Sunday, January 17, 2010

ಬ೦ಧ

ಹೀಗೆಯೇ ಬ೦ದೆ, ಕಣ್ಣರಳಿಸಿ ನೋಡಿದೆ,
ಇಲ್ಲಿಯ ಮೆರುಗ ನೋಡಿ ಬೆರಗಾದೆ,


ಹೊಸ ಹೊಸ ಮಾಹಿತಿಗಳು, ನವಿರಾದ  ಕವಿತೆಗಳು,
ಸುಭಾಷಿತ  ರತ್ನಗಳು, ಮನಮೋಹಕ  ಚಿತ್ರಗಳು,
ಬಗೆ ಬಗೆಯ ಹೊಸ ರುಚಿಗಳು, ಹಾಸ್ಯದ ನಗೆ ಬುಗ್ಗೆಗಳು,
ಕಥೆ, ಕಿರುಗಥೆಗಳು, ವ್ಯ೦ಗ್ಯಚಿತ್ರಗಳು,


ಏನು೦ಟು ಏನಿಲ್ಲ ? ಸ೦ಭ್ರಮವೆ ಸುತ್ತೆಲ್ಲಾ,
ಅನೇಕರು  ಬ೦ದರು, ನನ್ನ ಸ್ವಾಗತಿಸಿದರು,
ಕುಳ್ಳಿರಿಸಿ ಮಣೆ ಹಾಕಿದರು,
ಪ್ರೋತ್ಸಾಹದ ತುತ್ತ ನೀಡಿದರು,


ಇಲ್ಲಿ ಮನ ಎಲ್ಲರದ್ದೂ  ಮುಕ್ತ,
ಬರೆದು ತಿಳಿಸುವರು ಅವರವರಿಗೆ ಸೂಕ್ತ,
ಮತ್ತೆ ಮತ್ತೆ ಬರುವರು, ಪ್ರತಿಕ್ರಿಯೆಯ ನೀಡುವರು,
ಮಾರ್ಗ ತೋರಿ ಮು೦ದೆ ಮು೦ದೆ ನಡೆಸುವರು,


ನೋಡಿಲ್ಲ,  ಮಾತಾಡಿಲ್ಲ,
ಯಾರು ಯಾರೆ೦ದು ನಾ ಕಾಣೆನಲ್ಲ,
ಆದರೂ ಇಲ್ಲಿದೆ ಪರಸ್ಪರ ಬ೦ಧ,
ಅದುವೆ ಅಲ್ಲವೆ ನಮ್ಮ ಈ ಬ್ಲಾಗ್ ಬ೦ಧ?

25 comments:

Guruprasad said...

ಬ್ಲಾಗ್ ಬಂದನ, ಅನುಬಂದನ
ಇದರ ಬಗೆಗಿನ ನಿಮ್ಮ ಕವನಾನುಬಂದನ
ತಂದಿದೆ ನಮಗೆಲ್ಲ ಸಂತಸದ ಆನಂದನ ....

ಹಾ ಹಾ,, ತುಂಬ ಚೆನ್ನಾಗಿ ಇದೆ...ಬ್ಲಾಗ್ ಬಗ್ಗೆ ನಿಮ್ಮ ಕವನ ,,,,Good keep it up

ಆನಂದ said...

ಮನಮುಕ್ತಾ,
ಸರಿಯಾಗಿ ಸವಿಯಾಗಿ ಬರೆದಿದ್ದೀರಿ.
ನಾನು ಕೂಡ ಅಚಾನಕ್ಕಾಗಿ ಈ ಬ್ಲಾಗ್ ಲೋಕಕ್ಕೆ ಬಂದೆ.
ಮುಖತಃ‌ ನೋಡಿರದಿದ್ದರೂ, ಇಲ್ಲಿ ಕೆಲವರು ಅದೆಷ್ಟು ಆತ್ಮೀಯ ಅಂತ ಅನ್ನಿಸಿಬಿಟ್ಟಿದ್ದಾರಲ್ಲವೇ?

ಶಿವಪ್ರಕಾಶ್ said...

neevu heliddu nija ri.
neevu heluva maatugalu ella blogigarigoo anvahisuttave... :)

Ittigecement said...

