ ಕವನ ಹೇಳುತ್ತದೆ. ನಿಮ್ಮ ನೋವೆಲ್ಲ ಮಾಯವಾಗಿ ನಲಿವು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.

Raghu said...

ಮನಮುಕ್ತಾ ಅವರೇ..ತುಂಬಾ ದಿನಗಳ ಸಿಹಿ-ಕಹಿಗಳ ನೆನಪುಗಳೊಂದಿಗೆ ಬಂದಿದ್ದೀರಿ..ಸ್ವಾಗತ ನಿಮಗೆ..
ಉಸ್ಸಾಹ ಹೀಗೆ ಇರಲಿ.ನೋವನ್ನು ಮರೆತು ನಗುವನ್ನು ಹಂಚುವ ಕೆಲಸ ಸಾಗಲಿ.
ನಿಮ್ಮವ,
ರಾಘು.

ಸವಿಗನಸು said...

manamukta,
bahaLa dinagala nantara chennagi barediddira....
keep writing..

ಸಾಗರಿ.. said...

ಎಷ್ಟೋ ದಿನಗಳ ನಂತರ ಮತ್ತೆ ದೀವಿಗೆಯ ದೀಪ ಉರಿಯುತ್ತಿದೆ.., ಸುಂದರ ಕವನದೊಂದಿಗೆ.

Narayan Bhat said...

ಕವನ "ಕಹಿ..ಸಿಹಿ" ಆಶಾದಾಯಕವಾಗಿದೆ....ಕವನ ಕಟ್ಟಿದ ರೀತಿ ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K said...

ಕಹಿಗಳಿಗೆ ಕಳೆದು ಮತ್ತೆ ಬ್ಲಾಗ್ ಸಿಹಿಗೆ ಮುಖಮಾದಿರುವಿರಿ. ಕಷ್ಟಗಳ ನಡುವೆ ಸಿಕ್ಕ ಸಾ೦ತ್ವನ ಧೈರ್ಯಗಳಿಂದ ಅಪಾರ ಆಶಾದಾಯಕ ಭಾವನೆಗಳು ಹೊರಟಿವೆ. ಭಾಳಿನ ಬುಟ್ಟಿಯಲ್ಲಿನ ಕಹಿ-ಸಿಹಿಯುಂಡು ಮುನ್ನುಗ್ಗುವದೇ ಜೀವನ.
ತಮ್ಮ ಆಗಮನದ ಹರುಷ ಹೊತ್ತ ಕವನ ಮನಸ್ಸನ್ನು ಮುದಗೊಳಿಸಿತು.

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಸಮಾದಾನ ಮಾಡುವ ದ್ವನಿ ಮತ್ತೆ ಸಿಕ್ಕಾಗ ನಗು ಜೊತೆಯಲ್ಲೆ ಬರುತ್ತೆ, ಕವನ ಚನ್ನಾಗಿದೆ.

Subrahmanya said...

ತಿಂಗಳೇ ಆಗಿತ್ತು. ಹೃತ್ಫೂರ್ವಕ ಸ್ವಾಗತ.

ಮನಮುಕ್ತಾ said...

ಸುನಾಥ್ ಕಾಕಾ,
ನಿಜಕ್ಕೂ ನಮ್ಮ ಕೈಯಲ್ಲಿ ಏನೂ ಇಲ್ಲ.. ಭಗವ೦ತನ ಕೃಪೆಯೊ೦ದೇ ಕಾಪಾಡುವುದು.ಅವನಿಚ್ಚೆಯ೦ತೆಯೇ ಎಲ್ಲಾ ನಡೆಯುವುದು.ಇದು ನಮ್ಮ ಕಣ್ಣಿಗೆ ಕಾಣಿಸದು.. ಕೇವಲ ಮನಸ್ಸಿಗೆ ಗೋಚರವಾಗುತ್ತದೆ.ಅನುಭವಕ್ಕೆ ಬರುತ್ತದೆ.
ನಿಮ್ಮ ಕಳಕಳಿ ತು೦ಬಿದ ಅನಿಸಿಕೆಗಳಿಗೆ ನಾನು ಕೃತಜ್ನೆ.ಧನ್ಯವಾದಗಳು.

ಮನಮುಕ್ತಾ said...

ರಾಘು ಅವರೆ,
ಹುರುಪು ತು೦ಬುವ೦ತಹ ವಾಕ್ಯಗಳನ್ನು ಬರೆದಿದ್ದೀರಿ..ತು೦ಬಾ ಧನ್ಯವಾದಗಳು.

ಮನಮುಕ್ತಾ said...