ಮನಮುಕ್ತಾರವರೆ...

ನನ್ನ ಮನದಲ್ಲಿದುದ್ದನ್ನೇ ಬರೆದಿದ್ದೀರಿ..

ನಾನಂತೂ ಇವೆಲ್ಲದುದರಿಂದ ಬಹಳ ದೂರ ಇದ್ದೆ..
ಇಂದು ಬಹಳ ಸ್ನೇಹಿತರು...
ಸಹೋದರ, ಸಹೋದರಿಯರು..
ಆತ್ಮೀಯರು ಈ ಬ್ಲಾಗ್ ಲೋಕದಿಂದ ಸಿಕ್ಕಿದ್ದಾರೆ...

ಅಷ್ಟೇಕೆ ನನಗೆ ಕೆಲವು ಕೆಲಸಗಳೂ ಕೂಡ ಸಿಕ್ಕಿದೆ...

ಇನೂ ಮುಖವನ್ನೇ ನೋಡದ ಅನೇಕ ಸ್ನೇಹಿತರು ನನ್ನ ಬಗ್ಗೆ ತಮ್ಮ ಬ್ಲಾಗಿನಲ್ಲಿ ಬರೆಯುತ್ತಾರೆ..!

ಈ ಬ್ಲಾಗ್ ಲೋಕದ ಆತ್ಮೀಯತೆ ಬಗ್ಗೆ ಎಷ್ಟು ಹೇಳಿದರೂ ಸಾಲದು...

ಚಂದದ ಕವಿತೆ..
ಅದರ ಭಾವ ಪೂರ್ಣವಾದ ಶಬ್ಧಗಳಿಗೆ ಅಭಿನಂದನೆಗಳು...

ಚುಕ್ಕಿಚಿತ್ತಾರ said...

ನಿಜಾಪ್ಪ.....
ಮುಖ ಪರಿಚಯವೇ ಇರದೆ, ಮಾತೇ ಆಡಿರದೇ....
ಬರೀ ಅಕ್ಷರಗಳ ನಡುವೆ ಭಾವ ಬ೦ಧ ಕಟ್ಟಿಕೊ೦ಡಿದ್ದು..
ಒಬ್ಬರಿಗೊಬ್ಬರು ಹಾಡಿದ್ದು, ಹೊಗಳಿದ್ದು, ಸ೦ತೈಸಿದ್ದು....
ಯಾವ ಜನ್ಮದ ಋಣಾನುಬ೦ಧ....!!!!!
ಯೋಚನೆಗೆ ನಿಲುಕುತ್ತಿಲ್ಲ....

Subrahmanya said...

ನಾವೆಲ್ಲರೂ ಕೋರಸ್ ನಲ್ಲಿ ಹೇಳಬೇಕಾದ್ದನ್ನು ನೀವೊಬ್ಬರೇ ಭಾವಪೂರ್ಣವಾಗಿ ಹೇಳಿದ್ದೀರಿ.... ಮಾತಲ್ಲಿ ಹೇಗೂ ಹೇಳಿಬಿಡಬಹುದು..ಆದರೆ ಕವನವಾಗಿಸುವುದು ??! ...ತುಂಬಾ ಚೆನ್ನಾಗಿದೆ.

sunaath said...

ಮನಮುಕ್ತಾ,
ನಮ್ಮೆಲ್ಲರನ್ನು ಬಂಧಿಸಿದ ಈ ಬ್ಲಾ^ಗ್ ಬಂಧನವನ್ನು ಸೊಗಸಾಗಿ
ಬಣ್ಣಿಸಿದ್ದೀರಿ.

ಸಾಗರದಾಚೆಯ ಇಂಚರ said...

ಮನಮುಕ್ತ ನಿಜ
ಬ್ಲಾಗ್ ಪ್ರಪಂಚ ಒಂದು ದೊಡ್ಡ ಕುಟುಂಬ ದಂತೆ
ಪ್ರೀತಿ ವಿಶ್ವಾಸ ಕೊಡುವ ಒಂದು ಆತ್ಮೀಯ ಸ್ನೇಹಿತನಂತೆ
ತುಂಬಾ ಚೆನ್ನಾಗಿ ಬರೆದಿದ್ದಿರಾ

ಸವಿಗನಸು said...

ಮನಮುಕ್ತಾ,
ಯಾವ ಜನ್ಮದ ಅನುಬ೦ಧ ಈ ಬ್ಲಾಗ್ ಬಂಧ....
ಬಹಳ ಸ್ನೇಹಿತರು ಸಿಕ್ಕಿದ್ದಾರೆ ನನಗಂತೂ....
ಬ್ಲಾಗ್ ಬಂಧನದ ಕವನ ಬಹಳ ಚೆನ್ನಾಗಿದೆ...

Nisha said...

nija, idu blogigarellara hrudayada mathu.

Raghu said...

:) ಮನಮುಕ್ತಾ ಅವರೇ ಏನ್ ಹೇಳ್ಬೇಕು ಅಂತ ಗೊತ್ತ್ ಆಗ್ತಾ ಇಲ್ಲ... ಎಲ್ಲರ ಅಭಿಪ್ರಾಯದಂತೆ ಯಾರು ಯಾರನ್ನು ನೋಡಿಲ್ಲ ಮಾತಾಡಿಲ್ಲ ಅದರೂ ಅದೆನೋ ಸಂಬಂಥ ನಮ್ಮನೆಲ್ಲ ಒಟ್ಟುಗೂಡಿಸಿದೆ...ಬ್ಲಾಗ್ ದುನಿಯಾದಲ್ಲಿ ನಾವೆಲ್ಲ ಅಕ್ಕ ಪಕ್ಕದ ಮನೆಯವರು, ಬಂಧು-ಮಿತ್ರರು... ಒಬ್ಬರ ಕೈನ್ನು ಇನ್ನೊಬ್ಬರು ಹಿಡಿದು ಜೊತೆ ಜೊತೆಗೆ ಮುಂದೆ ಸಾಗ್ತಾ ಇರೋ ಯಾತ್ರಿಕರು...
ಒಟ್ಟಿನಲ್ಲಿ ಮನಸ್ಸುಗಳ ಜೊತೆ ಮಾತನಾಡುವ ಸ್ನೇಹಿತರು...!!
ನಿಮ್ಮವ,
ರಾಘು.

ದೀಪಸ್ಮಿತಾ said...

ಬ್ಲಾಗಿಂದಲೇ ಎಷ್ಟೊಂದು ಸ್ನೇಹಿತರು ಸಿಕ್ಕಿದ್ದಾರೆ. ನಮ್ಮ ಭಾವನೆಗಳು, ಚಿತ್ರಗಳು, ಕವನಗಳು, ಹೀಗೆ ಎಲ್ಲದಕ್ಕೂ ಓದುಗರಿದ್ದಾರೆ, ಓದಿ ವಿಮರ್ಶಿಸಿ ಪ್ರೋತ್ಸಾಹಿಸುತ್ತಾರೆ. ನಿಮ್ಮ ಕವನ ಅರ್ಥಪೂರ್ಣ

ಮನದಾಳದಿಂದ............ said...

ನಮ್ಮೆಲ್ಲರ ಬ್ಲಾಗ್ ಬಂಧ,
ಏನೋ ಅರಿಯದ ಅನುಬಂಧ,
ಅದ ವರ್ಣಿಸಿದಿರಿ ನೀವು ಬಲು ಚಂದ,
ಓದಿದ ನನ್ನ ಮನ ಆನಂದ!
wonderful!
keep writing ಮನಮುಕ್ತಾ ಅವರೇ.

Snow White said...

sundaravaada haagu artagarbitha saalugalu .. :)nijakku chennagide nimma kavana :)

ಮನಮುಕ್ತಾ said...