ಸವಿಗನಸು,
ನಿಮ್ಮ ಚೆ೦ದದ ಅಭಿಪ್ರಾಯಕ್ಕಾಗಿ ಧನ್ಯವಾದಗಳು.

ಮನಮುಕ್ತಾ said...

ಸಾಗರಿ,
ನಿಮ್ಮ ಭಾವಪೂರ್ಣ ಅನಿಸಿಕೆಗಳಿಗೆ ಧನ್ಯವಾದಗಳು.

ಮನಮುಕ್ತಾ said...

ನಾರಾಯಣ್ ಭಟ್ ಅವರೆ,
ನಿಮ್ಮ ಉತ್ಸಾಹ ತು೦ಬುವ೦ತಹ ಅಭಿಪ್ರಾಯಕ್ಕಾಗಿ ಧನ್ಯವಾದಗಳು.

ಮನಮುಕ್ತಾ said...

ಸೀತಾರಾಮ್ ಅವರೆ,
ಸ೦ತೋಷ ತರುವ೦ತಹ ಅಭಿಪ್ರಾಯ ತಿಳಿಸಿದ್ದೀರ..ಧನ್ಯವಾದಗಳು.

ಮನಮುಕ್ತಾ said...

ಶ್ರೀಕಾ೦ತ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ..ಉತ್ತಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು.

ಮನಮುಕ್ತಾ said...

ಸುಬ್ರ್ಹಮಣ್ಯ ಅವರೆ,
ತು೦ಬಾ ಧನ್ಯವಾದಗಳು.

ಮನಸಿನಮನೆಯವನು said...

ಮನಮುಕ್ತಾ ,

ಸಂತೋಷದ ವಿಷಯ..
ಚೆನ್ನಾಗಿದೆ ಕವಿತೆ..
ಶುಭಮಸ್ತು !!

ಮನಮುಕ್ತಾ said...

ಜ್ನಾನಾರ್ಪಣಾಮಸ್ತು,
ಅನ೦ತ ಧನ್ಯವಾದಗಳು.

ಜಲನಯನ said...

ಮನಮುಕ್ತಾ ನಿಮ್ಮನ್ನು ಮತ್ತೆ ನವೀಕೃತ ಹುಮ್ಮಸ್ಸಿನಲ್ಲಿ ಸ್ವಾಗತಿಸುತ್ತೇವೆ...ಅದಕ್ಕೆ ತಕ್ಕ ಹಾಗೆ ಒಂದು ವಿಚಾರಾಧೀನಮಾಡುವ ಕವನ....

ಮನಮುಕ್ತಾ said...

ಆಜಾದ್ ಭಾಯಿ,
ನಿಮ್ಮ ಕಳಕಳಿಪೂರಿತ ಸ್ವಾಗತಕ್ಕೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಮನಮುಕ್ತಾ
ಸುಂದರ ಕವನದೊಂದಿಗೆ ಆಗಮನ ಸಂತಸ ತಂದಿದೆ

ಮನಮುಕ್ತಾ said...

ಗುರುಮೂರ್ತಿಯವರೆ,
ಸ೦ತಸದಿ೦ದ ಮಾಡಿದ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಅನಂತ್ ರಾಜ್ said...

ನಿಮ್ಮ ಬ್ಲಾಗ್ ಗೆ ನಾ ಬರುವ ಹೊತ್ತಿಗೆ ನೀವು ನೋವು ಕಳೆದು ನಲಿವಿನ ಹಾದಿಯಲ್ಲಿ ಇದ್ದೀರಿ. ತು೦ಬಾ ಸ೦ತಸದ ವಿಷಯ.
ಶುಭಾಶಯಗಳು
ಅನ೦ತ್

ಮನಮುಕ್ತಾ said...

ಅನ೦ತರಾಜ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

nice poem..

all d best

Ittigecement said...

ಪ್ರೀತಿಯ ಮನಮುಕ್ತಾ..

ಕಹಿ ಇದ್ದರೆ ಸಿಹಿಯ ಸವಿ ಮತ್ತಷ್ಟು ಸವಿಯ ಬಹುದು..

ಚಂದದ ಕವನಕ್ಕೆ ಅಭಿನಂದನೆಗಳು..

Harish Athreya said...

ಆತ್ಮೀಯ
ವಾಸ್ತವದ ನೋವು ಸಹನೆಗೊ೦ಡಿಹುದು,
ನೋವಿನಾ ನೆನಪುಗಳು ದೂರವಾಗುತ್ತಿಹುದು,
ಜೀವನದಿ ಉತ್ಸಾಹ ಮತ್ತೆ ಮರುಕಳಿಸಿಹುದು.