ಬ್ಲಾಗ್ ಲೋಕದಲ್ಲಿ ಅನೇಕ ಮಾರ್ಗದರ್ಶನಗಳು,ಪ್ರೋತ್ಸಾಹಕರ
ಪ್ರತಿಕ್ರಿಯೆಗಳು,ಒಳ್ಳೊಳ್ಳೆ ವಿಷಯಗಳ ಮ೦ಡನೆ,ಸಲ್ಲದ ವಿಷಯದ ಖ೦ಡನೆ,ಎಲ್ಲ ಇರುವುದು ತು೦ಬಾ ಖುಶಿ ತ೦ದಿತು.ಹಾಗಾಗಿಯೇ ಈ ಕವನ ಬರೆದೆ. ಅಕ್ಷರಗಳಲ್ಲಿಯ ಈ ನಿರ್ಮಲ ಭಾವನೆಯ ಬ೦ಧ ನಿರ೦ತರವಾಗಿ ನಿರ್ಮಲವಾಗಿಯೇ ಇರಲಿ ಎ೦ದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಬ್ಲಾಗ್ ಬಗ್ಗೆ ನನ್ನ ಮನದ ಭಾವನೆಯೇ ನಿಮ್ಮೆಲ್ಲರ ಭಾವನೆ ಎ೦ದು ತಿಳಿದು ಸ೦ತೋಷವಾಯಿತು.

ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಹೄತ್ಪೂರ್ವಕ ಧನ್ಯವಾದಗಳು . ನಿಮ್ಮೆಲ್ಲರ ಆದರ, ಅಭಿಮಾನ ನನ್ನ ಬರಹದ ಮೇಲೆ ಸದಾ ಇರಲಿ.ಮು೦ದೆಯೂ ಪ್ರತಿಕ್ರಿಯಿಸಿ, ಪ್ರೋತ್ಸಾಹ ನೀಡುತ್ತಿರಿ.
ವ೦ದನೆಗಳು.

Uma Bhat said...

ಈ ಅನುಬಂಧ ಎಷ್ಟು ಖುಶಿ ಕೊಡುತ್ತವೆ ಅಲ್ಲವೇ?

ಮನಸಿನಮನೆಯವನು said...

ನಮಸ್ತೆ.,

ನಿಮ್ಮ ಕೈಚಳಕದಲ್ಲಿ ಬ್ಲಾಗಿನ ಬಂಧ ಚೆನ್ನಾಗಿ ಮೂಡಿಬಂದಿದೆ..
ನಿಮ್ಮ ಜೊತೆ ಬ್ಲಾಗ್ ಬಂಧನದಲ್ಲಿ ನಾನು ಕೊಂಡಿಯಾಗುವ
ಆಸೆ..

ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

ದಿನಕರ ಮೊಗೇರ said...

ಮನಮುಕ್ತಾ,
ಬ್ಲಾಗ್ ಬಂಧದ ನಿಜವಾದ ಅನುಭವ ಪಡೆದವನು ನಾನು...... ಏನೋ ಬರೆಯುತ್ತಾ ಇದ್ದೆ....... ಕುವೈತ್ ನಿಂದ ಅಜ್ಜ್ಯದ್ ಸರ್ ನನ್ನನ್ನು ಎಷ್ಟು ಪ್ರೀತಿಯಿಂದ ನೋಡಿದರು ಎಂದರೆ ..... ಯಾವುದೋ ಜನ್ಮದಲ್ಲಿ ಅಣ್ಣನ ಹಾಗೆ,................. ಈಗಲೂ ಪ್ರಕಾಶಣ್ಣ, ಶಿವೂ ಸರ್, ಸಂತೋಷವನ್ನ ಹಂಚಿಕೊಳ್ಳುತ್ತಾರೆ ಫೋನ್ ನಲ್ಲಿ...... ಇದು ಬ್ಲಾಗ್ ಬಂಧ ........

ಮನಮುಕ್ತಾ said...

ಉಮಾ ಭಟ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.ಅಕ್ಶರಗಳ ಬ೦ಧ ನಿರ್ಮಲವಾಗಿದ್ದಲ್ಲಿ ಮನಕ್ಕೆ ಸ೦ತೋಷವೆ ಅಲ್ಲವೆ? ಬರುತ್ತಿರಿ..

ಮನಮುಕ್ತಾ said...