ಈ ಮೇಲೆಇನ ಸಾಲುಗಳು ಏಕೋ ತು೦ಬಾ ಕಾಡಿಬಿಟ್ಟಿತು.

ನೋವು ಮರೆತು ಮತ್ತೆ ಜೀವಸೆಲೆಯನ್ನುಕ್ಕಿಸುತ ಬ೦ದ ನಿಮಗೆ ಸ್ವಾಗತ.ನಿಮ್ಮ ಈ ಕವನದಲ್ಲಿ ಹೆಚ್ಚು ನೋವು ಕಾಣುತ್ತಿದೆ. ಏನೇ ಇರಲಿ, ಮತ್ತೆ ಮನ ಮುಕ್ತ ಮುಕ್ತವಾಗಿ ನಮ್ಮೊ೦ದಿಗೆ ಬರಹಗಳ ಮೂಲಕ ನಗುತಿರಲಿ.

ನಾಗರಾಜ್ .ಕೆ (NRK) said...

ನೋವು ನಮಗೆ ಸಂತೋಷದ ಸಿಹಿಯನ್ನ ತಿಳಿಸಿಕೊಡುವಲ್ಲಿ ಸಪಲತೆ ಕಂಡಿರುತ್ತದೆ.
ನೋವು ಮರೆಯಾಗಿ ಸಂತಸದ ಮೊದಲ ಕಿರಣ ನಿಮ್ಮದಾಗಲಿ.
ಬಹು ದಿನಗಳ ನಂತರ ಬಂದಿದ್ದೀರ, ಸ್ವಾಗತ.
ಮತ್ತೆ ಸಂತಸ, ನಗು ಶುರುವಾಗಲಿ.

Uday Hegde said...

Nice one...enjoyed it.

Guruprasad . Sringeri said...

ಭಗವಂತನ ಅಗಾಧವಾದ ಕೃಪೆಯು ನಿಮ್ಮೆಲ್ಲ ದುಃಖಗಳನ್ನು ದೂರಮಾಡಲಿ, ಜೀವನದ ಕಹಿ ದಿನಗಳು ಕಳೆದು ಸಿಹಿ ದಿನಗಳು ಎದಿರಾಗಲಿ ಎಂದು ಹಾರೈಸುವೆ.
ಮೊದಲ ಬಾರಿಗೆ "ಬೆಳದಿಂಗಳಿಗೆ" ಬಂದಿರುವಿರಿ ನಿಮಗೆ ಸ್ವಾಗತ. ಹೀಗೇ ಬರುತ್ತಿರಿ...

shridhar said...

ಕಹಿ .. ಸಿಹಿಯ ಮಿಶ್ರಣ ಚೆನ್ನಾಗಿದೆ ..
ದಿವಿಗೆ ಸದಾ ಕಾಲ ಉರಿಯುತ್ತಿರಲಿ ,

ಬನ್ನಿ ನಮ್ಮ ಗೂಡಿಗೊಮ್ಮೆ . :)
ಶ್ರೀಧರ ಭಟ್ಟ

Ramesh said...

ಮನಮುಕ್ತಾ - ಜೀವನದಲ್ಲಿ ನೋವು ನಲಿವುಗಳು ಸಹಜ. ಯಾವ ರೀತಿಯ ನೋವನ್ನು ನೀವು ಅನುಭವಿಸಿದಿರಿಯೆಂಬುದು ನಮಗೆ ತಿಳಿದಿಲ್ಲ.. ಆದರೆ ಆ ನೋವುಗಳನ್ನು ಗೆದ್ದು ಬಂದು ಮತ್ತೆ ಹುಮ್ಮಸ್ಸಿನಿಂದಿರುವುದು ಮನುಜ ಧರ್ಮ.

"ನೋವು ನಂದಿದ ದೀಪವಾಗಿರಲಿ, ನಗುವು ನಂದಾ ದೀಪವಾಗಿರಲಿ" .. ಹೀಗೆ ಬರೆಯುತ್ತಿರಿ ಹಾಗು ನಮ್ಮ ಬ್ಲೊಗ್ ಮನೆಗೆ ಬರುತ್ತಿರಿ.. ಶುಭವಾಗಲಿ..

M@he$h said...

********************************
http://bhuminavilu.blogspot.com/
********************************

Ishwar Jakkali said...

Good one ....
Nicely written...
Pada mattu bhavanegaLu sundara besuge..

ಮನಮುಕ್ತಾ said...

ವಸ೦ತ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.. ಪ್ರೋತ್ಸಾಹಕ್ಕೆ ಧನ್ಯವಾದಗಳು

ಮನಮುಕ್ತಾ said...

ಚುಕ್ಕಿಚಿತ್ತಾರ,
ಶುಭ ಕೊರಿ ಪ್ರೋತ್ಸಾಹ ನೀಡಿರುದಕ್ಕೆ ಧನ್ಯವಾದಗಳು.

ಮನಮುಕ್ತಾ said...

ಪ್ರಕಾಶಣ್ಣ,
ನಿಜ..ಕಹಿ ಸಿಹಿಯ ಸವಿಯನ್ನು ಹೆಚ್ಚಿಸುತ್ತದೆ...ಪ್ರೋತ್ಸಾಹ ಹೀಗೆಯೆ ಇರಲಿ.. ಧನ್ಯವಾದಗಳು.

ಮನಮುಕ್ತಾ said...

ಹರೀಶ್ ಅವರೆ,
ನನ್ನ ಬ್ಲಾಗಿಗೆ ಸ್ವಗತ.ನಿಮ್ಮ ಮುಕ್ತ ಅನಿಸಿಕೆ ಹಾಗು ಸ೦ತಸದ ಹಾರೈಕೆಗೆ ಧನ್ಯವಾದಗಳು.

ಮನಮುಕ್ತಾ said...

ನಾಗರಾಜ್ ಅವರೆ,
ನಿಮ್ಮ ಸು೦ದರ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಉದಯ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರೋತ್ಸಾಹಕ್ಕೆ
ಧನ್ಯವಾದಗಳು.

ಮನಮುಕ್ತಾ said...

ಗುರುಪ್ರಸಾದ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು.

ಮನಮುಕ್ತಾ said...

ಶ್ರೀಧರ್ ಅವರೆ,
ನಿಮ್ಮ ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ರಮೇಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಹಾರೈಕೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಮಹೇಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ಈಶ್ವರ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.

Shweta said...

Manamukta,

maamu kannadalli bareyade eruvadakke kshame irali,


tumba manamuttuvantide kavana.nimma haleya post galellavanna oduttiddene..

thank you....

prabhamani nagaraja said...

ನಿಮ್ಮ 'ಕಹಿ-ಸಿಹಿ'ಯಲ್ಲಿ ಜೀವನದಲ್ಲಿ ಕಹಿಯನ್ನು ಅನುಭವಿಸಿದ ನ೦ತರ ಸಿಹಿಯತ್ತ ಚಲಿಸುವ ರೀತಿ ಚೆನ್ನಾಗಿದೆ. ಸಮಭಾವವನ್ನು ಸಾರುವ ಕವನ. ನನ್ನ ಬ್ಲಾಗ್ ಗೊಮ್ಮೆ ಭೇಟಿ ಕೊಡಿ.

ಸುಧೇಶ್ ಶೆಟ್ಟಿ said...

thumba chennagittu kavana.... bareetha iri:)

Shiv said...

ಮನಮುಕ್ತಾ,

ಮನಕ್ಕೆ ತಾಟಿದವು ನಿಮ್ಮ ಸಾಲುಗಳು.

ಹೀಗೆಯೇ ಜೀವನದಿ ಉತ್ಸಾಹ ನಳನಳಿಸುತ್ತಿರಲಿ

ಮನಮುಕ್ತಾ said...

ಶ್ವೇತ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಮೆಚ್ಚುಗೆಗೆ ಧನ್ಯವಾದಗಳು. ಬರುತ್ತಿರಿ.

ಮನಮುಕ್ತಾ said...

ಪ್ರಭಾಮಣಿಯವರೆ,
ನನ್ನ ಬ್ಲಾಗಿಗೆ ಸ್ವಾಗತ.ಅರ್ಥೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಬರುತ್ತಿರಿ.

ಮನಮುಕ್ತಾ said...

ಸುಧೇಶ್ ಅವರೆ,
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಬರುತ್ತಿರಿ.

ಮನಮುಕ್ತಾ said...

ಶಿವ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.ಶುಭ ಹಾರೈಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ.

KalavathiMadhusudan said...

ಮನಮುಕ್ತರವರೆ, ನಿಮ್ಮ ಸಿಹಿ ಕಹಿ ಮತ್ತು ಸಮಯದ ಪಯಣ ಕವನಗಳು ಸೊಗಸಾಗಿವೆ..

--

kalavathi G.S blog links

KalavathiMadhusudan said...

ಮನಮುಕ್ತರವರೆ, ನಿಮ್ಮ ಸಿಹಿ ಕಹಿ ಮತ್ತು ಸಮಯದ ಪಯಣ ಕವನಗಳು ಸೊಗಸಾಗಿವೆ..

--

kalavathi G.S blog links