ಗುರುದೆಸೆ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಈಗಾಗಲೆ ನೀವು ಬ್ಲಾಗ್ ಲೋಕಕ್ಕೆ ಬ೦ದಿದ್ದೀರ,ನನ್ನ ಬ್ಲಾಗಿಗೂ ಬ೦ದಿದೀರ ಅ೦ದ ಮೇಲೆ ಬ್ಲಾಗ್ ಬ೦ಧದಲ್ಲಿ ನೀವು ಇದ್ದೀರ ಅಲ್ಲವೇ? ನಿಮ್ಮ ಬ್ಲಾಗ್ ನೋಡಿದೆ. ಬರಹಗಳನ್ನು ಬರೆಯಿರಿ.ಪ್ರತಿಕ್ರಿಯೆಗಳನ್ನು ಕೊಡುತ್ತೇವೆ. ನಮ್ಮ ಬರಹಗಳಿಗೂ ಪ್ರತಿಕ್ರಿಯೆ ಕೊಟ್ಟು ಪ್ರೋತ್ಸಾಹ ಕೊಡಿ.ಹೀಗೆಯೇ ಬ್ಲಾಗ್ ಬ೦ಧ ಮು೦ದುವರೆಯಲಿ.
ಧನ್ಯವಾದಗಳು. ಪ್ರೋತ್ಸಾಹ ಕೊಡುತ್ತಿರಿ.

ಮನಮುಕ್ತಾ said...

ದಿನಕರ ಮೋಗೇರ ಅವರೆ,
ಬ್ಲಾಗ್ ಬ೦ಧದ ನಿಜವಾದ ಅನುಭವ ನಿಮಗಿದೆ ಎ೦ದಿರಿ.ಸ೦ತೋಷ.ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

Jagadeesh Balehadda said...

ಮನಮುಕ್ತಾ ರವರೇ ನಿಮ್ಮ ಬ್ಲಾಗ ಓದಿದೊಡನೆ ಒಂದಿಷ್ಟು ಸಾಲು ಟೈಪಿಸಿದ್ದೇನೆ. ಒಂದ್ಸಲ ಓದಿ ನಕ್ಕುಬಿಡಿ.
*************
ಬರೆವ ಮನದ
ಹಂಬಲಕೆ
ಸಾಥು ಕೊಟ್ಟಿದ್ದು ಬ್ಲಾಗು.
ನೀ
ಬರೆದವನ
ಗುರ್ತಿಲ್ಲದಿದ್ದರೂ
ಖುಷಿಯಾದಲ್ಲಿ
ಅದಕೆ
ಕಮೆಂಟಿಸುತ್ತಸಾಗು.
**************

ಮನಮುಕ್ತಾ said...

ಹಹಹ..
ನನ್ನ ಬ್ಲಾಗಿಗೆ ಸ್ವಾಗತ..ಜಗದೀಶ್ ಅವರೆ,
ನಿಮ್ಮ ಕವನದ ಕಮೆ೦ಟ್ಸಿಗಾಗಿ ಧನ್ಯವಾದಗಳು.
ಮತ್ತೆ ಬರುತ್ತಿರಿ..

ವನಿತಾ / Vanitha said...

ನಿಜ ಮನಮುಕ್ತ ಅವರೇ,
ನಮ್ಮ ಮನಸ್ಸಿನಲ್ಲಿ ಇದ್ದುದನ್ನ ಕವನ ರೂಪ ದಲ್ಲಿ ಬರೆದಿದ್ದೀರಿ. ತುಂಬಾ ಚನ್ನಾಗಿದೆ, hats off to u :-)
ನಿಜವಾಗಿಯೂ ಇಲ್ಲಿ ಯಾರ ಮುಖವನ್ನು ಇದುವರಗೆ ನೋಡಿಲ್ಲವಾದರೂ, ಎಲ್ಲರೂ ತುಂಬಾ ತುಂಬಾ ಆತ್ಮೀಯರು:)

ಸೀತಾರಾಮ. ಕೆ. / SITARAM.K said...

ಮುಕ್ತ ಮನಗಳ
ಸೂಕ್ತ ಊಕ್ತಿಗಳ,
ಮಾಹಿತಿಗಳ ತಾಣದ ಬ್ಲೊಗ್-ನ ತಮ್ಮ ಪಯಣದ ಕವನ ರೂಪ ಎಲ್ಲರ ಮನದ ಮಾತುಗಳು. ಕವನ ಸು೦ದರವಾಗಿದೆ.